ದೇಹವು ಆರೋಗ್ಯ ಸ್ಥಿತಿಯಲ್ಲಿರಬೇಕಾದರೆ ಕ್ರೀಡಾ ಮನೋಭಾವ ಬೆಳಸಿಕೊಳ್ಳಬೇಕು ಜಿ.ಪಂ. ಸಿ.ಇ.ಓ.ಭಂವರ ಸಿಂಗ್ ಮೀನಾ
ಕಲಬುರಗಿ: ನಮ್ಮ ದೇಹವು ಆರೋಗ್ಯವಂತರಾಗಬೇಕಾದರೆ ಕ್ರೀಡಾ ಮನೋಭಾವ ಬೆಳಸಿಕೊಳ್ಳಬೇಕು ಜತೆಗೆ ಕ್ರೀಡೆಯಿಂದ ದೇಹಕ್ಕೆ ಮಾನಸಿಕ ಅರೋಗ್ಯ ಸಿಗುತ್ತದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಹೇಳಿದರು.

ಶುಕ್ರವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲಬುರಗಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 2025 ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟ್ಟುಗಳಿಂದ ಕ್ರೀಡಾಜ್ಯೋತಿಗೆ ಸ್ವೀಕರಿಸಿ ಬಲೂನು ಹಾರಿಬಿಡುವುದರ ಮೂಲಕ ಕ್ರೀಡೆಗೆ ಚಾಲನೆ ನೀಡಿ ಮತ್ತು ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡಿ ಮಾತನಾಡಿದರು.
ನಾನು ಸಹ ವಿದ್ಯಾರ್ಥಿ ಜೀವನದಲ್ಲಿ ವಾಲಿಬಾಲ್, ಹಾಕಿ, ಆಡುತ್ತಿದೆ ಎಂದು ನೆನಪಿಸಿಕೊಂಡರು. ಕ್ರೀಡಾಂಗಣಕ್ಕೆ ವಿದ್ಯಾರ್ಥಿಗಳು ಬಂದಿದ್ದಾರೆ. ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದೀರಿ ಸಂತೋಷದ ವಿಷಯ ಎಂದು ಹೇಳಿದರು.
ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಜನ್ಮ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು. ಕಲಬುರಗಿ ಜಿಲ್ಲೆಯ ಸಾಕಷ್ಟು ಕ್ರೀಡಾಕೂಟ ಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕಗಳನ್ನು ತಮ್ಮ ಮೂಡಿಗೆರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಕ್ರೀಡೆಯ ಮಹತ್ವವನ್ನು ಅರಿತುಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡುವಂತಹ ಕ್ರೀಡಾಪಟುಗಳಾಗಬೇಕು ಆಗಬೇಕು ಎಂದು ಅವರು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಪ್ರಭಾರ) ಸಹಾಯಕ ನಿರ್ದೇಶಕರಾದ ಸೋಮಶೇಖರ್. ವೈ. ಅವರು ಕಾರ್ಯಕ್ರಮದ ಪ್ರಸ್ತಾವಿಕ ಮಾತುಗಳನಾಡಿದರು.
ವಿದ್ಯಾರ್ಥಿಗಳು ಅಥ್ಲಿಟಿಕ್, ವಾಲಿಬಾಲ್, ಕಬ್ಬಡಿ, ಕೋ-ಕೋ, ಥ್ರೋ ಬಾಲ್, ಯೋಗ, ಫುಟಬಾಲ್ಗಳಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟುಗಳಾದ ಶ್ರೀ ಸಿದ್ದಣ್ಣ ಎಸ್. ಸಾಹುಕರ್ ಮತ್ತು ರಾಷ್ಟ್ರಿಯ ಬಾಸ್ಕೆಟ್ ಬಾಲ್ ಕ್ರೀಡಾಪಟುಗಳಾದ ಶಿರಾಜುದ್ದಿನ್ ಅವರಿಗೆ ಅಂತರಾಷ್ಟ್ರೀಯ ಕ್ರೀಡಾಪಟ್ಟುಗಳಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಎಂ.ಡಿ.ಆರ್.ಎಸ್. ರೇವಗಿ ಶಾಲೆಯ ವಿದ್ಯಾರ್ಥಿನಿ ಪ್ರೀತಿ ಅವರು ಪ್ರತಿಜ್ಞೆ ವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ-ಅಧಿಕಾರಿ ಸಂಗಮೇಶ, ಸೇರಿದಂತೆ. ಮುಂಜಾಮ್ಮಿಲ್ ಆರ್. ಕೆಂಭಾವಿ ಹಾಕಿ ತರಬೇತಿದಾರರು ಸಂಜಯ ಬಾಣದ ಮತ್ತು ಬಾಸ್ಕೇಟ್ ಬಾಲ್ ತರಬೇತಿದಾರ ಪ್ರವೀಣ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಇದ್ದರು.