ಅಭಿನಯ ಸರಸ್ವತಿ B Saroja Devi ವಿಧಿವಶ: ಸಾವಿಗೆ ಕಾರಣವೇನು? ವಯಸ್ಸೆಷ್ಟಾಗಿತ್ತು?

  • ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ ಸರೋಜಾ ದೇವಿ ವಿಧಿವಶ
  • ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಿ ಸರೋಜಾ ದೇವಿ ಇಂದು ಕೊನೆಯುಸಿರು
  • ಬಿ ಸರೋಜಾ ದೇವಿ ಅವರಿಗೆ 87 ವರ್ಷ ವಯಸ್ಸಾಗಿತ್ತು

ಕನ್ನಡ ಚಿತ್ರರಂಗದ ಹಿರಿಯ ನಟಿ, ಬಹುಭಾಷೆಗಳಲ್ಲೂ ಅಭಿನಯಿಸಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ‘ಅಭಿನಯ ಸರಸ್ವತಿ’ ಬಿ ಸರೋಜಾ ದೇವಿ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಿ ಸರೋಜಾ ದೇವಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬಿ ಸರೋಜಾ ದೇವಿ ಅವರಿಗೆ 87 ವರ್ಷ ವಯಸ್ಸಾಗಿತ್ತು.

ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್!

ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ಸು ಕಂಡ ನಟಿ ಬಿ ಸರೋಜಾ ದೇವಿ. ತಮ್ಮ 7 ದಶಕಗಳ ಸಿನಿ ಜರ್ನಿಯಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿರುವ ಖ್ಯಾತಿ ಬಿ ಸರೋಜಾ ದೇವಿ ಅವರದ್ದು. ಬಿ ಸರೋಜಾ ದೇವಿ ಅವರ ನಟನೆ ಎಷ್ಟು ನೈಜವಾಗಿರುತ್ತಿತ್ತು ಅಂದ್ರೆ.. ಅವರಿಗೆ ‘ಅಭಿನಯ ಸರಸ್ವತಿ’ ಎಂಬ ಬಿರುದು ಸಿಕ್ಕಿತ್ತು. ಅಭಿನಯದಲ್ಲೇ ‘ಸರಸ್ವತಿ’ ಎಂದು ಕರೆಯಿಸಿಕೊಂಡವರು ಬಿ ಸರೋಜಾ ದೇವಿ. ತಮಿಳು ಚಿತ್ರರಂಗದಲ್ಲಿ ಇವರಿಗೆ ‘ಕನ್ನಡತು ಪೈಂಗಿಲಿ’ ಅಂದ್ರೆ ‘ಕನ್ನಡದ ಗಿಳಿ’ ಎಂಬ ಹೆಸರು ನೀಡಲಾಗಿತ್ತು. ಅಷ್ಟೇ ಅಲ್ಲ… ಸ್ಯಾಂಡಲ್‌ವುಡ್‌ನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದ ಬಿ ಸರೋಜಾ ದೇವಿ ‘ಕನ್ನಡ ಸಿನಿಮಾರಂಗದ ಮೊದಲ ಮಹಿಳಾ ಸೂಪರ್‌ ಸ್ಟಾರ್‌’ ಸಹ ಹೌದು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *