ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 90 ಕೋಟಿ ರೂ. ಅಕ್ರಮ ವರ್ಗಾವಣೆ, ಈ ಹಣದಿಂದಲೇ ಮದ್ಯ, ಲ್ಯಾಂಬೋರ್ಗಿನಿ ಖರೀದಿ: ಇಡಿ

ನವದೆಹಲಿ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಸುಮಾರು 90 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದು, ಈ ಹಣವನ್ನು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಗೆ ಮದ್ಯ ಖರೀದಿಗಾಗಿ ಹಾಗೂ ದುಬಾರಿ ಬೆಲೆಯ ವಾಹನಗಳ ಖರೀದಿಗೆ ಬಳಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ಆರೋಪಿಸಿದೆ.

ಈ ಪ್ರಕರಣದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಬಂಧಿಸಿರುವ ಇಡಿ, ಈ ಸಂಬಧ ಇತ್ತೀಚೆಗೆ ಪ್ರಕಟಣೆ ನೀಡಿದ್ದು, ಶಾಸಕರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳು “ಹಣ ವರ್ಗಾವಣೆ ಮತ್ತು ನಗದು ನಿರ್ವಹಣೆಯಲ್ಲಿ ಭಾಗಿಯಾಗಿದ್ದಾರೆ” ಎಂದು ಆರೋಪಿಸಿದ್ದಾರೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ(ವಾಲ್ಮೀಕಿ ನಿಗಮದ ನಿಧಿಯಿಂದ) 18 ನಕಲಿ ಖಾತೆಗಳಿಗೆ ಸುಮಾರು 90 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿರುವುದಾಗಿ ಇಡಿ ಹೇಳಿದೆ.

“ಲೋಕಸಭೆ ಚುನಾವಣೆಗೂ ಮುನ್ನ ಗಮನಾರ್ಹ ಪ್ರಮಾಣದಲ್ಲಿ ಮದ್ಯವನ್ನು ಸಂಗ್ರಹಿಸಲು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಗಣನೀಯ ಪ್ರಮಾಣದಲ್ಲಿ ಬಳಸಲಾಗಿದೆ.

“ಹೆಚ್ಚುವರಿಯಾಗಿ, ಹಗರಣದಿಂದ ಬಂದ ಆದಾಯವನ್ನು ಬಳಸಿಕೊಂಡು ಲಂಬೋರ್ಗಿನಿ ಸೇರಿದಂತೆ ದುಬಾರಿ ಬೆಲೆಯ ವಾಹನಗಳನ್ನು ಖರೀದಿಸಲಾಗಿದೆ” ಎಂದು ಇಡಿ ತಿಳಿಸಿದೆ.

ಈ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಸತ್ಯನಾರಾಯಣ ವರ್ಮಾ ಎಂಬಾತ, ಹಗರಣದಲ್ಲಿ ಬಂದಿದ್ದ ದುಡ್ಡಿನಿಂದ ಎರಡು ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾಗಿ ತಿಳಿದುಬಂದಿದೆ. ಹೈದರಾಬಾದ್ ನಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರುಗಳ ಶೋರೂಂನಲ್ಲಿ ಎರಡು ಲ್ಯಾಂಬೋರ್ಗಿನಿ ಕಾರುಗಳನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *