ಕಂಟ್ರಾಕ್ಟರ್‌ ನನ್ನ ವಿರುದ್ಧ ಅರೋಪ ಮಾಡಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು(ಡಿ.29):  ಗುತ್ತಿಗೆದಾರ ಸಚಿನ್ ಆತ್ಮಹತ್ಯೆಯಲ್ಲಿ ನನ್ನ ಪಾತ್ರವಿಲ್ಲ ಈ ಬಗ್ಗೆ ಸಿಐಡಿ ತನಿಖೆ ಆಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ವೈಯಕ್ತಿಕ ವ್ಯವಹಾರಗಳಿಂದ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಫ್‌ಐಆರ್‌ನಲ್ಲಿ ನನ್ನ ಹೆಸರಿಲ್ಲ ಹಾಗೂ ಸಚಿನ್‌ ಬರೆದಿದ್ದರು ಎನ್ನಲಾದ ಡೆತ್‌ ನೋಟ್‌ನಲ್ಲೂ ನನ್ನ ಮೇಲೆ ಆರೋಪವಿಲ್ಲ. ಆದರೂ ಬಿಜೆಪಿಗರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಐಡಿ ತನಿಖೆ ನಡೆಸುವಂತೆ ಎಂದ ಗೃಹ ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ನನ್ನ ಹೆಸರಿಲ್ಲ ಹಾಗೂ ಸಚಿನ್ ಬರೆದಿದ್ದರು ಎನ್ನಲಾದ ಡೆತ್‌ ನೋಟ್‌ನಲ್ಲೂ ನನ್ನ ಮೇಲೆ ಆರೋಪವಿಲ್ಲ. ಆದರೂ ಬಿಜೆಪಿ ನಾಯಕರು ನನ್ನ ರಾಜೀ ನಾಮೆ ಕೇಳುತ್ತಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಐಡಿ ಅಥವಾ ಬೇರೆ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

 

ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಕಲಬುರಗಿ ರಿಪಬ್ಲಿಕ್ ಆಗಿದೆ ಎಂದು ಬಿಜೆಪಿನಾಯಕರು ಆರೋಪಿಸು ತ್ತಿದ್ದಾರೆ. ಕಲಬುರಗಿ ಜಿಲ್ಲೆ ಅಭಿವೃದ್ಧಿ ವಿಚಾರ ದಲ್ಲಿ ರಿಪಬ್ಲಿಕ್ ಆಗಿದೆಯೇ ಹೊರತು, ಬಳ್ಳಾರಿ ರಿಪಬ್ಲಿಕ್ ರೀತಿ ಆಗಿಲ್ಲ. ಜಯದೇವ ಆಸ್ಪತ್ರೆ, ಕಲ್ಯಾಣ ಪಥದ ಮೂಲಕ ರಸ್ತೆ ಅಭಿವೃದ್ಧಿ, ಕೆಕೆಆರ್‌ಡಿಬಿಯಿಂದ ಹಲವು ಯೋಜನೆಗಳ ಅನುಷ್ಠಾನ ಮಾಡುವ ಮೂಲಕ ಜಿಲ್ಲೆಯು ಅಭಿವೃದ್ದಿ ರಿಪಬ್ಲಿಕ್ ಆಗಿದೆ. ನನ್ನ ಮೇಲೆ ಆರೋಪ ಮಾಡುವ ಬಿಜೆಪಿ ನಾಯಕರು ಮೊದಲು ಅವರ ಪಕ್ಷದ ಜಿಲ್ಲಾ ನಾಯಕರ ಬಗ್ಗೆ ತಿಳಿದುಕೊಳ್ಳಲಿ. ಅವರ ಪಕ್ಷದ ನಾಯಕರೇ ಐಪಿಎಲ್ ಬೆಟ್ಟಿಂಗ್ ದಂಧೆ, ಮರಳು ಮಾಫಿಯಾ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅದರಲ್ಲಿ ಸಚಿನ್ ಕೆಲಸ ಮಾಡುತ್ತಿದ್ದ ಸಂಸ್ಥೆ ಮಾಲೀಕರೂ ಆರೋಪಿಗಳಾಗಿದ್ದಾರೆ. ಟೆಂಡರ್‌ಗೆ ಸಂಬಂಧಿಸಿ ಇಎಂಡಿ ಹಣ ಠೇವಣಿಯನ್ನಾಗಿ ಡಲು ಸಚಿನ್ ಆರೋಪಿಗಳಿಂದ ₹65 ಲಕ ಪಡೆದಿದ್ದ ಎಂಬು ದನ್ನು ಆರೋಪಿಗಳು ತಿಳಿಸಿದ್ದಾರೆ. ಆದರೆ, ಸಚಿನ್ ಮಾತ್ರ ಕೆಐಎಡಿಬಿ ಸೇರಿ ಇನ್ನಿತರ ಇಲಾಖೆಗಳ ಗುತ್ತಿಗೆ ಕೊಡಿಸಲು ಹಣ ಪಡೆದಿದ್ದರು ಎಂದು ಆರೋಪಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಇಡೀ ಪ್ರಕರಣದಲ್ಲಿ ನನ್ನ ಪಾತ್ರ ಏನಿದೆ ಎಂಬುದನ್ನು ಬಿಜೆಪಿ ನಾಯಕರು ತಿಳಿಸಬೇಕು ಎಂದರು.

ಯಡಿಯೂರಪ್ಪ ಅವರ ಪೋಕ್ಸೋ ಪ್ರಕರಣ, ಮುನಿರತ್ನ ಮತ್ತು ಸಿ.ಟಿ.ರವಿ ಅವರ ಪ್ರಕರಣಗಳನ್ನು ಮುಚ್ಚಿ ಹಾಕಲು ಬಿಜೆಪಿ ನಾಯಕರು ನನ್ನ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಅಲ್ಲದೆ, ಕಲಬುರಗಿಯಲ್ಲಿ ಪೊಲೀಸ್ ಠಾಣೆಗೆ ತೆರಳಿ ನನ್ನ ವಿರುದ್ದ ಎಫ್‌ಐಆರ್ ದಾಖಲಿಸುವಂತೆ ಗದ್ದಲ ಎಬ್ಬಿಸಿದ್ದಾರೆ ಎಂದು ದೂರಿದರು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *