ಮಾರ್ಚ 12 ರಂದು ಸಾಮಾಜಿಕ ಭದ್ರತಾ ಯೋಜನೆ ಕುರಿತು ಜಾಗೃತಿ ಅಭಿಯಾನ : ಸಾರ್ವಜನಿಕಲ್ಲಿ ಹೆಚ್ಚಿನ ಅರಿವು ಮೂಡಿಸಿ ಡಿಸಿ

ಕಲಬುರಗಿ:  ಇದೆ ಮಾರ್ಚ ೧೨ ರಂದು ಮೆಗಾ ಲಾಗಿನ್ ಆಯೋಜಿಸಿದ್ದು ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ  ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್      ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿಗಾಗಿ ಮಾರ್ಚ ೧೨, ೨೦೨೫ ರಂದು ಮೆಗಾ ಲಾಗಿನ್  ದಿನವನ್ನು ಆಯೋಜಿಸುವ ನಿಮಿತ್ತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಂದು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಕೇವಲ ರೂ. ೨೦ ರ ವಾರ್ಷಿಕ ಪ್ರಿಮಿಯಮ್‌ನಲ್ಲಿ ರೂ. ೨ ಲಕ್ಷ ರೂಗಳ ಅಪಘಾತ ವಿಮೆ ಇರುತ್ತದೆ.ಅಪಘಾತವಾದಸಮಯದಲ್ಲಿ ೨ ಲಕ್ಷ ರೂಗಳ ಪರಿಹಾರ ಧನವನ್ನು ನೀಡುತ್ತದೆ. ಸಂಪೂರ್ಣ ಅಂಗವೈಕಲ್ಯವಾದರೆ ೧ ಲಕ್ಷ ರೂ.ಗಳ ಪರಿಹಾರ ಇರುತ್ತದೆ ವಯಸ್ಸಿನ ಅರ್ಹತೆ ೧೮ ರಿಂದ ೭೦ ವರ್ಷಗಳು ಇರುತ್ತದೆ, ಎಂದರು.
ಅದೇ ರೀತಿಯಾಗಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಕೇವಲ ರೂ. ೪೩೬ ರ ವಾರ್ಷಿಕ ಪ್ರೀಮಿಯಮ್‌ನಲ್ಲಿ ರೂ ೨ ಲಕ್ಷದ ಜೀವ ವಿಮೆ  ವಯಸ್ಸಿನ ಅರ್ಹತೆ ೧೮ ರಿಂದ ೫೦ ವರ್ಷಗಳು ಈ ಎರಡು ಯೋಜನೆಗಳಿಗೆ ಆಧಾರ ಕಾರ್ಡ್ ಬ್ಯಾಂಕ್ ಪಾಸ ಪುಸ್ತಕ್‌ದಲ್ಲಿ ಬ್ಯಾಂಕಿನವರ ಕಡೆಯಿಂದ ಲಾಗಿನ್ ಮಾಡಿಸಬೇಕು.  ನೀವು ಅರ್ಜಿಯಲ್ಲಿ ನಾಮೀನಿ ಸೇರಿಸಿದರೆ, ಯಾವುದೇ ಅನಾಹುತ ಆದರೆ ಅವರಿಗೆ ೨ ಲಕ್ಷ ರೂಪಾಯಿಗಳು ಸಿಗುತ್ತವೆ ಎಂದರು.
ಅಧಿಕಾರಿಗಳು ಕಡ್ಡಾಯ ದಾಖಲಾತಿ: ಎಲ್ಲಾ ಉದ್ಯೋಗಿಗಳು, ಪಿಎಂಜೆಜೆಬಿವೈ ಮತ್ತು ಪಿಎಂ.ಎಸ್‌ಬಿವೈ ಅಡಿಯಲ್ಲಿ ದಾಖಲಾಗಿದ್ದರೆ ಎಂದು ಖಚಿತಪಡಿಸಿಕೊಳ್ಳಿ, ಮೆಗಾ ಲಾಗಿನ್ ಡೇ ಶಿಬಿರಗಳು ಎಲ್ಲ ಜಿಲ್ಲಾ ಪಂಚಾಯತ್, ಶಾಖಾ ಮಟ್ಟಗಳು   ಹಂತಗಳಲ್ಲಿ ಶಿಬಿರಗಳನ್ನು ನಡೆಸಲು ಸೂಚಿಸಿದರು.
ಪಾಲುದಾರರ ಒಳಗೊಳ್ಳುವಿಕೆ: ಮೆಗಾ ಲಾಗಿನ್ ಡೇ ಶಿಬಿರಗಳನ್ನು ನಡೆಸಲು ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿ, ಎನ್.ಜಿ.ಓ.ಗಳು ಸ್ವಸಹಾಯ ಗುಂಪುಗಳು ಮತ್ತು ಪಂಚಾಯತ್ ಸದಸ್ಯರನ್ನು ತೊಡಗಿಸಿಕೊಳ್ಳಿ ಎಂದರು.
ಈ ಎರಡು ದಿನಗಳಲ್ಲಿ ಹೆಚ್ಚಿನ ಪ್ರಚಾರ ಮಾಡಬೇಕು ಹಳ್ಳಿಗಳಲ್ಲಿ ಡಂಗೂರ ಸಾರಬೇಕು., ಮೈಕ್ ತೆಗೆದುಕೊಂಡು ಹೇಳಬೇಕು ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸವನ್ನು ಆಗಬೇಕು ಎಂದರು ಈ ಯೋಜನೆಯ  ಲಾಭವನ್ನು ಎಲ್ಲರೂ ಪಡೆಯಬೇಕೆಂದರು.
ಈಗಾಗಲೇ ಬಹಳಷು ಜನರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ ಆದ್ದರಿಂದ ತಾವು ತಪ್ಪದೇ ಬ್ಯಾಂಕ್‌ಗಳಿಗೆ ಹೋಗಿ ಕೇಂದ್ರ ಸರ್ಕಾರ ನೀಡಿರುವ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾಯೋಜನೆ ಇದರ ಲಾಭವನ್ನು ಪ್ರತಿಯೊಬ್ಬರು ಪಡೆಯಬೇಕು ಎಂದು ತಿಳಿಸಿದರು.
ಅನೇಕ ಸಂಘಸಂಸ್ಥೆಗಳು, ಸಹಕಾರ ಸಂಘಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ ಅಂಥವನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ನೋಂದಣಿ  ಮಾಡಿಸಬೇಕು.
ತಾಲೂಕುಗಳಲ್ಲಿ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್, ಲೀಡ್ ಬ್ಯಾಂಕ್ ಮಾನೇಜರ,  ಜಿಲ್ಲೆಯ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.
ದಾಖಲಾತಿ ಗುರಿ: ಪಿ.ಎಂ.ಜೆ.ಜೆ.ಬಿ.ವೈ ಮತ್ತು ಪಿ.ಎಮ.ಎಸ್.ಬಿ.ವೈ ಗಾಗಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ರಮವಾಗಿ ೫೦೦ ದಾಖಲಾತಿಗಳ ಗುರಿಯನ್ನು ಸಾಧಿಸಿ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಬ್ಯಾಂಕರ್‌ಗಳು, ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಅಧಿಕಾರಿಗಳು ಸಾಮೂಕಿವಾಗಿ ಪ್ರಯತ್ನಗಳು ಆರ್ಥಿಕ ಸೇರ್ಪಡೆ ಮತ್ತು ಸಾಮಾಜಿಕ ಭದ್ರತಾ ಜಾಗೃತಿ ಮತ್ತು ದಾಖಲಾತಿ  ಅಭಿಯಾನವನ್ನು ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡುವುದರ ಮೇಲೆ ಅವಲಂಬಿತವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಮಾತನಾಡಿ, ಗ್ರಾಮಪಂಚಾಯತ್ ಗ್ರಾಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹೆಚ್ಚಿನ ಪ್ರಚಾರ ನೀಡಬೇಕು ಮೈಕ್ ಮೂಲಕ, ಆಟೋಗಳ ಮೂಲಕ ಹೆಚ್ಚಿನ ಪ್ರಚಾರ ನೀಡಬೇಕು ಇದರಿಂದ ಸಾರ್ವನಿಕರಿಗೆ ಅನುಕೂಲವಾಗುತ್ತದೆ ಎಂದರು.
ಸಭೆಯಲ್ಲಿ  ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಂತೋಷ ಕುಮಾರ ಪಟೇಲ್, ಜಿಲ್ಲಾ ನಗರಾಭಿವೃದ್ಧಿ ಕೋಶದ  ಯೋಜನಾ ನಿರ್ದೇಶಕ ಮುನ್ವರ ದೌಲ, ಕೃಷಿ ಜಂಟಿ ನಿರ್ದೇಶಕ ಸಮ್ಮದ್ ಪಟೇಲ್, ಬ್ಯಾಂಕಿನ ವ್ಯವಸ್ಥಪಕರು, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *