ವಾಡಿ ಪಟ್ಟಣದಲ್ಲಿ ಸ್ವತಂತ್ರ ಸೇನಾನಿ ಶಹೀದ ಭಗತ್ ಸಿಂಗ್ ಅವರ 113ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘಟನೆ (ಎಐಯುಟಿಸಿಯುಸಿ), ವತಿಯಿಂದ ಶಹೀದ್ ಭಗತ್ ಸಿಂಗ್ ರವರ 113ನೇ ಜನ್ಮದಿನಾಚರಣೆ ಏರ್ಪಿಡಿಸಲಾಗಿತು.
ಭಗತ್ ಸಿಂಗ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾತನಾಡಿದ SUCI ಕಮ್ಯುನಿಸ್ಟ್ ಪಕ್ಷದ ವಾಡಿ ಸ್ಥಳೀಯ ಸಮಿತಿಯ ಕಾರ್ಯಧರ್ಶಿ ವೀರಭದ್ರಪ್ಪ ಆರ್.ಕೆ ಮಾಲಾರ್ಪಣೆ ಮಾಡಿ ಮಾತನಾಡಿ,
ಸ್ವಾತಂತ್ರ್ಯ ಯೋಧರು ಸಹಿಷ್ಣುತೆ, ಸ್ನೇಹ ಮತ್ತು ಶಾಂತಿಯ ಸಂದೇಶವನ್ನು ನಮಗೆ ನೀಡಿದ್ದು, ನಾವು ಅನ್ಯಾಯ ಮತ್ತು ಸಂಪನ್ಮೂಲದ ಹಂಚಿಕೆಯಲ್ಲಿನ ಅಸಮರ್ಪಕತೆಯ ವಿರುದ್ಧ ದನಿ ಎತ್ತಬೇಕಿದೆ. ನಾವು ನಮ್ಮ ಹಕ್ಕುಗಳನ್ನು ಪಡೆಯುವ ಸಲುವಾಗಿ ಸ್ವಾತಂತ್ರ್ಯ ಯೋಧರು ಹಾಕಿಕೊಟ್ಟ ಹಾದಿಯನ್ನು ತುಳಿಯಬೇಕಿದೆ. ಬಡತನ, ಹಸಿವು, ದಾರಿದ್ರ್ಯ, ನಿರುದ್ಯೋಗ ದಂತಹ ಸಮಸ್ಯೆಗಳ ವಿರುದ್ದ ಸಂಘಟಿತ ಹೋರಾಟ ನಡೆಸಿ ಭಗತ್ ಸಿಂಗ್ ಅವರಿಗೆ ಗೌರವ ನೀಡೋಣ ಎಂದು ಕರೆ ನೀಡಿದರು.
ಕಟ್ಟಡ ಕಾರ್ಮಿಕರಾದ ಚಂದ್ರಕಾಂತ ಮಾಳಗಿ, ಶರಣಪ್ಪಾ ಚಿತ್ತಾಪೂರಕರ್, ದವಲಪ್ಪಾ ದೋರೆ, ಮಲ್ಲಪ್ಪಾ ಸೇಡಂ, ಆನಂನದ ಜಿನಕೇರಿ, ಸಾಮಸನ್ ಕೋಶಗಿ. ಅಬ್ರಾಹಂ ರಾಂಪೂರಹಳ್ಳಿ, ಶ್ರೀಶೈಲ್ ಕೆಂಚಗುಂಡಿ, ವಿಠಲ್ ರಾಠೋಡ. ಸಾಯಿನಾಥ್ ಚಿಟ್ಟೆಲಕರ್. ಎಸಪ್ಪಾ ಕೇದಾರ್, ಉಪಸ್ಥಿತರಿದ್ದರು.