ಸರ್ಕಾರಿ ಉದ್ಯೋಗವಕಾಶ, ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,202 ಹುದ್ದೆಗಳಿ ಅರ್ಜಿ ಆಹ್ವಾನ

ಸರ್ಕಾರಿ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕರ ಕನಸು. ಅದರಲ್ಲಿಯೂ ಹೆಚ್ಚಿನವರು ಸರ್ಕಾರಿ ಕೆಲಸ ಪಡೆಯಬೇಕು ಎನ್ನುವ ಆಕಾಂಕ್ಷೆ ಹೊಂದಿರುತ್ತಾರೆ. ಅಂತಹವರಿಗೆ ಇಲ್ಲಿದೆ ಸುವರ್ಣ ಅವಕಾಶ. ರೈಲ್ವೆ ಇಲಾಖೆ ಖಾಲಿ ಇರುವ ವಿವಿಧ 1,202 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಗ್ನೇಯ ರೈಲ್ವೆಯ ನೇಮಕಾತಿ ಕೋಶ ಖಾಲಿ ಇರುವ ಲೋಕೋ ಪೈಲಟ್‌ ಮತ್ತು ಟ್ರೈನ್ಸ್‌ ಮ್ಯಾನೇಜರ್‌ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ, ಐಟಿಐ, ಪದವಿ ತೇರ್ಗಡೆಯಾದವರನ್ನು ನೇಮಿಸಿಕೊಳ್ಳುತ್ತಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಜೂನ್‌ 12 ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ

1.ಅಸಿಸ್ಟಂಟ್‌ ಲೋಕೋ ಪೈಲಟ್‌ – 827 ಹುದ್ದೆಗಳು

2.ಟ್ರೈನ್ಸ್‌ ಮ್ಯಾನೇಜರ್‌ (ಗೂಡ್ಸ್‌ ಗಾರ್ಡ್‌) – 375 ಹುದ್ದೆಗಳು

ವಿದ್ಯಾರ್ಹತೆ: 1.ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗೆ: ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಜತೆಗೆ ಐಟಿಐ ಪಾಸ್‌ ಮಾಡಿರಬೇಕು ಅಥವಾ ಅಂಗೀಕೃತ ಸಂಸ್ಥೆಯಿಂದ ಎಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.

2.ಟ್ರೈನ್ಸ್‌ ಮ್ಯಾನೇಜರ್‌ (ಗೂಡ್ಸ್‌ ಗಾರ್ಡ್‌) ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ವಯೋಮಿತಿ

ಕನಿಷ್ಠ ವಯಸ್ಸು 18 ವರ್ಷ

ಗರಿಷ್ಠ ವಯಸ್ಸು 42 ವರ್ಷ

ಅರ್ಜಿ ಶುಲ್ಕ: ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ /ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಯಾರಿಗೂ ಅರ್ಜಿ ಶುಲ್ಕವಿಲ್ಲ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ವೇತನ ಶ್ರೇಣಿ: ಆಯ್ಕೆಯಾದವರಿಗೆ 5,200 ರು. – 20,200 ರು. ಮಾಸಿಕ ವೇತನ ದೊರೆಯಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *