SIT ಕಚೇರಿಯ ಶೌಚಾಲಯ ಗಬ್ಬು ವಾಸನೆ ಬರುತ್ತೆ ಅಂದ ಪ್ರಜ್ವಲ್ ರೇವಣ್ಣ!

Prajwal Revanna Case: ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಪ್ರಜ್ವಲ್‌ ರೇವಣ್ಣನನ್ನು  ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌ 6 ದಿನದ ಮಟ್ಟಿಗೆ ವಿಶೇಷ ತನಿಖಾ ತಂಡದ (SIT) ಕಸ್ಟಡಿಗೆ ನೀಡಿದೆ.

ಸದ್ಯ ಪ್ರಜ್ವಲ್ ರೇವಣ್ಣನನ್ನು ಸಿಐಡಿ ಕಚೇರಿಯಲ್ಲಿರಿಸಿಕೊಂಡಿರುವ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ಶುರು ಮಾಡಿದೆ. ಈ ವೇಳೆ ನ್ಯಾಯಾದೀಶರು ಪ್ರಜ್ವಲ್ ರೇವಣ್ಣನನ್ನು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲಿಗೆ ನಿಮ್ಮ ಹೆಸರೇನು ಎಂದು ಪ್ರಜ್ವಲ್‌ಗೆ ಜಡ್ಜ್ ಪ್ರಶ್ನಿಸಿದ್ದಾರೆ. ನಂತರ ಎಲ್ಲಿ ನಿಮ್ಮನ್ನು ವಶಕ್ಕೆ ಪಡೆಯಲಾಯಿತು? ಎಂದು ಕೇಳಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ನನ್ನನ್ನು ವಶಕ್ಕೆ ಪಡೆದರು ಎಂದು ಪ್ರಜ್ವಲ್ ತಿಳಿಸಿದ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *