ಅಪ್ಪ ಮಕ್ಕಳಿಂದ ಬ್ಲ್ಯಾಕ್ ಮೇಲ್!: ಯಡಿಯೂರಪ್ಪ-ವಿಜಯೇಂದ್ರ ವಿರುದ್ಧ ರಮೇಶ್ ಜಾರಕಿಹೊಳಿ ಮಾರ್ಮಿಕ ಹೇಳಿಕೆ

ಹೈಲೈಟ್ಸ್‌:

  • ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಆಕ್ರೋಶ
  • ಅಪ್ಪ ಮಕ್ಕಳ ಬ್ಲ್ಯಾಕ್ ಮೇಲ್ ಹೊರ ಬರಬೇಕಾದರೆ ಹೈಕಮಾಂಡ್ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಬೇಕು ಎಂದು ಒತ್ತಾಯ
  • ರಾಜ್ಯ ಸರ್ಕಾರ ದಿವಾಳಿಯಾಗಿದ್ದು ಸಿದ್ದರಾಮಯ್ಯ ರಾಜೀನಾಮೆ ನೀಡಿ ಚುನಾವಣೆಗೆ ಹೋಗುವುದು ಒಳ್ಳೆಯದು ಎಂದ ಮಾಜಿ ಸಚಿವ

ಅಥಣಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಳಿಕ ಇದೀಗ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಅವರ ವಿರುದ್ಧ ನಿರಂತರ ವಾಗ್ದಾಳಿಗೆ ಮುಂದಾಗಿದ್ದಾರೆ.

ಸೋಮವಾರವಷ್ಟೇ ನಾನು ಪಕ್ಷದ ರಾಜ್ಯಾಧ್ಯಕ್ಷರನ್ನು ಒಪ್ಪಿಲ್ಲ ಒಪ್ಪುವುದಿಲ್ಲ ಎಂದು ಹೇಳಿದ್ದ ಅವರು, ಇದೀಗ ಅಪ್ಪ ಮಕ್ಕಳ ಬ್ಲ್ಯಾಕ್ ಮೇಲ್ ಹೊರಗೆ ಬರಬೇಕಾದರೆ ಹೈಕಂಮಾಡಗೆ ಮನವಿ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಹಳಿಯಾಳ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪ ಮಕ್ಕಳ ಕಪಿ ಮುಷ್ಟಿಯಿಂದ ಬ್ಲ್ಯಾಕ ಮೇಲ್ ಹೊರಗೆ ಬರಬೇಕಾದರೆ ಹೈಕಮಾಂಡಿಗೆ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲು ಮನವಿ ಮಾಡುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ರಾಜೀನಾಮೆ ಕೊಡಲಿ

ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ಕಾರ್ಯ ವೈಖರಿಯನ್ನು ಟೀಕಿಸಿದ ಅವರು, ರಾಜ್ಯ ಸರ್ಕಾರ ಸದ್ಯ ದಿವಾಳಿಯಾಗಿದೆ, ನೈತಿಕತೆ ಇಲ್ಲ.ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಹೊಸ ಚುನಾವಣೆ ಆಗುವುದು ಒಳ್ಳೆಯದು. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಕಂಟ್ರೋಲ್ ತಪ್ಪಿದೆ ಎಂದು ಆರೋಪಿಸಿದರು.

ಈಗಿನ ಸರ್ಕಾರವನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವುದು ಒಳ್ಳೆಯದು. ಸಿಎಂ ಸಿದ್ದರಾಮಯ್ಯ ಸಿಡಿ ಶಿವುನಿಂದ ಕಂಟ್ರೋಲ್ ತಪ್ಪಿದ್ದಾರೆ ಎಂದು ಡಿಕೆ ಶಿವಕುಮಾರ್ ಅವರನ್ನು ವ್ಯಂಗ್ಯ ಮಾಡಿದರು.

ಇನ್ನು ಸೋಮವಾರ ಗೋಕಾಕ್ ನಲ್ಲಿ ಮುಡಾ ಹಗರಣದ ವಿರುದ್ಧ ನಾಳೆಯಿಂದ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ ವಿಚಾರವಾಗಿ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ನಮ್ಮ ನಾಯಕರು ಬಳ್ಳಾರಿ ಪಾದಯಾತ್ರೆ ಮಾಡಲಿ ಎಂದು ಆಗ್ರಹಿಸಿದ್ದರು. ನಮ್ಮ ಬಿಜೆಪಿ ಅಧ್ಯಕ್ಷರು ಪಾದಯಾತ್ರೆ ಮಾಡುತ್ತಿರುವುದನ್ನು ಸ್ವಾಗತ ಮಾಡ್ತಿನಿ. ಅದಕ್ಕಿಂತ ಪೂರ್ವದಲ್ಲಿ ಬಿಜೆಪಿ ಪಕ್ಷದ ದೆಹಲಿ ಹೈಕಮಾಂಡ್ ಗೆ ಮನವಿ ಮಾಡ್ತೀನಿ ಎಂದು ಹೇಳಿದ್ದರು.

ವಾಲ್ಮೀಕಿ ದೊಡ್ಡ ಹಗರಣ

ಮುಡಾಗಿಂತಲೂ ದೊಡ್ಡ ಹಗರಣ ವಾಲ್ಮೀಕಿ ಹಗರಣವಿದೆ. ಮುಡಾ ಹಗರಣವನ್ನು ನ್ಯಾಯಾಂಗ ತನಿಖೆ ನಡೆಯುತ್ತಿದೆ. ಹೀಗಾಗಿ ವಾಲ್ಮೀಕಿ ಹಗರಣ ದೊಡ್ಡದಾಗಿದ್ದು ಬಳ್ಳಾರಿ ಪಾದಯಾತ್ರೆ ಮಾಡುವುದು ಒಳ್ಳೆಯದು. ಯಾಕೆಂದರೆ ಪಾದಯಾತ್ರೆ ಮೈಸೂರಿಗೆ ಸೀಮಿತ ಮಾಡಬಾರದು. ವಾಲ್ಮೀಕಿ ಜನಾಂಗ ದೊಡ್ಡದಾಗಿದೆ. ಮುಸ್ಲಿಂ, ಲಿಂಗಾಯತ, ಎಸ್ಸಿ ಜನಾಂಗದ ಬಳಿಕ ವಾಲ್ಮೀಕಿ ಜನಾಂಗ ಬರುತ್ತದೆ. ಕುರುಬ ಮತ್ತು ವಾಲ್ಮೀಕಿ ಜನಾಂಗ ಸಮಾನವಾಗಿದ್ದೇವೆ. ನಮ್ಮ ಜನಾಂಗಕ್ಕೆ ಮೋಸ ಮಾಡಿದ ಸರ್ಕಾರದ ವಿರುದ್ಧ ಬಳ್ಳಾರಿ ಪಾದಯಾತ್ರೆ ಮಾಡಬೇಕಿದೆ ಎಂದಿದ್ದರು.

ನಾನೇ ಹೈಕಮಾಂಡ್ ಅನುಮತಿ ಕೇಳ್ತೀನಿ, ನಾನು, ಯತ್ನಾಳ ಸೇರಿ ಇನ್ನಷ್ಟು ಶಾಸಕರು ಕೂಡಿ ಪಾದಯಾತ್ರೆ ಮಾಡುತ್ತೇವೆ. ಕೂಡಲಸಂಗಮದಿಂದ ಬಳ್ಳಾರಿ ವರೆಗೂ ವಾಲ್ಮೀಕಿ, ಎಸ್ಸಿ,ಎಸ್ಟಿ ಅನುದಾನ ಗ್ಯಾರಂಟಿ ಗೆ ಹಣ ಬಳಕೆ ಮಾಡ್ತಿದ್ದಾರೆ. ಇದಕ್ಕೆ ಹೈಕಮಾಂಡ್ ಅನುಮತಿ ಕೇಳಿರುವೆ. ಹೈಕಮಾಂಡ್ ನಮಗೆ ತಡಿರೀ ಅಂತಾ ಹೇಳಿದ್ದಾರೆ. ನಾನು ಯತ್ನಾಳ ಸೇರಿ ಹಲವು ಶಾಸಕರು ಸೇರಿಕೊಂಡು ಬೆಳಗಾವಿಯಲ್ಲಿ ಮೀಟಿಂಗ್ ಮಾಡುತ್ತೇವೆ. ಸಿಎಂ ಮಾಡಿರುವ ಮುಡಾ ಹಗರಣ ದೊಡ್ಡದು. ನಮಗೆ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಗೌರವವಿತ್ತು. ಈ ಹಗರಣ ನೋಡಿದ್ರೆ ನಮಗೆ ಬೇಜಾರಾಗಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಎಸ್ಸಿಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗಿರುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಒತ್ತಡದಿಂದ ಹೊರಗೆ ಬಂದು ತನಿಖೆಗೆ ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದರು.

ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸುವುದು ಅವರ ಪಕ್ಷದ ಆಂತರಿಕ ವಿಚಾರ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಸಿದ್ದರಾಮಯ್ಯ ಅವರಿಂದ ಎಂದು ತಿಳಿಸಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *