ಅಕ್ರಮವಾಗಿ ಸಾಗಿಸುತ್ತಿದ್ದ ಗುಟ್ಕಾ ತಂಬಾಕು ಉತ್ಪನ್ನಗಳನ್ನು ಕಾಳಗಿ ಪೊಲೀಸರು ದಾಳಿ ಮಾಡಿ ಟೆಂಪೋವನ್ನು ವಶಪಡಿಸಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದ ಅಂಬೇಡ್ಕರ್ ವೃತದ ಹತ್ತಿರ ಅಕ್ರಮವಾಗಿ ಗುಟ್ಕಾ ತಂಬಾಕು ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಪಿಎಸ್ಐ ರವರ ಮಾಹಿತಿಯ ಮೇರೆಗೆ ಎಎಸ್ಐ ಶರಣಪ್ಪ ಜಾಕನಳ್ಳಿ ರವರ ನೇತೃತ್ವದಲ್ಲಿ ದಾಳಿ ಮಾಡಿ ಟೆಂಪೋ ವನ್ನು ವಶಪಡಿಸಿಕೊಂಡಿದ್ದಾರೆ.ಈ ವಾಹನವನ್ನು ವಿಜಯಪುರದಿಂದ ತೆಲಂಗಾಣಕ್ಕೆ ಹೋಗುತಿತ್ತು ಎನ್ನಲಾಗಿದೆ ವಾಹನ ಸಂಖ್ಯೆ TS 12 UB 1839 ಈ ವಾಹನದಲ್ಲಿ ಸುಮಾರು 16, 84, 800 ರೂಪಾಯಿ ಮೌಲ್ಯದ ಗುಟ್ಕಾ ತಂಬಾಕು ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಕಾಳಗಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ನಾಗೇಶ, ಸಂಗಣ್ಣ, ಹುಸೇನ್, ಇರ್ಫಾನ್, ಪ್ರಕಾಶ ಮಂಜುನಾಥ್, ಬಸಪ್ಪ ಮಾರುತಿ, ಜೈಸಿಂಗ್ ಸೇರಿದಂತೆ ಇತರರು ಇದ್ದರು.
ವರದಿ ತ್ರಿಮೂರ್ತಿ ಬೆನಕನಹಳ್ಳಿ