1987ರಲ್ಲೇ ಕಿಸ್ಸಿಂಗ್ ಸೀನ್ ಮಾಡಿದ್ರೂ ಸಂಭಾವನೆ ಕೊಡಲಿಲ್ಲ; ಕಣ್ಣೀರಿಟ್ಟ ಕಥೆ ಹೇಳಿದ ಹಿರಿಯ ನಟಿ

ಮುಂಬೈ: ಇಂದಿನ ಬಾಲಿವುಡ್ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್‌ಗಳು ಇದ್ದೇ ಇರುತ್ತವೆ. ಆದ್ರೆ 80ರ ದಶಕದಲ್ಲಿಯೇ ಈ ನಟಿ ಸೂಪರ್ ಸ್ಟಾರ್ ಜೊತೆ ಕಿಸ್ಸಿಂಗ್ ಸೀನ್ ಮಾಡಿದ್ದರು. ಕೆಲ ದಿನಗಳಿಂದ ಈ ನಟಿಯ ಸಂದರ್ಶನದ ವಿಡಿಯೋ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 1987ರಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ನಟನ ತುಟಿಗೆ ತುಟಿ ಸೇರಿಸಿದ್ದರು. ಆದ್ರೆ ಈ ದೃಶ್ಯಕ್ಕೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿತ್ತು. ಹಾಗಾಗಿ ಬಹುತೇಕರಿಗೆ ಈ ಸಿನಿಮಾದಲ್ಲಿ ಚುಂಬನದ ದೃಶ್ಯವೊಂದಿತ್ತು ಎಂಬ ವಿಷಯ ತಿಳಿದಿಲ್ಲ. ಕಿಸ್ಸಿಂಗ್ ಸೀನ್ ಮಾಡಿದ್ರೂ ನಟಿಗೆ ಯಾವುದೇ ಸಂಭಾವನೆ ಸಿಕ್ಕಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಂದು ಅಳುತ್ತಲೇ ಚಿತ್ರದ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ ಘಟನೆಯನ್ನು ನಟಿ ಸಂದರ್ಶನವೊಂದರಲ್ಲಿ ಮೆಲುಕು ಹಾಕಿಕೊಂಡಿದ್ದಾರೆ.

ಹಿರಿಯ ನಟಿ ಮೀನಾಕ್ಷಿ ಶೇಷಾದ್ರಿಯವರು 1987ರಲ್ಲಿ ಬಿಡುಗಡೆಯಾದ ‘ಡಕಾಯತ್’ ಸಿನಿಮಾದಲ್ಲಿ ನಟ ಸನ್ನಿ ಡಿಯೋಲ್ ಜೊತೆ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಿದ್ದರು. 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಮೀನಾಕ್ಷಿ ಶೇಷಾದ್ರಿ, ಸದ್ಯ ಸಂಪೂರ್ಣವಾಗಿ ಬಣ್ಣದ ಲೋಕದಿಂದ ದೂರವಾಗಿದ್ದಾರೆ. ಡಕಾಯತ್ ಸಿನಿಮಾ ಒಪ್ಪಂದ ಪತ್ರಕ್ಕೆ ಮೀನಾಕ್ಷಿ ಶೇಷಾದ್ರಿ ಕಣ್ಣೀರು ಹಾಕಿದ್ದರು. ಇದಕ್ಕೆ ಕಾರಣ ಚಿತ್ರದ ನಿರ್ದೇಶಕ ರಾಹುಲ್ ರವೈಲ್. ಈ ವಿಷಯವನ್ನು ಹಲವು ಸಂದರ್ಶನಗಳಲ್ಲಿ ಮೀನಾಕ್ಷಿ ಶೇಷಾದ್ರಿ ಅವರೇ ಹೇಳಿಕೊಂಡಿದ್ದಾರೆ.

ಫ್ರೈಡೇ ಟಾಕೀಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮೀನಾಕ್ಷಿ ಶೇಷಾದ್ರಿ, ಅಂದಿನ ಕಾಲಘಟ್ಟದಲ್ಲಿ ರಾಹುಲ್ ರವೈಲ್ ಜೀ ಯಶಸ್ವಿ ನಿರ್ದೇಶಕರು. ಹಾಗಾಗಿ ರಾಹುಲ್ ಸಿನಿಮಾಗಳಲ್ಲಿ ನಟಿಸಲು ಕಲಾವಿದರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ‘ಬೇತಾಬ್’, ‘ಅರ್ಜುನ್’ ಮತ್ತು ‘ಲವ್ ಸ್ಟೋರಿ’ ಅಂತಹ ಸೂಪರ್ ಹಿಟ್‌ ಸಿನಿಮಾಗಳಿಗೆ ರಾಹುಲ್ ರವೈಲ್ ಆಕ್ಷನ್ ಕಟ್ ಹೇಳಿದ್ದರು. ಇಂತಹ ಸ್ಟಾರ್ ನಿರ್ದೇಶಕರೊಂದಿಗೆ ಕೆಲಸ ಮಾಡುವ  ಅವಕಾಶ ಸಿಕ್ಕಿದೆ ಎಂದು ಕಥೆ ಹೇಳಲು ಹೋಗಿದ್ದೆ ಎಂದ ಹೇಳಿದ್ದಾರೆ.

ಅಂದು ನನ್ನ ಬಳಿ ಬಂದ ರಾಹುಲ್ ರವೈಲ್, ಈ ಸಿನಿಮಾದಲ್ಲಿ ಸನ್ನಿ ಡಿಯೋಲ್‌ ಅವರಿಗೆ ಮೊದಲ ಪ್ರಾಮುಖ್ಯತೆ ನೀಡಲಾಗುತ್ತೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದರು. ಐದರಿಂದ ಆರು ದೃಶ್ಯ ಮತ್ತು ಎರಡ್ಮೂರು ಹಾಡುಗಳಲ್ಲಿ ನಿಮ್ಮನ್ನು ತೋರಿಸಲಾಗುತ್ತದೆ. ನಾನು ನಟಿಯರನ್ನು ಪರದೆ ಮೇಲೆ ತುಂಬಾ ಸುಂದರವಾಗಿ ತೋರಿಸುತ್ತೇನೆ ಎಂದು ನಂಬಿದ್ದೇನೆ. ಕೆಲವೇ ಸೀನ್ ಆದ್ರೂ ನಿಮ್ಮ ಪಾತ್ರ ವಿಶೇಷವಾಗಿರುತ್ತೆ ಎಂದಿದ್ದರು. ನಂತರ ಸಹಿ ಹಾಕುವ ಸಂದರ್ಭದಲ್ಲಿ ನಾನು, ನಿಮಗೆ ಯಾವುದೇ ಸಂಭಾವನೆ ನೀಡಲ್ಲ. ನನ್ನ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಅವಕಾಶವೇ ಸಂಭಾವನೆ ಎಂದಿದ್ದರು.

ನಾನು ಏನು ಸಂಭಾವನೆ ಕೊಡುವ ಸಂಭಾವನೆಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ನಾನು ತುಂಬಾ ಚಿಕ್ಕವಳಾಗಿದ್ದರಿಂದ ಹೆಚ್ಚು ಹಣ ಸಂಪಾದಿಸಬೇಕು ಅನ್ನೋದು ನನ್ನ ಆಸೆಯಾಗಿತ್ತು. ಸ್ಟಾರ್ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಕೆಲಸದ ಖುಷಿ ಮತ್ತು ಸಂಭಾವನೆ ಇಲ್ಲ ಅನ್ನೋ ದುಃಖ ಸೇರಿ ಕಣ್ಣೀರು ಹಾಕುತ್ತಲೇ ನಗುಮೊಗದಿಂದ ಸಹಿ ಹಾಕಿದೆ ಎಂದು ಅಂದಿನ ಘಟನೆಯನ್ನು ಮೀನಾಕ್ಷಿ ಶೇಷಾದ್ರಿ ವಿವರಿಸಿದ್ದಾರೆ. ನಾನು ಅವರ ದೊಡ್ಡ ಅಭಿಮಾನಿಯಾಗಿದ್ದರಿಂದ ಸಿನಿಮಾ ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

 

ಡಕಾಯತ್ ಚಿತ್ರದ ಹಾಡಿನಲ್ಲಿ ನಾನು ಮತ್ತು ಸನ್ನಿ ಡಿಯೋಲ್ ದೋಣಿಯಲ್ಲಿ ಕುಳಿತಿರುತ್ತೇವೆ. ಆಗ ಸನ್ನಿ ಡಿಯೋಲ್ ಬಂದು ಕಿಸ್ ಮಾಡುತ್ತಾರೆ. ಸಂಪ್ರದಾಯಸ್ಥ ಕುಟುಂಬದಿಂದ ಬಂದಿರೋ ಕಾರಣ ಈ ದೃಶ್ಯ ಮಾಡುವಾಗ ಭಯಗೊಂಡಿದ್ದೆ. ಆದರೆ ಸನ್ನಿ ಡಿಯೋಲ್ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರಿಂದ ಸೀನ್ ಯಾವುದೇ ಅಡೆತಡೆಯಿಲ್ಲದೇ ಶೂಟ್ ಆಯ್ತು. ಆದ್ರೆ ಆ ದೃಶ್ಯಕ್ಕೆ ಸೆನ್ಸಾರ್‌ ಮಂಡಳಿ ಕತ್ತರಿ ಹಾಕಿತು ಎಂದರು.

ಸನ್ನಿ ಡಿಯೋಲ್ ಮತ್ತು ಮೀನಾಕ್ಷಿ ಶೇಷಾದ್ರಿ ಅಭಿನಯದ ‘ಡಕಾಯತ್’ ಏಪ್ರಿಲ್ 10, 1987 ರಂದು ಬಿಡುಗಡೆಯಾಯಿತು. ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಯಿತು. ಚಿತ್ರದಲ್ಲಿ ಸನ್ನಿ ಮತ್ತು ಮೀನಾಕ್ಷಿ ಜೊತೆಗೆ ರಾಖಿ, ಸುರೇಶ್ ಓಬೆರಾಯ್, ರಜಾ ಮುರಾದ್, ಪರೇಶ್ ರಾವಲ್ ಮತ್ತು ಉರ್ಮಿಳಾ ಮಾತೊಂಡ್ಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *