ಡಿಕೆಶಿ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ಸಿಬಿಐ ರೈಡ್!! ಇದಕ್ಕೆಲ್ಲ ನಾವು ಹೆದರಲ್ಲ ಅಂದ್ರು ಕಾಂಗ್ರೆಸ್ ಮುಖಂಡರು!!!
ಇಂದು ಬೆಳ್ಳಂಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಸಿಬಿಐ ಶಾಕ್ ಕೊಟ್ಟಿದೆ. ಸುಂಆರು 60 ಜನರ ತಂಡ ಡಿ ಕೆ ಶಿವಕುಮಾರ್, ಡಿ ಕೆ ಸುರೇಶ್ ಸೇರಿ ಹಅಲವು ಸಂಬಂಧಿಕರ ಮನೆಮೇಲೆ ಏಕಕಾಲದಲ್ಲಿ ಸಿಬಿಐ ಎಸ್ ಪಿ ಥಾಮಸ್ ಜೋಸ್ ನೇತೃತ್ವದಲ್ಲಿ ದಾಳಿ ಮಾಡಿದೆ. ಈಗಾಗಲೇ ಡಿಕೆಶಿ ಮೇಲೆ ನಡೆಯುತ್ತಿರುವ ಇಡಿ ತನಿಖೆ ನಡೀತಾ ಇತ್ತು, ಇದರ ಮಧ್ಯೆ ಈಗ ಸಿಬಿಐ ದಾಳಿ ನಡೆಸಿದೆ.
ಬೆಳಗ್ಗೆ 8 ಗಂಟೆಗೆ ಡಿಕೆಶಿ ನಿವಾಸಕ್ಕೆ ಆಗಮಿಸಿದ ಸಿಬಿಐ ಅಧಿಕಾರಿಗಳು ಕಡತಗಲ ಪರಿಶೋಲನೆಯಲ್ಲಿ ತೊಡಗಿದೆ. ಸಿಬಿಐ ತನಿಖೆಗೆ ಅನುಮತಿ ನೀಡಿತ್ತು ರಾಜ್ಯ ಸರ್ಕಾರ, ಇದನ್ನು ಪ್ರಶ್ನಿಸಿ ಡಿಕೇಶ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿತ್ತು.
ಬೆಂಗಳೂರಿನ ಸದಾಶಿವ ನಗರ ಮಾತ್ರವಲ್ಲದೆ ಕನಕಪುರದ ಡಿಕೇಶಿ ಮನೆಯಮೇಲೂ ಸಿಬಿಐ ದಾಳಿ ನಡೆಸಿದೆ.
ಈ ದಾಳಿಯನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ತೀವ್ರವಾಗಿ ಖಂಡಿಸಿ ಇಂತಹದಕ್ಕೆಲ್ಲ ನಾವು ಹೆದರುವುದಿಲ್ಲ ಅಂತ ಹೇಳಿದ್ದಾರೆ.
ಇದಕ್ಕೆ ಮೊಟ್ಟ ಮೊದಲು ಪ್ರತಿಕ್ರಿಯೆ ನೀಡಿರುವ ವಿರೊಧ ಪಕ್ಷದ ನಾಯಕ ಸಿದ್ದರಾಮಯ್ಯ ಇದು ರಾಜಕೀಯ ದುಷ್ಟತನದ ಪರಮಾವದಿ ಅಂತ ಕಿಡಿಕಾರಿದ್ದಾರೆ.
.