3 ಲಕ್ಷ ರೂಪಾಯಿ ಡಿಸ್ಕೌಂಟ್‌ನಲ್ಲಿ ಸಿಗಲಿದೆ ಟಾಟಾ ನೆಕ್ಸಾನ್‌ ಇವಿ, ಈ ದಿನದವರೆಗೆ ಮಾತ್ರ ಇರುತ್ತೆ ಆಫರ್‌

ಬೆಂಗಳೂರು (ಅ.2): ದೇಶದಲ್ಲಿ ಹಬ್ಬದ ಸೀಸನ್‌ ಬಹುತೇಕ ಆರಂಭವಾಗಿದೆ. ಅಕ್ಟೋಬರ್ 3ರಿಂದ ನವರಾತ್ರಿ ಆರಂಭವಾಗಲಿದ್ದು, ಆ ಬಳಿಕ ದೇಶದಲ್ಲಿ ಹಬ್ಬದ ಸೀಸನ್ ಅಧಿಕೃತವಾಗಿ ಆರಂಭವಾಗಲಿದೆ. ಸಮಯದಲ್ಲಿ ಜನರು ಹೊಸ ಉತ್ಪನ್ನಗಳನ್ನು ಖರೀದಿಸಲು ಹೆಚ್ಚಿನ ಅಸಕ್ತಿ ವಹಿಸುತ್ತಾರೆ. ಆಟೋ ವಲಯ ಸಾಮಾನ್ಯವಾಗಿ ಹಬ್ಬದ ಋತುವಿನ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದು, ಈ ಋತುವಿನ ಲಾಭ ಪಡೆಯುವ ನಿಟ್ಟಿನಲ್ಲಿ ಹೊಸ ಹೊಸ ಆಫರ್‌ಗಳನ್ನು ಸಹ ನೀಡುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಅತಿದೊಡ್ಡ ಪೋರ್ಟ್‌ಫೋಲಿಯೊ ಹೊಂದಿರುವ ಆಟೋ ಉತ್ಪಾದನಾ ಕಂಪನಿ ಟಾಟಾ ಮೋಟಾರ್ಸ್ ಹಬ್ಬದ ಕೊಡುಗೆಗಳನ್ನು ಪರಿಚಯಿಸಿದೆ. ಕಂಪನಿಯು ತನ್ನ ಶಕ್ತಿಶಾಲಿ ಮತ್ತು ಜನಪ್ರಿಯ ಎಲೆಕ್ಟ್ರಿಕ್ ಕಾರುಗಳಾದ Nexon.ev, Punch.ev ಮತ್ತು Tiago.ev ಮೇಲೆ ಕೊಡುಗೆಗಳನ್ನು ಪ್ರಕಟಿಸಿದೆ. ಈ ಆಫರ್‌ಗಳ ಮೂಲಕ, ನೀವು 3 ಲಕ್ಷದವರೆಗೆ ರಿಯಾಯಿತಿಗಳನ್ನು ಪಡೆಯಬಹುದಾಗಿದೆ.

Tata Nexon.ev ಕಾರ್‌ನ ಮೇಲೆ ಅತ್ಯಧಿಕ ರಿಯಾಯಿತಿ: ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಟಾಟಾ ನೆಕ್ಸಾನ್ EV 3 ಲಕ್ಷದವರೆಗೆ ರಿಯಾಯಿತಿಯನ್ನು ಪಡೆಯಬಹುದು ಎಂದು ತಿಳಿಸಿದೆ. ಆದರೆ, ಇದು ವೇರಿಯಂಟ್‌ಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದಿದೆ.  3 ಲಕ್ಷದ ರಿಯಾಯಿತಿಯ ನಂತರ, ಈ ಕಾರಿನ ಬೆಲೆ 12.49 ಲಕ್ಷ ರೂ (ಎಕ್ಸ್ ಶೋ ರೂಂ) ಅಗಿರಲಿದೆ. ಇಷ್ಟು ದೊಡ್ಡ ರಿಯಾಯಿತಿಯ ನಂತರ, ಈ ಕಾರಿನ ಬೆಲೆಯು ಪೆಟ್ರೋಲ್ ರೂಪಾಂತರದ ಬೆಲೆಗೆ ಸಮನಾಗಿದೆ ಎಂದು ಕಂಪನಿ ಹೇಳಿದೆ.

Tata Punch.ev ಕಾರ್‌ಗೂ ರಿಯಾಯಿತಿ:ಟಾಟಾ ನೆಕ್ಸಾನ್ ಇವಿಯ ಹೊರತಾಗಿ, ಕಂಪನಿಯು ಜನಪ್ರಿಯ ಎಲೆಕ್ಟ್ರಿಕ್ ಕಾರ್ ಪಂಚ್ ಇವಿ ಮೇಲೆ ರಿಯಾಯಿತಿಯನ್ನು ನೀಡಿದೆ. Punch.ev ನಲ್ಲಿ ಕಂಪನಿಯು 1.20 ಲಕ್ಷದವರೆಗೆ ರಿಯಾಯಿತಿ ಘೋಷಿಸಲಾಗಿದೆ. ಈ ರಿಯಾಯಿತಿಯು ರೂಪಾಂತರವನ್ನು ಅವಲಂಬಿಸಿರುತ್ತದೆ. ಇದಲ್ಲದೇ Tiago.ev ನಲ್ಲಿ 40000 ರೂ ವರೆಗಿನ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ . ಆದರೆ, ಈ ಎಲ್ಲಾ ಕೊಡುಗೆಗಳು ಅಕ್ಟೋಬರ್ 31 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ.

ಟಾಟಾ ಮೋಟಾರ್ಸ್ ಮಾರಾಟವನ್ನು ಗಮನಿಸಿದರೆ, ಈ ಬಾರಿದ ದೊಡ್ಡ ಕುಸಿತ ಕಂಡುಬಂದಿದೆ. ಕಂಪನಿಯ ದೇಶೀಯ ಮಾರಾಟ ಶೇ.15ರಷ್ಟು ಕುಸಿದಿದೆ. ಸೆಪ್ಟೆಂಬರ್‌ನಲ್ಲಿ, ಕಂಪನಿಯು ಒಟ್ಟು 69694 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಸೆಪ್ಟೆಂಬರ್ 2023 ರಲ್ಲಿ ಕಂಪನಿಯು 82023 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಎಲೆಕ್ಟ್ರಿಕ್ ವಾಹನಗಳನ್ನು ಒಳಗೊಂಡಂತೆ ಒಟ್ಟು ಪ್ರಯಾಣಿಕ ವಾಹನಗಳ ಬಗ್ಗೆ ಮಾತನಾಡೋದಾದರೆ, ಈ ಅಂಕಿ ಅಂಶವು 41063 ಯುನಿಟ್ ಆಗಿದೆ. ಸೆಪ್ಟೆಂಬರ್ 2023 ರಲ್ಲಿ ಈ ಅಂಕಿ ಅಂಶವು 44089 ಘಟಕಗಳಷ್ಟಿತ್ತು. 8ರಷ್ಟು ಕುಸಿತ ಇಲ್ಲಿ ದಾಖಲಾಗಿದೆ. FY25 ರ ಎರಡನೇ ತ್ರೈಮಾಸಿಕದಲ್ಲಿ, ಕಂಪನಿಯು ಚಿಲ್ಲರೆ ವ್ಯಾಪಾರದಲ್ಲಿ (ವಾಹನ ನೋಂದಣಿ) ಶೇಕಡಾ 5 ರಷ್ಟು ಕುಸಿತವನ್ನು ಕಂಡಿದೆ.
ವಾಣಿಜ್ಯ ವಾಹನ ಕ್ಷೇತ್ರದ ಬಗ್ಗೆ ಹೇಳುವುದಾದರೆ ಇಲ್ಲಿಯೂ ಕುಸಿತ ದಾಖಲಾಗಿದೆ. ಸೆಪ್ಟೆಂಬರ್‌ನಲ್ಲಿ, ಕಂಪನಿಯು 28631 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಸೆಪ್ಟೆಂಬರ್ 2023 ರಲ್ಲಿ ಕಂಪನಿಯು 37214 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ವಿಭಾಗದಲ್ಲಿ ಶೇ.23ರಷ್ಟು ಕುಸಿತ ದಾಖಲಾಗಿದೆ. ಎರಡನೇ ತ್ರೈಮಾಸಿಕದಲ್ಲಿ, ವಾಣಿಜ್ಯ ವಾಹನಗಳ ಒಟ್ಟು ಮಾರಾಟವು 79931 ಯುನಿಟ್‌ಗಳಷ್ಟಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *