Urvashi Rautela video: ಲೀಕ್ ಆದ ಬಾತ್ರೂಮ್ ವಿಡಿಯೋ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ನಟಿ ಊರ್ವಶಿ ರೌಟೇಲಾ.. ವೈರಲ್ ಮಾಡಿದ್ದು ಇವರೇ ಅಂತೆ !?
Urvashi Rautela video viral: ಕೆಲವು ದಿನಗಳ ಹಿಂದೆ ನಟಿ ಊರ್ವಶಿ ರೌಟೇಲಾ ಅವರ ಬಾತ್ರೂಮ್ ವಿಡಿಯೋ ಲೀಕ್ ಆಗಿದೆ ಎಂಬ ವದಂತಿ ಹಬ್ಬಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ನಟಿ ಊರ್ವಶಿ ರೌಟೇಲಾ ಈ ಲೀಕ್ ಆದ ಬಾತ್ರೂಮ್ ವಿಡಿಯೋ ಬಗ್ಗೆ ಶಾಕಿಂಗ್ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಈ ಕೆಲಸ ಮಾಡಿದ್ದು ಯಾರು ಎಂಬ ಸತ್ಯವನ್ನು ಹೇಳಿದ್ದಾರೆ.
ಇತ್ತೀಚೆಗಷ್ಟೇ ಊರ್ವಶಿ ಕಾರ್ಯಕ್ರಮವೊಂದಕ್ಕೆ ಬಂದಿದ್ದು, ಈ ವೈರಲ್ ವಿಡಿಯೋ ಬಗ್ಗೆ ಮಾತನಾಡಿದ್ದಾರೆ. ಊರ್ವಶಿ ರೌಟೇಲಾ ಸುಶಿ ಗಣೇಶನ್ ನಿರ್ದೇಶನದ ‘ಘುಷ್ಪಥಿಯಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಅದರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ ಊರ್ವಶಿ ಈ ವೀಡಿಯೊದ ಬಗ್ಗೆ ಮಾತನಾಡಿದರು.
ಇದು ನನ್ನ ವೈಯಕ್ತಿಕ ಕ್ಲಿಪ್ ಅಲ್ಲ. ಅದು ಘುಷ್ಪಥಿಯಾ ಚಿತ್ರದ ಒಂದು ದೃಶ್ಯ. ನಿಜ ಜೀವನದಲ್ಲಿ ಅಂತಹ ಯಾವುದೇ ಪರಿಸ್ಥಿತಿಯನ್ನು ಅನುಭವಿಸಿಲ್ಲ ಎಂದು ನಟಿ ಊರ್ವಶಿ ರೌಟೆಲಾ ಸ್ಪಷ್ಟನೆ ನೀಡಿದ್ದಾರೆ. ಊರ್ವಶಿ ಅವರ ಮುಂಬರುವ ಚಿತ್ರ ಘುಷ್ಪಥಿಯಾ ಆಗಸ್ಟ್ 9 ರಂದು ಥಿಯೇಟರ್ಗಳಿಲ್ಲಿ ರಿಲೀಸ್ ಆಗಲಿದೆ.
ಊರ್ವಶಿ ರೌಟೇಲಾ ಕೊನೆಯದಾಗಿ ‘ಜೆಎನ್ಯು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಊರ್ವಶಿ ಹಿಂದಿಯ ‘ದಿಲ್ ಹೈ ಗ್ರೇ’ ಮತ್ತು ತೆಲುಗಿನ ‘ಬ್ಲ್ಯಾಕ್ ರೋಸ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.