ಆದಾಯ ತರುವ ಸಾರಿಗೆ ಇಲಾಖೆಯಲ್ಲೇ 50% ಹುದ್ದೆ ಖಾಲಿ..!

ಬೆಂಗಳೂರು(ಜು.14):  ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ನೀಡುವ ಇಲಾಖೆಗಳಲ್ಲಿ 3ನೇ ಸ್ಥಾನದಲ್ಲಿರುವ ಸಾರಿಗೆ ಇಲಾಖೆಯಲ್ಲಿ ಮಂಜೂರಾದ ಹುದ್ದೆ ಗಳ ಪೈಕಿ ಅರ್ಧದಷ್ಟು ಹುದ್ದೆಗಳು ಖಾಲಿಯಿವೆ. ಪ್ರಮುಖವಾಗಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಹುದ್ದೆಯೇ ಶೇ.80ಕ್ಕೂ ಹೆಚ್ಚು ಖಾಲಿಯಿದ್ದು, ಇಲಾಖೆ ಗುತ್ತಿಗೆ ನೌಕರರು ಹಾಗೂ ಎರವಲು ಸೇವೆಯಿಂದ ಬಂದವರನ್ನೇ ಆಧಾರವಾಗಿಟ್ಟುಕೊಂಡು ಕಾರ್ಯನಿರ್ವ ಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ರಾಜ್ಯದಲ್ಲಿ ಮುಂದ್ರಾಂಕ ಶುಲ್ಕ, ಅಬಕಾರಿ ತೆರಿಗೆಗಳಿಂದ ಬರುವ ಆದಾಯದ ನಂತರದ ಸ್ಥಾನದಲ್ಲಿ ಮೋಟಾರು ವಾಹನ ತೆರಿಗೆ ಸೇರಿದಂತೆ ಸಾರಿಗೆ ಇಲಾಖೆಯ ಇನ್ನಿತರ ತೆರಿಗೆ ಹಾಗೂ ಶುಲ್ಕಗಳಿಂದ ಆದಾಯ ಬರಲಿದೆ. ಪ್ರಸಕ್ತ ಸಾಲಿನಲ್ಲಿ ಸಾರಿಗೆ ಇಲಾಖೆಯಿಂದಲೇ 13 ಸಾವಿರ ಕೋಟಿ ರು. ಆದಾಯದ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಅದಕ್ಕಾಗಿ ಮೋಟಾರು ವಾಹನ ತೆರಿಗೆ, ರಸ್ತೆ ತೆರಿಗೆ ಹೀಗೆ ಹಲವು ಆದಾಯದ ಮೂಲಗಳನ್ನು ಗಟ್ಟಿಗೊಳಿಸಿಕೊಳ್ಳಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. ಆದರೆ, ಅದಕ್ಕೆ ತಕ್ಕಂತೆ ಕೆಲಸ ಮಾಡಲು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದ್ದು, ಆದರೂ ಇರುವ ಸಿಬ್ಬಂದಿ, ಅಧಿಕಾರಿಗಳೇ ಮಾಡುತ್ತಿದ್ದಾರೆ.

 

ಶೇ.50ಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿ: 

ಸಾರಿಗೆ ಇಲಾಖೆಗಾಗಿ ರಾಜ್ಯ ಸರ್ಕಾರ ಒಟ್ಟು 2,587 ಹುದ್ದೆಗಳನ್ನು ಸೃಜಿಸಿದೆ. ಆದರೆ, ಆದ ರಲ್ಲಿ ಸದ್ಯ 1,322 ಹುದ್ದೆಗಳು ಮಾತ್ರ ಭರ್ತಿ ಮಾಡಲಾಗಿದ್ದು, ಇನ್ನೂ 1.265 ಹುದ್ದೆಗಳು ಖಾಲಿಯಿವೆ. ಇಲಾಖೆಗೆ ಮಂಜೂರಾಗಿರುವ ಹುದ್ದೆಗಳ ಪೈಕಿ 2,208 ಹುದ್ದೆಗಳು ಮತ್ತು ಡಿ ದರ್ಜೆಗಳಾಗಿವೆ. ಅವುಗಳಲ್ಲಿ 1.100 ಹುದ್ದೆಗಳು ಮಾತ್ರ ಭರ್ತಿಯಾಗಿದ್ದರೆ, ಉಳಿದ 1,108 ಹುದ್ದೆಗಳು ಪೈಕಿ ಚಾಲಕರು, ಬೆಳಚ್ಚು ಗಾರರು, ದ್ವಿತೀಯ ದರ್ಜೆ ಸಹಾಯಕರು, ಅಟೆಂಡರ್, ಗ್ರೂಪ್ ಡಿ ನೌಕರರನ್ನು ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿ ಕೊಳ್ಳಲಾಗಿದೆ. ಅದೇ ಸಹಾಯಕ ಕಾರ್ಯ ದರ್ಶಿ, ಪ್ರಥಮ ದರ್ಜೆ ಸಹಾಯಕ, ಮೋಟಾರು ವಾಹನ ನಿರೀಕ್ಷಿಕ, ಅಧೀಕ್ಷಕ ಹುದ್ದೆಗಳನ್ನು ಖಾಲಿ ಇಡಲಾಗಿದೆ.

ಆರ್‌ಟಿಒ, ಎಆರ್‌ಟಿಒಗಳಿಲ್ಲದ ಇಲಾಖೆ:

ಸಾರಿಗೆ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳಾದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್‌ಟಿಒ) ಹುದ್ದೆಗಳೇ ಬಹಳಷ್ಟು ಖಾಲಿ 8. 4 47 93 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 28 ಆರ್‌ಟಿಒ, 14 ಎಆರ್‌ಟಿಒ ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ 19 ಆರ್‌ಟಿಒ ಹಾಗೂ 79 ಎಆರ್‌ಟಿಒ ಹುದ್ದೆ ಖಾಲಿಯಿವೆ.

 

ಅದೇ ರೀತಿ 430 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಸದ್ಯ 227 ಹುದ್ದೆ ಮಾತ್ರ ಭರ್ತಿಯಾಗಿವೆ. ಉಳಿ ದಂತೆ 210 ಹುದ್ದೆಗಳು ಖಾಲಿಯಿವೆ. ಅದರಲ್ಲಿ ಸದ್ಯ 76 ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಉಳಿದಂತೆ 110 ಹುದ್ದೆ ಭರ್ತಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿಲ್ಲ.

ಸಾರಿಗೆ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯ ವಿರುವ ಹುದ್ದೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಸದ್ಯ ಮೋಟಾರು ವಾಹನ ನಿರೀಕ್ಷಕರ ಹುದ್ದೆ ಭರ್ತಿ ಮಾಡಲಾಗಿದೆ. ಅಲ್ಲದೆ, ಸಿ ಮತ್ತು ಡಿ ದರ್ಜೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವಂತೆ ಸೂಚನೆಯಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *