ಶುರುವಾಯ್ತು ಬಿಗ್ ಬಾಸ್: ತಾರಾ ಜೋಡಿ, ವಿವಾದಾತ್ಮಕ ಆಧ್ಯಾತ್ಮ ಗುರು ಜೊತೆಗೆ 14 ಸ್ಪರ್ಧಿಗಳ ಹೆಸರು ಇಲ್ಲಿದೆ!
ಕಳೆದ ಬಾರಿಯ ಬಿಗ್ ಬಾಸ್ ಸಾಕಷ್ಟು ವಿವಾದ-ರಾದ್ಧಾಂತದಿಂದ ಕೂಡಿತ್ತು. ಈ ಬಾರಿ ಮತ್ತೆ ಬಿಗ್ ಬಾಸ್ ಆರಂಭವಾಗಿದ್ದು, ರಿಯಲ್ ಜೋಡಿ ಕೂಡ ಈ ರಿಯಾಲಿಟಿ ಶೋನಲ್ಲಿ ಒಟ್ಟಾಗಿ ಭಾಗಿಯಾಗಲಿದೆ. ಅದರ ಜೊತೆಗೆ ವಿವಾದಾತ್ಮಕ ಆಧ್ಯಾತ್ಮಿಕ ಗುರು ಕೂಡ ಇರಲಿದ್ದಾರಂತೆ. ಒಟ್ಟು ಸ್ಪರ್ಧಿಗಳ ಹೆಸರು ಇಲ್ಲಿದೆ.
ಅತ್ಯಂತ ಜನಪ್ರಿಯ ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಆರಂಭವಾಗಿದೆ, ಸ್ಪರ್ಧಿಗಳೆಲ್ಲರೂ ಮನೆಯೊಳಗೆ ಹೋಗಿದ್ದಾರೆ. ಆದರೆ ಬಿಗ್ ಬಾಸ್ ಆರಂಭವಾಗಿರೋದು ಕನ್ನಡದಲ್ಲಲ್ಲ, ಬದಲಾಗಿ ಹಿಂದಿಯಲ್ಲಿ. ಬಿಗ್ ಬಾಸ್ 14 ಆರಂಭವಾಗಿದ್ದು, ನಟ ಸಲ್ಮಾನ್ ಖಾನ್ ಎಂದಿನಂತೆ ಈ ಬಾರಿ ಕೂಡ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ, ನಿರ್ವಹಣೆ ಮಾಡಲಿದ್ದಾರೆ. ಈ ಬಾರಿ ವಿಶೇಷ ಅಂದರೆ ಬಿಗ್ ಬಾಸ್ ಮನೆಯಲ್ಲಿ ಸ್ಪಾ, ರೆಸ್ಟೋರೆಂಟ್, ಥಿಯೇಟರ್, ಮಾಲ್ ಕೂಡ ಇದೆ.
ಈ ಬಾರಿಯ ಬಿಗ್ ಬಾಸ್ನಲ್ಲಿ ಮತ್ತೆ ಹಳೆಯ ಸ್ಪರ್ಧಿಗಳು!
ಬಿಗ್ ಬಾಸ್ 13 ವಿಜೇತ ಸಿದ್ದಾರ್ಥ್ ಶುಕ್ಲಾ, ಬಿಗ್ ಬಾಸ್ 7 ವಿಜೇತ ಗೌಹರ್ ಖಾನ್, ಬಿಗ್ ಬಾಸ್ 11 ರನ್ನರ್ ಅಪ್ ಹೀನಾ ಖಾನ್ ಈ ರಿಯಾಲಿಟಿ ಶೋನಲ್ಲಿ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ. ಪ್ರೋಮೋ ಪ್ರಕಾರ ಇವರೆಲ್ಲರೂ ಕೆಲ ನಿಯಮಗಳನ್ನು ಮುರಿಯಲಿದ್ದಾರೆ.
ಈ ಬಾರಿಯ ಸ್ಪರ್ಧಿಗಳ ವಿವರ ಇಲ್ಲಿದೆ:-
ಜಾನ್ ಕುಮಾರ್ ಸಾನು-ಗಾಯಕ ಕುಮಾರ್ ಸಾನು ಪುತ್ರ
ರುಬೀನಾ ದಿಲೈಕ್-ಅಭಿನವ್ ಶುಕ್ಲಾ– ಇವರಿಬ್ಬರು ನಿಜ ಜೀವನದಲ್ಲಿಯೂ ಗಂಡ-ಹೆಂಡತಿ. ‘ಛೋಟಿ ಬಹು’ ಧಾರಾವಾಹಿಯಲ್ಲಿ ಈ ಜೋಡಿ ಒಟ್ಟಾಗಿ ನಟಿಸಿತ್ತು.
ಪವಿತ್ರಾ ಪುನಿಯಾ: ಪಾರಸ್ ಛಬ್ರಾ ಜೊತೆ ರಿಲೇಶನ್ಶಿಪ್ನಲ್ಲಿರುವ ಪವಿತ್ರಾ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಈಜಾಜ್ ಖಾನ್- ಪ್ರಖ್ಯಾತ ಧಾರಾವಾಹಿ ನಟ
ನಿಕ್ಕಿ ತಂಬೋಲಿ-ತಮಿಳು, ತೆಲುಗು ಚಿತ್ರರಂಗದ ನಟಿ
ರಾಧೆ ಮಾ-ವಿವಾದಾತ್ಮಕ ಆಧ್ಯಾತ್ಮಿಕ ಗುರು
ಜಾಸ್ಮಿನ್ ಭಾಸಿನ್ –ನಾಗಿನ್ ಧಾರಾವಾಹಿ ನಟಿ
ರಾಹುಲ್ ವೈದ್ಯ-ಗಾಯಕ
ನಿಶಾಂತ್ ಸಿಂಗ್ ಮಲ್ಖಾನಿ-ನಟ
ಶೆಹಜಾದ್ ಡಿಯೋಲ್-ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.