ಅಂಬಾನಿ ಮದುವೆಯಲ್ಲಿ ಮಿಂಚಿದ ವಿದೇಶಿ ಸಹೋದರಿಯರು..! ಲೆಹಂಗಾ, ಮೂಗುತಿ ಧರಿಸಿ ದೇಸಿ ಅವತಾರದಲ್ಲಿ ಹೃದಯ ಕದ್ದ ಚೆಲುವೆಯರು…
Kim and Khloe Kardashian: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜುಲೈ 12ರ ಶುಕ್ರವಾರದಂದು ಇವರಿಬ್ಬರ ವಿವಾಹ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಇತ್ತೀಚೆಗೆ ಅಂಬಾನಿ ಕುಟುಂಬ ಆಶೀರ್ವಾದ ಸಮಾರಂಭವನ್ನು ಆಯೋಜಿಸಿತ್ತು.
ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಸೊಸೆ ರಾಧಿಕಾ ಅವರಿಗೆ ಆಶೀರ್ವಾದ ನೀಡಲು ಬಾಲಿವುಡ್ ತಾರೆಯರು ಸ್ಥಳಕ್ಕೆ ಆಗಮಿಸಿದ್ದರು. ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದ ಕಿಮ್ ಕರ್ದಾಶಿಯಾನ್ ಮತ್ತು ಖ್ಲೋ ಕರ್ದಾಶಿಯಾನ್ ಕೂಡ ಈ ಆಶೀರ್ವಾದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪಾಪರಾಜಿ ಹಂಚಿಕೊಂಡ ವೀಡಿಯೊದಲ್ಲಿ, ಕಿಮ್ ಕಾರ್ಡಶಿಯಾನ್ ಮತ್ತು ಕ್ಲೋಯ್ ಕಾರ್ಡಶಿಯಾನ್ ಆಶೀರ್ವಾದ ಸಮಾರಂಭಕ್ಕೆ ಹೊರಡುತ್ತಿರುವುದನ್ನು ಕಾಣಬಹುದು. ಕಿಮ್ ಮತ್ತು ಆಕೆಯ ಸಹೋದರಿ ಖ್ಲೋ ದೇಸಿ ಅವತಾರದಲ್ಲಿ ಎಲ್ಲರ ಮನ ಕದ್ದಿದ್ದಾರೆ. ಇಬ್ಬರು ಸ್ಟಾರ್ ಸಹೋದರಿಯರು ಸಮಾರಂಭಕ್ಕೆ ಭಾರತೀಯ ಉಡುಪುಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಕಿಮ್ ಕಾರ್ಡಶಿಯಾನ್ ಮೆಟಾಲಿಕ್ ಕಾಪರ್ ಕಲರ್ ಲೆಹೆಂಗಾ ಧರಿಸಿದ್ದು, ಮಾಂಗ್ ಟಿಕ್ಕಾದೊಂದಿಗೆ ತನ್ನ ನೋಟವನ್ನು ಪೂರ್ಣಗೊಳಿಸಿದಳು.
ತಂಗಿಯಂತೆ ಖ್ಲೋ ಕೂಡ ಸಂಪೂರ್ಣ ದೇಸಿ ಲುಕ್ ಅಳವಡಿಸಿಕೊಂಡಿದ್ದಾರೆ. ಕಿಮ್ ಮತ್ತು ಖ್ಲೋಯಿ ಅವರ ಭಾರತೀಯ ನೋಟವು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇವರಿಬ್ಬರ ವಿಡಿಯೋಗಳಿಗೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಅಪಾರ ಪ್ರೀತಿಯ ಸುರಿಮಳೆಗೈದಿದ್ದಾರೆ.
ಕರ್ದಾಶಿಯಾನ್ ಸಹೋದರಿಯರು ಮುಂಬೈಗೆ ಬಂದಿಳಿದಾಗ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಕಾರ್ದಾಶಿಯಾನ್ ಸಹೋದರಿಯರು ಭಾರತೀಯ ನೋಟವನ್ನು ಅಳವಡಿಸಿಕೊಂಡರು. ಇಬ್ಬರೂ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ.