Reliance Power: 800 ಕೋಟಿ ಸಾಲ ತೀರಿಸಿ ಸಾಲ ಮುಕ್ತವಾದ ರಿಲಯನ್ಸ್ ಪವರ್; ಹಿಂದಿನ ಖ್ಯಾತಿ ಮರಳಿ ಪಡೆದ ಅನಿಲ್ ಅಂಬಾನಿ

ಸಹೋದರ ಮುಖೇಶ್ ಅಂಬಾನಿಯಂತೆಯೇ (Mukhesh Ambani) ಉದ್ಯಮದಲ್ಲಿ ಹೆಸರು ಗಳಿಸಿದ್ದ ಅನಿಲ್ ಅಂಬಾನಿ (Anil Ambani) ಕೆಲವೊಂದು ಏರಿಳಿತಗಳನ್ನು ತಮ್ಮ ವ್ಯವಹಾರ ಕ್ಷೇತ್ರದಲ್ಲಿ ಎದುರಿಸಿದ್ದರು. ಹೆಚ್ಚಿನ ಸಾಲಗಳಿಂದ ಜರ್ಜರಿತರಾಗಿದ್ದರು. ಆದರೀಗ ರಿಲಯನ್ಸ್ ಪವರ್‌ನೊಂದಿಗೆ (Reliance Power) ಇನ್ನಷ್ಟು ಬಲಶಾಲಿಯಾಗಿ ಮಾರುಕಟ್ಟೆಗೆ ಪುನರಾಗಮನ ಮಾಡುತ್ತಿರುವ ಅನಿಲ್ ಅಂಬಾನಿ ತಮ್ಮ ಹಿಂದಿನ ಖ್ಯಾತಿಯನ್ನು ಮರುಪಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಸಾಲ ಮುಕ್ತವಾದ ರಿಲಯನ್ಸ್ ಪವರ್

ಷೇರು ಮಾರುಕಟ್ಟೆಯಲ್ಲಿ ಕೂಡ ರಿಲಯನ್ಸ್ ಪವರ್ ಕಂಪನಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಸಾಲ ಮುಕ್ತವಾಗಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆ.

ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ ಈ ಹಿಂದೆ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಪವರ್ ಸುಮಾರು 800 ಕೋಟಿ ಸಾಲವನ್ನು ಹೊಂದಿತ್ತು. ಇದೀಗ ಬಂದ ವರದಿಯನ್ವಯ ಸಾಲ ನೀಡಿದ ಬ್ಯಾಂಕ್‌ಗಳಿಗೆ ಎಲ್ಲಾ ಬಾಕಿಗಳನ್ನು ಪಾವತಿಸಿ ಸಾಲ ಮುಕ್ತವಾಗಿದೆ ಎಂದಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ, ಕಂಪನಿಯು ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಡಿಬಿಎಸ್ ಮತ್ತು ಐಡಿಬಿಐ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್‌ಗಳೊಂದಿಗೆ ಹಲವಾರು ಸಾಲ ಪರಿಹಾರ ಒಪ್ಪಂದಗಳಿಗೆ ಸಹಿ ಹಾಕಿದೆ.

ವರದಿಯ ಪ್ರಕಾರ, ಕಂಪನಿಯು ಈ ಬ್ಯಾಂಕ್‌ಗಳಿಗೆ ಸಂಪೂರ್ಣ ಸಾಲವನ್ನು ಮರುಪಾವತಿ ಮಾಡಿದೆ, ಇದರ ಪರಿಣಾಮವಾಗಿ, ರಿಲಯನ್ಸ್ ಪವರ್ ಈಗ ಸ್ವತಂತ್ರ ಆಧಾರದ ಮೇಲೆ ಸಾಲ ಮುಕ್ತ ಕಂಪನಿಯಾಗಿದೆ.

ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಉತ್ತಮ ಕಾರ್ಯನಿರ್ವಹಣೆ

ಅನಿಲ್ ಅಂಬಾನಿಯವರ ರಿಲಯನ್ಸ್ ಪವರ್ ಪ್ರಸ್ತುತ 38 ಲಕ್ಷಕ್ಕೂ ಹೆಚ್ಚು ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆಯೊಂದಿಗೆ 4016 ಕೋಟಿ ರೂಪಾಯಿಗಳ ಈಕ್ವಿಟಿ ಮೂಲವನ್ನು ಹೊಂದಿದೆ ಎಂಬುದು ವರದಿಯಾಗಿದೆ.

ಇದು 3960 MW ಸಾಸನ್ UMPP ಮತ್ತು ಉತ್ತರ ಪ್ರದೇಶದ 1200 MW ರೋಸಾ ಥರ್ಮಲ್ ಪವರ್ ಪ್ಲಾಂಟ್ ಸೇರಿದಂತೆ 5900 MW ಕಾರ್ಯ ಸಾಮರ್ಥ್ಯವನ್ನು ಹೊಂದಿದೆ.

ಈ ಹಿಂದೆ 2008 ರಲ್ಲಿ ರಿಲಯನ್ಸ್ ಪವರ್ ಷೇರು ಸುಮಾರು 260.78 ರೂಪಾಯಿಗಳಿಗೆ ವಹಿವಾಟು ನಡೆಸುತ್ತಿತ್ತು. ಆದರೆ ಭಾರಿ ಕುಸಿತದ ನಂತರ 2020 ರ ಮಾರ್ಚ್ 27 ರಂದು ಷೇರಿನ ಬೆಲೆ ಸುಮಾರು 1.13 ರೂ ಆಗಿತ್ತು. ರಿಲಯನ್ಸ್ ಪವರ್ ಷೇರು ಇದೀಗ ರೂ 26.15 ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ ಎಂಬುದಾಗಿ ಮಾಹಿತಿ ದೊರೆತಿದೆ.

ತಂದೆಯ ವ್ಯವಹಾರ ನೋಡಿಕೊಳ್ಳತೊಡಗಿದ ಸಹೋದರರು

1986 ರಲ್ಲಿ ತಮ್ಮ ತಂದೆ ಧೀರೂಭಾಯಿ ಅಂಬಾನಿಯವರ ರಿಲಯನ್ಸ್‌ನ ಹಣಕಾಸಿನ ವ್ಯವಹಾರಗಳನ್ನು ಅವರ ಕಿರಿಯ ಮಗ ಅನಿಲ್ ಅಂಬಾನಿ ವಹಿಸಿಕೊಂಡರು.

2002 ರಲ್ಲಿ ತಮ್ಮ ತಂದೆಯ ಮರಣಾ ನಂತರ ಸಹೋದರ ಮುಖೇಶ್ ಅಂಬಾನಿಯವರೊಂದಿಗೆ ಸೇರಿ ರಿಲಯನ್ಸ್ ಕಂಪನಿಗಳ ಜಂಟಿ ನಾಯಕತ್ವವನ್ನು ವಹಿಸಿಕೊಂಡರು.

ಅನಿಲ್ ಅಂಬಾನಿಯವರು ಈ ಹಿಂದೆ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗಿದ್ದರು ಮತ್ತು ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದರು ಮತ್ತು 1.83 ಲಕ್ಷ ಕೋಟಿ ರೂ.ಗೂ ಹೆಚ್ಚು ನಿವ್ವಳ ಸಂಪತ್ತನ್ನು ಹೊಂದಿದ್ದರು.

ವ್ಯವಹಾರ ಪಾಲು ಮಾಡಿಕೊಂಡ ಸಹೋದರರು

ವ್ಯವಹಾರದಲ್ಲಿನ ಕೆಲವು ಭಿನ್ನಾಭಿಪ್ರಾಯಗಳಿಂದ 2005 ರಲ್ಲಿ ಸಹೋದರರಿಬ್ಬರು ತಮ್ಮ ವ್ಯವಹಾರಗಳನ್ನು ಪಾಲು ಮಾಡಿಕೊಂಡರು. ಹೀಗಾಗಿ ಮುಖೇಶ್ ಪ್ರಮುಖ ತೈಲ ಮತ್ತು ಪೆಟ್ರೋಕೆಮಿಕಲ್ಸ್ ವ್ಯವಹಾರಗಳ ನೇತೃತ್ವ ವಹಿಸಿಕೊಂಡರು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *