ರೈಲ್ವೆ ಇಲಾಖೆ ಒಂದು ದಿನಕ್ಕೆ ಗಳಿಸೋ ಆದಾಯ ಕೇಳಿದ್ರೆ ದಂಗಾಗ್ತೀರಿ

ಭಾರತದ ರೈಲ (ndian Railways)ನ್ನು ಭಾರತೀಯರ ಜೀವನಾಡಿ ಅಂತ ಕರೆಯಲಾಗುತ್ತೆ. ಭಾರತದ ರೈಲು ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲು ಜಾಲ (Rail Network )ವಾಗಿದೆ. ಪ್ರತಿ ವರ್ಷ ಕೋಟ್ಯಾಂತರ ಮಂದಿ ಭಾರತೀಯ ರೈಲಿನಲ್ಲಿ ಪ್ರಯಾಣ ಬೆಳೆಸ್ತಾರೆ. ಪ್ರಯಾಣಿಕರ ಅನುಕೂಲಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಭಾರತೀಯ ರೈಲು ಮಾಡ್ತಿದೆ. ಕಳೆದ ಕೆಲ ವರ್ಷಗಳಿಂದ ಹೊಸ ಹೊಸ ಸೌಲಭ್ಯಗಳನ್ನು ರೈಲ್ವೆ ಇಲಾಖೆ ಜಾರಿಗೆ ತರ್ತಿದೆ. ಇದ್ರಿಂದಾಗಿ ಮತ್ತಷ್ಟು ಪ್ರಯಾಣಿಕರು ರೈಲು ಪ್ರಯಾಣಕ್ಕೆ ಆಕರ್ಷಿತರಾಗಿದ್ದಾರೆ. ದೂರದ ಪ್ರಯಾಣ ಅಥವಾ ಪ್ರವಾಸ ಎಂದಾಗ ಮೊದಲ ಆಯ್ಕೆ ರೈಲು. ಹಬ್ಬದ ಸಮಯದಲ್ಲಿ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಡಬಲ್ ಆಗುತ್ತೆ. ಭಾರತೀಯರ ಮನಸ್ಥಿತಿಯನ್ನು ಗಮನದಲ್ಲಿಟ್ಕೊಂಡು ರೈಲ್ವೆ ಇಲಾಖೆ ಪ್ರತಿ ದಿನ ಸುಮಾರು 13 ಸಾವಿರ ರೈಲುಗಳನ್ನು ಓಡಿಸ್ತಿದೆ. ಭಾರತ ದೊಡ್ಡ ರೈಲ್ವೆ ಜಾಲವನ್ನು ಹೊಂದಿದೆ. ಭಾರತದಲ್ಲಿ ರೈಲು ಮಾರ್ಗಗಳ ಉದ್ದ 1,26,366 ಕಿಲೋಮೀಟರ್‌ . ಇದರಲ್ಲಿ ರನ್ನಿಂಗ್ ಟ್ರ್ಯಾಕ್‌ನ ಉದ್ದ 99,235 ಕಿಲೋಮೀಟರ್‌. ಯಾರ್ಡ್‌ಗಳು ಮತ್ತು ಸೈಡಿಂಗ್‌ ಸೇರಿ ಒಟ್ಟು ಮಾರ್ಗ 1,26,366 ಕಿಲೋಮೀಟರ್‌ಗಳು. ಭಾರತದಲ್ಲಿ ರೈಲು ನಿಲ್ದಾಣಗಳ ಸಂಖ್ಯೆ 8,800 ಕ್ಕೂ ಹೆಚ್ಚಿದೆ.

ರೈಲಿನ ಒಂದು ದಿನದ ಗಳಿಕೆ ಎಷ್ಟು? : ಪ್ರತಿ ದಿನ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಬೆಳೆಸ್ತಾರೆ. ವರ್ಷಕ್ಕೆ 3 ಕೋಟಿಗೂ ಹೆಚ್ಚು ಮಂದಿ ರೈಲಿನಲ್ಲಿ ಪ್ರಯಾಣ ಬೆಳೆಸ್ತಾರೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಎಲ್ಲ ಪ್ರಯಾಣಿಕರಿಂದ ರೈಲ್ವೆ ಇಲಾಖೆ ಟಿಕೆಟ್ ಶುಲ್ಕ ವಸೂಲಿ ಮಾಡುತ್ತದೆ. ಯಾವುದೇ ಪ್ರಯಾಣಿಕ ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸುವಂತಿಲ್ಲ. ಇದು ರೈಲಿನ ಕಟ್ಟುನಿಟ್ಟು ನಿಯಮ. ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸಿದ ವ್ಯಕ್ತಿಗೆ ದಂಡ ಅಥವಾ ಜೈಲು ಶಿಕ್ಷೆಯಾಗುತ್ತೆ.

 

ರೈಲ್ವೆ ಇಲಾಖೆ ಮಾಹಿತಿ ಪ್ರಕಾರ, ರೈಲ್ವೆ ಇಲಾಖೆಯ ಪ್ರತಿ ದಿನನ ಆದಾಯ 600 ಕೋಟಿ ರೂಪಾಯಿ. 2021 -2022ರಲ್ಲಿ ಈ ಮೊತ್ತ 400 ಕೋಟಿಯಿತ್ತು. ಆದ್ರೆ ಈ ಎಲ್ಲ ಆದಾಯ ಬರಿ ಟಿಕೆಟ್ ನಿಂದ ಬರೋದಿಲ್ಲ. ರೈಲ್ವೆ  ಆದಾಯದಲ್ಲಿ ಪ್ರಯಾಣಿಕರ ಟಿಕೆಟ್ ದರದ ಪಾಲು ಕೇವಲ ಶೇಕಡಾ 20.02 ರಷ್ಟು ಮಾತ್ರ. ಉಳಿದ ಶೇಕಡಾ 75.02 ರಷ್ಟು ಸರಕು ಸಾಗಣೆಯಿಂದ ಬರುತ್ತದೆ. ಉಳಿದೆ ಶೇಕಡಾ 4.6 ರಷ್ಟು ಆದಾಯವನ್ನು ರೈಲ್ವೆ ಇಲಾಖೆ ವಿವಿಧ ಮೂಲಗಳಿಂದ ಗಳಿಸುತ್ತದೆ.

 

ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಆದಾಯ :  ಮುಂದಿನ ಹಣಕಾಸು ವರ್ಷದಲ್ಲಿ ರೈಲ್ವೆಯ ಒಟ್ಟು ಗಳಿಕೆ 3 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಲಿದೆ. ಅದ್ರಲ್ಲಿ 92 ಸಾವಿರ ಕೋಟಿ ರೂಪಾಯಿ ಪ್ರಯಾಣಿಕರಿಂದ ಬರುವ ನಿರೀಕ್ಷೆ ಇದೆ.  ಎಸಿ ರೈಲಿಗೆ ಬೇಡಿಕೆ ಹೆಚ್ಚಾಗಿದೆ. ಹಾಗೆಯೇ ವಂದೇ ಭಾರತ್ನ ಪ್ರೀಮಿಯಂ ಕ್ಲಾಸ್ ರೈಲಿನ ಆಗಮನದ ನಂತ್ರ ಗಳಿಕೆ ನಿರಂತರವಾಗಿ ಹೆಚ್ಚಾಗ್ತಿದೆ. ಪ್ರಯಾಣಿಕರನ್ನು ಆಕರ್ಷಿಸಲು ರೈಲ್ವೆ ಇಲಾಖೆ ಮತ್ತಷ್ಟು ಹೊಸ ಪ್ಲಾನ್ ಗಳನ್ನು ಮಾಡ್ಕೊಂಡಿದೆ. 2025-26ರಲ್ಲಿ AC3 ಶ್ರೇಣಿಯ ಪ್ರಯಾಣಿಕರಿಂದ ಸುಮಾರು 37,115.32 ಕೋಟಿ ರೂಪಾಯಿಗಳ ಗರಿಷ್ಠ ಮೊತ್ತ ಗಳಿಸುವ ಗುರಿಯನ್ನು ಹೊಂದಿದೆ. 2024-25ರಲ್ಲಿ AC3 ಶ್ರೇಣಿಯಿಂದ 30,088.59 ಕೋಟಿ ರೂಪಾಯಿ ಗಳಿಸಿದೆ. ಸ್ಲೀಪರ್ ಕ್ಲಾಸ್ ಪ್ರಯಾಣಿಕರಿಂದ ಬರುವ ಆದಾಯ  2025-26ರಲ್ಲಿ ಸುಮಾರು ಶೇಕಡಾ 6 ರಷ್ಟು ಹೆಚ್ಚಾಗಿ 16,508.55 ಕೋಟಿ ರೂಪಾಯಿಗೆ ಹೋಗುವ ನಿರೀಕ್ಷೆ ಇದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *