ಪಡಿತರ ಚೀಟಿದಾರರಿಗೆ ರೇಷನ್ ಜೊತೆ ಸಿಗುತ್ತೆ ಇಷ್ಟೆಲ್ಲಾ ಸೌಲಭ್ಯಗಳು!
Ration card: ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಆಹಾರ ಭದ್ರತೆಯನ್ನು ಒದಗಿಸುವ ಪಡಿತರ ಚೀಟಿ ಕೋಟ್ಯಾಂತರ ಕುಟುಂಬಗಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರೇಷನ್ ಕಾರ್ಡ್ ಹೊಂದಿರುವವರಿಗೆ ಉಚಿತ ಅಕ್ಕಿ, ಆಹಾರದ ಕಿಟ್ ದೊರೆಯುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ರೇಷನ್ ಕಾರ್ಡ್ ಕೇವಲ ಉಚಿತ ಪಡಿತರ ಪಡೆಯಲು ಮಾತ್ರವಲ್ಲ ಇದರಿಂದ ಇನ್ನೂ ಹಲವು ಪ್ರಯೋಜನಗಳನ್ನು ಪಡೆಯಬಹುದು.
ಪಡಿತರ ಚೀಟಿದಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸುವ ಸೌಕರ್ಯಗಳನ್ನು ಪಡೆಯುವುದು ಸುಲಭವಾಗುತ್ತದೆ. ರೇಷನ್ ಕಾರ್ಡ್ ಇದ್ದಲ್ಲಿ ಏನೆಲ್ಲಾ ಸೌಕರ್ಯಗಳನ್ನು ಪಡೆಯುವುದು ಎಂದು ತಿಳಿಯಲು ಮುಂದೆ ಓದಿ.
ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳಿವು:
ಉಚಿತ ಪಡಿತರ:
ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಪ್ರತಿ ತಿಂಗಳು ಉಚಿತ ಪಡಿತರವನ್ನು ಒದಗಿಸುತ್ತದೆ. ಇದು ಸರ್ಕಾರದ ಬಹಳ ಮಹತ್ವದ ಉಪಕ್ರಮವಾಗಿದ್ದು ಇದು ನಾಗರೀಕರ ಆಹಾರದ ಅವಶ್ಯಕತೆಯನ್ನು ಪೂರೈಸುತ್ತದೆ.
ಸರ್ಕಾರದ ವಿವಿಧ ಯೋಜನೆಗಳ ಲಾಭ:
ಪಡಿತರ ಚೀಟಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸುವ ಉಚಿತ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಹಾಯಕವಾಗಿದೆ. ಉದಾಹರಣೆಗೆ, ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಉಜ್ವಲ ಯೋಜನೆಯಡಿ ಫ್ರೀ ಗ್ಯಾಸ್ ಸಿಲಿಂಡರ್, ಕರ್ನಾಟಕ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯಬಹುದು.
ಗುರುತಿನ ಪುರಾವೆ:
ಪಡಿತರ ಚೀಟಿಗಳನ್ನು ಪ್ರತಿ ಭಾರತೀಯ ನಾಗರೀಕನ ಗುರುತಿನ ಪುರಾವೆ ನೀಡಬಲ್ಲ ದಾಖಲೆಗಳಲ್ಲಿ ಮುಖ್ಯ ದಾಖಲೆಯಾಗಿ ಪರಿಗಣಿಸಲಾಗುತ್ತದೆ.
ಆರೋಗ್ಯ ವಿಮಾ ಯೋಜನೆ:
ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಸಿಗುವ ಉಚಿತ ಆರೋಗ್ಯ ವಿಮೆಯಂತಹ ಯೋಜನೆಗಳ ಪ್ರಯೋಜನಗಳು ಸಿಗಲಿವೆ.
ಶೈಕ್ಷಣಿಕ ನೆರವು:
ಕೆಲವು ರಾಜ್ಯಗಳಲ್ಲಿ ಪಡಿತರ ಚೀಟಿದಾರರ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಉಚಿತವಾಗಿ ಅಥವಾ ಕಡಿಮೆ ಶುಲ್ಕದಲ್ಲಿ ನೀಡಲಾಗುತ್ತದೆ.
ಪಿಂಚಣಿ ಸೌಲಭ್ಯ:
ಪಡಿತರ್ ಚೀಟಿದಾರರಿಗೆ ವಯೋವೃದ್ಧ ಪಿಂಚಣಿ ಮತ್ತು ವಿಧವೆ ಪಿಂಚಣಿಯಂತಹ ಹಲವು ಆದಾಯ ಒದಗಿಸುವ ಸೌಲಭ್ಯಗಳು ಲಭ್ಯವಾಗುತ್ತವೆ.
ಆದಾಗ್ಯೂ, ಪಡಿತರ ಚೀಟಿಯನ್ನು ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ಎಂದು ವರ್ಗೀಕರಿಸಲಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮೇಲೆ ತಿಳಿಸಿದ ಎಲ್ಲಾ ಸೌಲಭ್ಯಗಳು ದೊರೆಯುತ್ತವೆ. ಎಪಿಎಲ್ ಕಾರ್ಡ್ ದಾರರಿಗೆ ಇವುಗಳಲ್ಲಿ ಕೆಲವು ಸೌಲಭ್ಯಗಳಷ್ಟೇ ದೊರೆಯುತ್ತದೆ.