ವೈರಲ್ ಆಗುತ್ತಿರುವ ವಿಡಿಯೋ: ವೇದಿಕೆ ಏರುವಾಗಲೇ ರಣವೀರ್ ಸಿಂಗ್ಗೆ ವಾರ್ನ್ ಮಾಡಿದ್ದ ರಿಷಬ್ ಶೆಟ್ಟಿ
ಹೈಲೈಟ್ಸ್:
- ಗೋವಾದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ರಣವೀರ್ ಸಿಂಗ್ ಎಡವಟ್ಟು
- ಕಾಂತಾರ ಚಾಪ್ಟರ್ ಒನ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಚಾಮುಂಡಿ ದೈವದ ಸನ್ನಿವೇಶ
- ಅನುಕರಣೆ ಮಾಡದಂತೆ ರಿಷಬ್ ಶೆಟ್ಟಿ ಎಚ್ಚರಿಸಿದರೂ ಕೇಳದ ರಣವೀರ್ ಸಿಂಗ್
ಕಾಂತಾರ ಚಾಪ್ಟರ್ ಒನ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಸನ್ನಿವೇಶದಲ್ಲಿ, ರಿಷಬ್ ಶೆಟ್ಟಿ ಅವರ ಅತ್ಯಮೋಘ ಅಭಿನಯವನ್ನು ಅನುಕರಣೆ ಮಾಡಲು ಹೋಗಿ, ಬಾಲಿವುಡ್ ನಟ ರಣವೀರ್ ಸಿಂಗ್, ವೇದಿಕೆಯಲ್ಲಿ ಅಪಹಾಸ್ಯಕ್ಕೀಡಾಗಿದ್ದಾರೆ. ರಣವೀರ್ ಸಿಂಗ್ ಅವರ ವರ್ತನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದದ್ದು ಗೊತ್ತೇ ಇದೆ.
ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ ( IFFI ) ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್, ಕಾಂತಾರದಲ್ಲಿ ಬರುವ ಚಾಮುಂಡಿ ದೈವದ ಪಾತ್ರವನ್ನು ಅನುಕರಣೆ ಮಾಡಿದ್ದರು. ಪಾತ್ರವನ್ನು ಅವರು ವೇದಿಕೆಯಲ್ಲಿ ಅನುಕರಣೆ ಮಾಡಿದ್ದದ್ದು ಉದ್ದೇಶಪೂರ್ವಕ ಅಲ್ಲದೇ ಇರಬಹುದು, ಆದರೆ, ರಿಷಬ್ ಶೆಟ್ಟಿ ಎಚ್ಚರಿಕೆಯ ನಂತರವೂ, ಮಿಮಿಕ್ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ವೇದಿಕೆಯಲ್ಲಿ ಮಾತನಾಡಲು ರಣವೀರ್ ಸಿಂಗ್ ಹೊರಟಾಗಲೇ, ರಿಷಬ್ ಶೆಟ್ಟಿ, ಅನುಕರಿಸದಂತೆ ಎಚ್ಚರಿಕೆಯನ್ನು ನೀಡಿದ್ದರು. ಆ ವಿಡಿಯೋ ಈಗ ವೈರಲ್ ಆಗುತ್ತಿದೆ. ಆದರೆ, ರಣವೀರ್ ಸಿಂಗ್, ದೈವದ ಅನುಕರಣೆ ಮಾಡುತ್ತಿದ್ದಾಗ, ರಿಷಬ್, ನಗುತ್ತಿರುವ ವಿಡಿಯೋ ಮಾತ್ರ ಎಲ್ಲಾ ಕಡೆ ಹರಡಿತ್ತು. ಇದರಿಂದಾಗಿ, ರಿಷಬ್ ಶೆಟ್ಟಿ ಕೂಡಾ, ತುಳುನಾಡು ಭಾಗದಲ್ಲಿ ಟೀಕೆಗೆ ಗುರಿಯಾಗಿದ್ದರು.
ಆ ಕಾರ್ಯಕ್ರಮದಲ್ಲಿ ದೈವದ ನಟನೆ ಮಾಡದಂತೆ, ರಿಷಬ್ ಶೆಟ್ಟಿ ಕೈಯಿಂದ ಸೂಚಿಸುತ್ತಿದ್ದರು. ಆದರೂ, ರಣವೀರ್ ಸಿಂಗ್ ಮುಂದುವರಿಸಿದ್ದದ್ದು, ವಿಡಿಯೋದಲ್ಲಿ ತೋರಿ ಬರುತ್ತಿದೆ. ಕಾಂತಾರ ಚಿತ್ರದ ನಿರ್ದೇಶಕ, ನಟ ಹೇಳಿದ ಮೇಲೂ, ದೈವದ ರೀತಿಯಲ್ಲಿ ನಟಿಸಿದ್ದು, ರಣವೀರ್ ಸಿಂಗ್ ಅವರ ಅಹಂಕಾರದ ಪರಮಾವಧಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ರಿಷಬ್ ಶೆಟ್ಟಿ ಎದ್ದು ನಿಂತು ರಣವೀರ್ ಸಿಂಗ್ಗೆ ಅನುಕರಣೆ ಮಾಡದಂತೆ ಸೂಚಿಸಿದ್ದರು. ವೇದಿಕೆಯಲ್ಲಿ ಮಾತನಾಡುತ್ತಾ, ” ಆ ಹೆಣ್ಣು ದೆವ್ವ ನಿಮ್ಮ ದೇಹ ಪ್ರವೇಶಿಸಿದಾಗ, ಆ ನಟನೆಯ ಒಂದು ಶಾಟ್” ಎಂದು ನಟಿಸಿದ್ದರು. ದೈವವನ್ನು ದೆವ್ವ ಎಂದು ಸಂಬೋಧಿಸಿದ್ದರು.
