ಬಿಜೆಪಿಗರಿಗೆ ಒಳಗೆ ಹೋಗಲು ಆಸೆ‌ ಇದೆ ಅಲ್ವೇ! ಕಳಿಸ್ತೀವಿ : ಪ್ರಿಯಾಂಕ್ ಖರ್ಗೆ

ಹೈಲೈಟ್ಸ್‌:

  • ನೈತಿಕತೆ ಬಗ್ಗೆ ಮಾತನಾಡುವುದಾದರೆ ಬಿವೈ ವಿಜಯೇಂದ್ರ ಮೊದಲು ರಾಜೀನಾಮೆ ಕೊಡಬೇಕು ಎಂದರು.
  • ಬಿಜೆಪಿಯ ನೀತಿ ಪಾಠ ನರಿಗಳು ನ್ಯಾಯ ಹೇಳಿದ ಹಾಗೆ. ಬಿಎಸ್ ಯಡಿಯೂರಪ್ಪ ಅವಧಿಯಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿತ್ತು
  • ಬಿಜೆಪಿಗರಿಗೆ ಎರಡು ನಾಲಗೆ ಇದೆ, ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಾರೆ, ಆದರೆ ವಿಜಯೇಂದ್ರ ಬಗ್ಗೆ ಮೌನ ವಾಗಿದ್ದಾರೆ.

ಬೆಂಗಳೂರು: ಬಿಜೆಪಿಗರಿಗೆ ಒಳಗೆ ( ಜೈಲು) ಹೋಗಲು ಆಸೆ‌ ಇದೆ ಅಲ್ವೇ! ಕಳಿಸ್ತೀವಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧದ ಹಗರಣಗಳ ಆರೋಪದ ತನಿಖೆ ಪ್ರಗತಿಯಲ್ಲಿದ್ದು, ಕಾನೂನು ಪ್ರಕ್ರಿಯೆ ಕೊಂಚ ವಿಳಂಬ ಆದರೂ ನ್ಯಾಯ ನಿರಾಕರಣೆ ಆಗುವುದಿಲ್ಲ ಎಂದರು.

ಬಿಜೆಪಿ ನಾಯಕರು ಕ್ಯಾಮರಾ ಮುಂದೆ ಬಂದಾಗ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಾರೆ. ಆದರೆ ಕಾನೂನು ಪ್ರಕಾರ ಯಾರೂ ಮಾತನಾಡ್ತಿಲ್ಲ. ಸಿದ್ದರಾಮಯ್ಯ ತಪ್ಪು ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಅಮವಾಸ್ಯೆ, ದಸರಾ, ದೀಪಾವಳಿ ಬಳಿಕ ರಾಜೀನಾಮೆ ಎನ್ನುತ್ತಾರೆ. ಬಿಜೆಪಿಗರು ನೈತಿಕತೆ, ಮಾರಲ್ ಗ್ರೌಂಡ್ ಎಂಬಿತ್ಯಾದಿ ಪದಗಳನ್ನು ಕಲಿತುಕೊಂಡಿದ್ದಾರೆ. ನೈತಿಕತೆ ಬಗ್ಗೆ ಮಾತನಾಡುವುದಾದರೆ ಬಿವೈ ವಿಜಯೇಂದ್ರ ಮೊದಲು ರಾಜೀನಾಮೆ ಕೊಡಬೇಕು ಎಂದರು.

ವಿಜಯೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ಇರುವುದು ಒಪ್ಪಿಕೊಂಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ವಿಜಯೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ. ಲಂಚ, ವಂಚನೆ, ಅಕ್ರಮ ಹಣಕಾಸು ವರ್ಗಾವಣೆ ಕಾಯ್ದೆ ಅಡಿಯಲ್ಲಿ ಇ.ಡಿ ಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿಯ ನೀತಿ ಪಾಠ ನರಿಗಳು ನ್ಯಾಯ ಹೇಳಿದ ಹಾಗೆ. ಬಿಎಸ್ ಯಡಿಯೂರಪ್ಪ ಅವಧಿಯಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿತ್ತು. ಹಾಗಾದರೆ ಯಡಿಯೂರಪ್ಪ ರಾಜೀನಾಮೆ ಕೊಟ್ರಾ? ಎಂದು ಪ್ರಶ್ನಿಸಿದರು.

ಅಮಿತ್ ಶಾ ಲೋಕಸಭೆಯಲ್ಲಿ ಕೊಟ್ಟ ಮಾಹಿತಿ ಪ್ರಕಾರ 2014 -24 ವರೆಗೆ ಪಿಎಂಎಲ್ ಎ ಕೇಸ್ 5297 ಕೇಸ್ ದಾಖಲಾಗಿದೆ. ಆದರೆ ಈ ಪೈಕಿ ಶಿಕ್ಷೆ ಆಗಿರುವುದು 40 ಕೇಸ್ ಗಳಲ್ಲಿ ಮಾತ್ರ. ಬಹುತೇಕ ಕೇಸ್ ದಾಖಲಾಗಿರುವುದು ವಿರೋಧ ಪಕ್ಷಗಳ ವಿರುದ್ಧವಾಗಿದೆ ಎಂದು ವಿವರಿಸಿದರು.ಸಿಬಿಐ, ಐಟಿ, ಇ.ಡಿ ಕೇಂದ್ರದ ಕೈಬೊಂಬೆ ಆಗಿದೆ. ಕರ್ನಾಟಕದಲ್ಲಿ ಒಂದು ಕಣ್ಣಿಗೆ ಬಣ್ಣ ಮತ್ತೊಂದಕ್ಕೆ ಸುಣ್ಣ ಬಳಿಯುತ್ತಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ಹಾಗೂ ಕುಟುಂಬದ ವಿರುದ್ಧ ಕೇಸ್ ಏಕೆ ಕ್ರಮ ಆಗಿಲ್ಲ. 2020 ರಲ್ಲಿ ಇ.ಡಿಯಲ್ಲಿ ದಾಖಲಾದ ಪ್ರಕರಣದಲ್ಲಿ 12.50 ಕೋಟಿ ಆರ್ ಟಿ ಜಿಎಸ್ ಮೂಲಕ ಹಣ ವರ್ಗಾವಣೆ ಆಗಿದೆ ಎಂದಿದೆ. ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆ ಬಿಎಸ್ ವೈ ಕುಟುಂಬದ್ದು ಎಂಬ ಮಾಹಿತಿ ಇದೆ .ಇ.ಸಿ‌.ಐ.ಆರ್ ಕೇಸ್ ವಿಜಯೇಂದ್ರ ವಿರುದ್ಧ ದಾಖಲಾಗಿರುದರಿಂದ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ವಿಜಯೇಂದ್ರ ಬ್ಯ್ಲಾಕ್ ಮೇಲ್ ಮಾಡಲು ಕೇಸ್ ಬಳಕೆ ಮಾಡಬಹುದು. ಅಥವಾ ಕೇಸ್ ಮುಚ್ಚಿ ಹಾಕಲು ಇಷ್ಟೊಂದು ತಡ ಮಾಡಬಹುದು. ಪದೇ ಪದೇ ವಿಜಯೇಂದ್ರ ದುಬೈಗೆ ಏಕೆ ಹೋಗ್ತಾರೆ? ಎಂದು ಯತ್ನಾಳ್ ಪ್ರಶ್ನಿಸುತ್ತಾರೆ. ಸರ್ಕಾರ ಕೆಡವಲು 1200 ಕೋಟಿ ಸಿದ್ಧವಾಗಿದೆ ಎಂದು ಯತ್ನಾಳ್ ಹೇಳುತ್ತಾರೆ. ಈ ಹಣ ಎಲ್ಲಿಂದ ಬಂದಿದೆ? ಯತ್ನಾಳ್ ಆರೋಪ ಮಾಡಿದ್ದು ವಿಜಯೇಂದ್ರ ವಿರುದ್ಧನಾ? ಎಂದು ಪ್ರಶ್ನಿಸಿದರು.

ಬಿಜೆಪಿಗರಿಗೆ ಎರಡು ನಾಲಗೆ ಇದೆ, ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಾರೆ, ಆದರೆ ವಿಜಯೇಂದ್ರ ಬಗ್ಗೆ ಮೌನ ವಾಗಿದ್ದಾರೆ. ಕೇಂದ್ರ ಬಿಜೆಪಿ ಆದೇಶದ ಮೇರೆಗೆ ಮುಡಾ ಹಗರಣಲ್ಲಿ ಇ.ಡಿ ಎಂಟ್ರಿ ಆಗಿದೆ ಎಂದು ಆರೋಪ ಮಾಡಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *