Tharun Sudhir: ಮೈ ಲೇಡಿ! ಸ್ಪೆಷಲ್ ವಿಡಿಯೋ ಮೂಲಕ ಮದುವೆ ಸುದ್ದಿ ಕನ್ಫರ್ಮ್ ಮಾಡಿದ ಕಾಟೇರ ಡೈರೆಕ್ಟರ್ ತರುಣ್
ಸ್ಯಾಂಡಲ್ವುಡ್ನ ಕಾಟೇರ ಡೈರೆಕ್ಟರ್ ತರುಣ್ ಸುಧೀರ್ (Tharun Sudhir) ತಮ್ಮ ಜೀವನ ಸಂಗಾತಿ ಯಾರು ಅನ್ನೋದನ್ನ ಅಧಿಕೃತವಾಗಿಯೇ ಅನೌನ್ಸ್ ಮಾಡಿದ್ದಾರೆ. ತಮ್ಮ ಎಂದಿನ ಸಿನಿಮಾ ಶೈಲಿಯಲ್ಲಿಯೇ ಭಾವಿ ಪತ್ನಿ ಸೋನಲ್ ಮೊಂಥೆರೋ (Sonal Monteiro) ಬಗ್ಗೆ ಹೇಳಿದ್ದಾರೆ. ಇಲ್ಲಿವರೆಗೂ ಈ ಸುದ್ದಿ ಸುದ್ದಿಯಾಗಿಯೇ ಹರಿದಾಡಿತ್ತು. ಇದರ ಬಗ್ಗೆ ಸೋನಲ್ ಮತ್ತು ತರುಣ್ ನಕ್ಕು ಸುಮ್ಮನಾಗುತ್ತಿದ್ದರು. ಆದರೆ, ಇದೀಗ ಸೋನಲ್ ನನ್ನ ಜೀವನದ ಹೀರೋಯಿನ್ (Heroine) ಅನ್ನೋದನ್ನ ಸ್ವತಃ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. ಈ ಮೂಲಕ ತಾವು ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋ ವಿಚಾರವನ್ನೂ ಅಧಿಕೃತವಾಗಿಯೇ ತಿಳಿಸಿದ್ದಾರೆ. ಎಲ್ಲವನ್ನೂ ಸರಿಯಾದ ಸಮಯಕ್ಕೆ ತಿಳಿಸುತ್ತೇನೆ ಅಂತಲೇ ಈ ಮೊದಲೇ ತರುಣ್ ಹೇಳಿದ್ದರು. ಆ ಪ್ರಕಾರ ತರುಣ್ ಸುಧೀರ್ ತಮ್ಮ ಮದುವೆಯ (Marriage) ಒಂದೊಂದೆ ವಿಷಯವನ್ನ ಈಗ ಬಿಟ್ಟುಕೊಡುತ್ತಿದ್ದಾರೆ. ಇದರ ವಿವರ ಇಲ್ಲಿದೆ ಓದಿ.
ತರುಣ್-ಸೋನಲ್ ಮದುವೆ ಎರಡು ದಿನ..!
ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ಡೇಟ್ ಫಿಕ್ಸ್ ಆಗಿದೆ. ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ನಾಲ್ಕು ದಿನ ಮದುವೆ ಪ್ಲಾನ್ ಆಗಿದೆ. ಬರೋಬ್ಬರಿ ಎರಡು ದಿನ ಮದುವೆ ಪ್ಲಾನ್ ಆಗಿದೆ. ಇನ್ನು ಒಂದು ದಿನ ರಿಸೆಪ್ಷನ್ ಪ್ಲಾನ್ ಆಗಿದೆ. ಮತ್ತೊಂದು ದಿನ ಮದುವೆ ನಡೆಯುತ್ತಿದೆ.

ಈ ಒಂದು ವಿಷಯವನ್ನ ತಿಳಿಸಲು ಡೈರೆಕ್ಟರ್ ತರುಣ್ ಸುಧೀರ್ ಒಂದು ಒಳ್ಳೆ ಪ್ರೋಮೋ ರೀತಿಯ ವಿಡಿಯೋ ಮಾಡಿದ್ದಾರೆ. ಒಂದ್ ಒಳ್ಳೆ ಕಾನ್ಸೆಪ್ಟ್ ಮೂಲಕ ವಿಡಿಯೋ ಮಾಡಿಸಿದ್ದಾರೆ. ತರುಣ್ ಸುದೀರ್ ಹಾಗೂ ಸೋನಲ್ ಒಂದು ಥಿಯೇಟರ್ನಲ್ಲಿಯೇ ಭೇಟಿಯಾಗೋ ಕ್ಷಣದ ವಿಡಿಯೋ ಇದಾಗಿದೆ. ಇದನ್ನ ಬೆಂಗಳೂರಿನ ನವರಂಗ್ ಥಿಯೇಟರ್ನಲ್ಲಿ ಚಿತ್ರೀಕರಿಸಲಾಗಿದೆ. ಕ್ಯಾಮರಾಮನ್ ಎ.ಜೆ.ಶೆಟ್ಟಿ ಈ ಒಂದು ವಿಡಿಯೋವನ್ನ ಚಿತ್ರೀಕರಿಸಿದ್ದಾರೆ.
ರೋಮ್ಯಾಂಟಿಕ್ ಹಾಡಿನ ರೀತಿ ಇದೇ ಸ್ಪೆಷಲ್ ವಿಡಿಯೋ.!
ತರುಣ್ ಮತ್ತು ಸೋನಲ್ ಮದುವೆ ವಿಡಿಯೋ ಸ್ಪೆಷಲ್ ಆಗಿದೆ. ಮೈ ಲೇಡಿ ಅನ್ನೋ ಈ ಸ್ಪೆಷಲ್ ವಿಡಿಯೋದಲ್ಲಿ ತರುಣ್ ಮತ್ತು ಸೋನಲ್ ಸ್ಪೆಷಲ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆ ತೊಟ್ಟು ಇಬ್ಬರು ಕ್ಲಾಸ್ ಆಗಿಯೇ ಕಾಣಿಸಿಕೊಂಡಿದ್ದಾರೆ.
ಇದರ ಜೊತೆಗೆ ಗೋಲ್ಡನ್ ಕಲರ್ ಡ್ರೆಸ್ ನಲ್ಲೂ ಈ ಜೋಡಿ ಕಾಣಿಸಿಕೊಂಡಿದೆ. ವಿಶೇಷವಾಗಿಯೇ ಈ ಒಂದು ಜೋಡಿಯ ವಿಡಿಯೋ ಚಿತ್ರೀಕರಣ ಥಿಯೇಟರ್ನಲ್ಲಿಯೇ ಮಾಡಲಾಗಿದೆ. ಇದೇ ಈ ವಿಡಿಯೋದ ಸ್ಪೆಷಲ್ ವಿಚಾರ ಅಂತಲೂ ಹೇಳಬಹುದು. ಈ ಮೂಲಕ ತರುಣ್ ತಮ್ಮ ಮದುವೆ ಮ್ಯಾಟರ್ ಅನ್ನ ಅಧಿಕೃತವಾಗಿಯೇ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದ ತಮ್ಮ ಪೇಜ್ನಲ್ಲೂ ತರುಣ್ ಈ ಒಂದು ಮೈ ಲೇಡಿ ವಿಡಿಯೋ ಹಂಚಿಕೊಂಡಿದ್ದಾರೆ.

ಇದೇ ವರ್ಷ ಆಗಸ್ಟ್ 10 ಮತ್ತು 11 ರಂದು ಮದುವೆ..!
ಇದೇ ವರ್ಷ ಆಗಸ್ಟ್ 10 ಮತ್ತು 11ರಂದು ಇವರ ಮದುವೆ ನಡೆಯುತ್ತಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್ ನಲ್ಲಿ ವಿವಾಹ ಫಿಕ್ಸ್ ಆಗಿದೆ.
ಆಗಸ್ಟ್ ತಿಂಗಳ 10 ರಿಸೆಪ್ಷನ್ ಇರುತ್ತದೆ. ಆಗಸ್ಟ್11ರಂದು ವಿವಾಹ ಪ್ಲಾನ್ ಮಾಡಲಾಗಿದೆ. ಈ ಮೂಲಕ ತರುಣ್ ಮತ್ತು ಸೋನಲ್ ಮದುವೆಯ ಅಧಿಕೃತ ಮಾಹಿತಿ ಇದೀಗ ಹೊರ ಬಂದಿದೆ.
ರಾಬರ್ಟ್ ಸಿನಿಮಾ ಸಮಯದಲ್ಲಿ ತರುಣ್-ಸೋನಲ್ ಭೇಟಿ.!
ತರುಣ್ ಮತ್ತು ಸೋನಲ್ ಅವರ ಪರಿಚಯ ರಾಬರ್ಟ್ ಸಿನಿಮಾ ಟೈಮ್ನಲ್ಲಿಯೇ ಆಗಿತ್ತು. ಆಗಿನಿಂದಲೇ ಈ ಜೋಡಿ ಒಳ್ಳೆ ಸ್ನೇಹಿತರೂ ಆಗಿದ್ದರು. ಆದರೆ, ಪ್ರೀತಿ-ಪ್ರೇಮದ ವಿಚಾರಕ್ಕೆ ಬಂದ್ರೆ, ಆ ವಿಚಾರವನ್ನ ಇಬ್ಬರೂ ಸದ್ಯ ಎಲ್ಲೂ ಹೇಳಿಕೊಂಡಿಲ್ಲ. ಇವರ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿ ಸುಮಾರು ದಿನಗಳಿಂದಲೂ ಹರಿದಾಡಿತ್ತು.
ಆದರೆ, ಅಧಿಕೃತವಾಗಿ ಇದನ್ನ ಯಾರೂ ಹೇಳಿಕೊಂಡಿರಲಿಲ್ಲ. ಈ ಸುದ್ದಿಯ ಮಧ್ಯೆ ತರುಣ್ ತಾಯಿ ಮಾಲತಿ ಸುಧೀರ್ ಈ ವಿಷಯದ ಬಗ್ಗೆ ಹೇಳಿದ್ದರು. ತರುಣ್ ಮದುವೆ ಆಗುತ್ತಿದ್ದಾನೆ ಅನ್ನೋದೇ ಒಂದು ಖುಷಿ ಅಂತ ಹೇಳಿದ್ದರು. ಸೋನಲ್ ಸೊಸೆ ಆಗುತ್ತಿದ್ದಾಳೆ ಅನ್ನೋದನ್ನ ಹೆಸರು ಹೇಳದೇನೆ ಹೇಳಿಕೊಂಡಿದ್ರು.
ಸರಿಯಾದ ಸಮಯಕ್ಕೆ ಎಲ್ಲ ಹೇಳುವೆ ಎಂದಿದ್ದ ತರುಣ್.!
ತರುಣ್ ಸುಧೀರ್ ತಮ್ಮ ಮದುವೆಯನ್ನ ಪಕ್ಕ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಸರಿಯಾದ ಸಮಯಕ್ಕೆ ಸರಿಯಾದ ವಿಷಯ ಹೇಳಬೇಕು ಅಂತ ಹೇಳಿದ್ದರು. ಆ ಪ್ರಕಾರ ಜುಲೈ-22 ರಂದು ಬೆಳಗ್ಗೆ 11.08 ನಿಮಿಷಕ್ಕೆ ತಮ್ಮ ಮದುವೆ ದಿನ ಮತ್ತು ಹುಡುಗಿ ಯಾರು ಅನ್ನೋದನ್ನ ಸ್ಪೆಷಲ್ ವಿಡಿಯೋ ಮೂಲಕವೇ ಹೇಳಿದ್ದಾರೆ. ಈ ಮೂಲಕ ತಮ್ಮ ಮದುವೆ ವಿಚಾರವನ್ನ ಅಧಿಕೃತಗೊಳಿಸಿದ್ದಾರೆ.