ಸಿದ್ದು ಕೊಠಡಿಯಲ್ಲಿ ಡಿಕೆಶಿ ದರ್ಬಾರ್, ಹಲವರ ಹುಬ್ಬೇರಿಸಿದ ನಡೆ..!
ಬೆಂಗಳೂರು: ದೆಹಲಿಯ ಕರ್ನಾಟಕ ಭವನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆಂದೇ ಮೀಸಲಿಟ್ಟಿರುವ ಸಮುಚ್ಚಯದಲ್ಲಿ ತಂಗುವ ಮೂಲಕ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ದರ್ಬಾರ್’ನ್ನು ಆರಂಭಿಸಿದ್ದಾರೆ.
ಏಪ್ರಿಲ್‌ನಲ್ಲಿ ಉದ್ಘಾಟನೆಗೊಂಡ ದೆಹಲಿಯ ಕರ್ನಾಟಕ ಭವನದಲ್ಲಿ ಎರಡು ವಿವಿಐಪಿ ಸಮುಚ್ಚಯಗಳನ್ನು ಮೀಸಲಿಡಲಾಗಿದೆ. ಈ ಪೈಕಿ ಒಂದು ಸಮುಚ್ಚಯವನ್ನು ಮುಖ್ಯಮಂತ್ರಿಗಳಿಗೆಂದೇ ಮೀಸಲಿಡಲಾಗಿದೆ.
ಕರ್ನಾಟಕ ಭವನದ ಉದ್ಘಾಟನೆಯ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಲಿಯೇ ತಂಗಿದ್ದರು. ಆದರೆ, ಶೌಚಾಲಯ ಇಕ್ಕಟ್ಟಾಗಿದ್ದು, ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗದ ಕಾರಣ ಅಲ್ಲಿ ತಂಗುವುದನ್ನು ನಿಲ್ಲಿಸಿದ್ದರು ನಂತರದ ಭೇಟಿಗಳಲ್ಲಿ ಹಳೆಯ ಕರ್ನಾಟಕ ಭವನದಲ್ಲಿಯೇ ಉಳಿಯುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ತಿಳಿದ ಡಿಕೆ. ಶಿವಕುಮಾರ್ ಅವರು, ಸಮುಚ್ಚಯದಲ್ಲಿ ಉಳಿದುಕೊಳ್ಳಲು ಸಿದ್ದರಾಮಯ್ಯ ಅವರ ಒಪ್ಪಿಗೆ ಪಡೆದಿದ್ದು, ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿಯೇ ಉಳಿದುಕೊಂಡಿದ್ದಾರೆಂದು ತಿಳಿದುಬಂದಿದೆ.