ಅತ್ಯಾಚಾರ ಆರೋಪಿ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಕಸ್ಟಡಿ ಇಂದು ಅಂತ್ಯ!

ಬೆಂಗಳೂರು (ಜೂ.18): ಮಾಜಿ ಸಂಸದ ಪ್ರಜ್ವಲ್ ರೇವಣ್ಣ‌ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಇಂದು ಅವರ ಎಸ್‌ಐಟಿ ಕಸ್ಟಡಿ ಅಂತ್ಯವಾಗಲಿದೆ. ಎರಡೆರಡು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ಮಾಡಿದ್ದರೂ, ಪೊಲೀಸರಿಗೆ ತಲೆಬಿಸಿ ತಪ್ಪಿಲ್ಲ. ಪ್ರಜ್ವಲ್ ರೇವಣ್ಣ‌ ವಿರುದ್ಧ ಪ್ರಬಲ ಸಾಕ್ಷ್ಯಗಳ ಸಂಗ್ರಹಕ್ಕೆ ಎಸ್ಐಟಿ ಹರಸಾಹಸ ಪಡುತ್ತಿದೆ. ಪ್ರಜ್ವಲ್ ವಿರುದ್ಧದ ಎರಡು ಪ್ರಕರಣದ ತನಿಖೆಯನ್ನು ಈಗಾಗಲೇ ಎಸ್‌ಐಟಿ ಮುಗಿಸಿದೆ.  ಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ತನಿಕೆ ಬಹುತೇಕ ಮುಕ್ತಾಯವಾಗಿದೆ. ಅದರೊಂದಿಗೆ ಸಿಐಡಿಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದ ತನಿಖೆಯೂ ಬಹುತೇಕ ಪೂರ್ಣವಾಗಿದೆ. ಎಸ್ಐಟಿ ತನಿಖೆ ಮುಗಿದ ಹಿನ್ನೆಲೆ ಇಂದು ಪ್ರಜ್ವಲ್ ರೇವಣ್ಣನನ್ನ ಕೋರ್ಟ್‌ಗೆ ಹಾಜರುಪಡಿಸುವ ಕಾರ್ಯ ಮಾಡಲಿದೆ. ಸಿಐಡಿಯಲ್ಲಿ ದಾಖಲಾಗಿರೋ ರೇಪ್ ಕೇಸಲ್ಲಿ‌ ಮತ್ತೆ ಕಸ್ಟಡಿಗೆ ಪಡೆಯಲು ಎಸ್ಐಟಿ ತಯಾರಿ ನಡೆಸಿದೆ. ಪ್ರಜ್ವಲ್‌ ರೇವಣ್ಣರನ್ನ ಕಸ್ಟಡಿಗೆ ಪಡೆಯಲು ಕೋರ್ಟ್‌ಗೆ ಎಸ್‌ಐಟಿ ಮತ್ತೆ ಮನವಿ ಮಾಡಲಿದೆ.

ಬಾಡಿ ವಾರೆಂಟ್ ಮೇಲೆ ಮತ್ತೆ ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿಗೆ ಪಡೆಯುವ ತೀರ್ಮಾನ ಮಾಡಿದೆ. ಒಂದು ಪ್ರಕರಣ ಮುಗಿದ ಬೆನ್ನಲ್ಲೆ ಮತ್ತೊಂದು ಪ್ರಕರಣದ ತನಿಖೆ ನಡೆಸಲಿದೆ. ಪ್ರತಿಯೊಂದು ಪ್ರಕರಣದಲ್ಲಿ ಕಸ್ಟಡಿಗೆ ಪಡೆದು ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ. ಈಗ ಸಿಐಡಿಯ ರೇಪ್‌ ಕೇಸ್‌ನಲ್ಲಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಎಸ್ಐಟಿ ನಿರ್ಧಾರ ಮಾಡಿದೆ.

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಈಗಾಗಲೇ ಹಲವು ರೀತಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪ್ರಜ್ವಲ್‌ ರೇವಣ್ಣಗೆ  ಪುರುಷತ್ವ ಸೇರಿದಂತೆ ಅತ್ಯಾಚಾರ ಆರೋಪಿಗಳಿಗೆ ನಡೆಸುವ ಎಲ್ಲಾ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ. ಮೊದಲ ಎರಡೂ ಪ್ರಕರಣದಲ್ಲಿ ಅವರ ವೈದ್ಯಕೀಯ ಪರೀಕ್ಷೆ ನಡೆದಿದೆ.  ಪ್ರಜ್ವಲ್‌ ರೇವಣ್ಣದ್ದು ಎನ್ನಲಾದ ವಿಡಿಯೋಗಳು ಹಾಸನ ಸೇರಿದಂತೆ ರಾಜ್ಯಾದ್ಯಂತ ಹರಿದಾಡಿದ್ದವು.  ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪೆನ್‌ಡ್ರೈವ್ ಮೂಲಕ ವಿಡಿಯೋಗಳು ಹಂಚಿಕೆ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ವಿಡಿಯೋದಲ್ಲಿ ಪುರುಷನೊಬ್ಬನ ಧ್ವನಿ ಮತ್ತು  ಸೊಂಟದ ಕೆಳಗಿನ ಭಾಗ ಕಾಣಿಸುತ್ತಿತ್ತು. ಈ ಹಿನ್ನೆಲೆ ವಿಡಿಯೋದಲ್ಲಿ ನಗ್ನವಾಗಿ ಕಾಣಿಸಿದ ವ್ಯಕ್ತಿಯ ಪತ್ತೆಗೆ ಪೊಲೀಸರು ಮುಂದಾಗಿದೆ.

ವಿಡಿಯೋದಲ್ಲಿ ಕಾಣಿಸಿದ ಪುರುಷನ ಅಂಗಾಂಗಳೊಂದಿಗೆ ಪ್ರಜ್ವಲ್ ರೇವಣ್ಣ ಅಂಗಗಳನ್ನು ಹೋಲಿಕೆ ಮಾಡಲು ಅಧಿಕಾರಿಗಳ ತಂಡ ಚಿಂತನೆ ನಡೆಸಿದೆ. ಈ ಪರೀಕ್ಷೆಗೆ ಗುಜರಾತ್ ರಾಜ್ಯದ ಅಹಮದಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ ಎಸ್ಎಲ್) ಹಾಗೂ ವಿದೇಶಿ ತಜ್ಞರ ನೆರವು ಪಡೆದುಕೊಳ್ಳಲು ಎಸ್‌ಐಟಿ ತಂಡ ಮುಂದಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಆರೋಪಿಯ ಧ್ವನಿ ಮಾದರಿಯನ್ನು ಸಂಗ್ರಹಿಸಿದ್ದಾರೆ. ಅಶ್ಲೀಲ ವಿಡಿಯೋಗಳಲ್ಲಿನ ಮುಖ ಮರೆಮಾಚಿಕೊಂಡಿರುವ ವ್ಯಕ್ತಿ ಪತ್ತೆಗೆ ಎಸ್‌ಐಟಿ ಅಂಗಾಂಗ ಪರೀಕ್ಷೆಗೆ ಎಸ್‌ಐಟಿ ಮುಂದಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *