ಸಿಲಿಕಾನ್ ಸಿಟಿ ರಸ್ತೆಗಳಲ್ಲಿ ಇನ್ಮುಂದೆ ಓಡಾಡಲಿವೆ ಇಕೋ ಫ್ರೆಂಡ್ಲಿ ಎಲೆಕ್ಟ್ರಿಕ್ ಬಸ್
ಇಂದಿನಿಂದ ಪ್ರಾಯೋಗಿಕ ಸಂಚಾರ ಮಾಡಲು ಮುಂದಾಗಿದೆ. ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪ್ರಯೋಗಿಕ ಸಂಚಾರಕ್ಕೆ ಚಾಲನೆ ಕೊಟ್ಟರು
ಬೆಂಗಳೂರು: ಬಿಎಂಟಿಸಿ ಅಂದ್ರೆ ಪೊಲ್ಯೂಷನ್, ಬಿಎಂಟಿಸಿ ಬಸ್ ಹೋಗುತ್ತಿದ್ರೆ ವಿಪರೀತ ಶಬ್ದ ಬರುತ್ತೆ, ಬಿಎಂಟಿಸಿ ಅಂದ್ರೆ ಕಿಲ್ಲರ್ ಅಂತೆಲ್ಲಾ ಹಣೆ ಪಟ್ಟಿ ಕಟ್ಟಿಕೊಂಡಿತ್ತು. ಇನ್ಮುಂದೆ ಇಂಥ ಆರೋಪಗಳಿಂದ ಮುಕ್ತರಾಗೋಕೆ ನಿಗಮ ಮುಂದಾಗಿದೆ. ಇದರ ಮೊದಲ ಹೆಜ್ಜೆ ಎನ್ನುವಂತೆ ಪೊಪ್ಯೂಷನ್ ಫ್ರೆಂಡ್ಲಿ ಆಗಿರೋ ಎಲೆಕ್ಟ್ರಿಕ್ ಬಸ್ ಅನ್ನ ರಸ್ತೆಗಿಳಿಸೋಕೆ ಸನ್ನದ್ಧವಾಗಿದೆ. ಹಿಂದೊಂದು ಕಾಲವಿತ್ತು. ಬಿಎಂಟಿಸಿ ಬಸ್ ರಸ್ತೆ ಮೇಲೆ ಹೋಗುತ್ತಿದೆ ಅಂದ್ರೆ ಸಿಕ್ಕಾ ಪಟ್ಟೆ ಹೊಗೆ, ಕರ್ಕಶ ಶಬ್ದ, ಎಲ್ಲೆಂದರಲ್ಲಿ ಆಗುತ್ತಿದ್ದ ಅಫಘಾತಗಳು, ಇನ್ಮುಂದೆ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಯಾಕಂದ್ರೆ ದೇಶದಲ್ಲೇ ನಂಬರ್ ಒನ್ ಸಾರಿಗೆ ಸಂಸ್ಥೆ ಅನ್ನೋ ಖ್ಯಾತಿ ಗಳಿಸಿರೋ ಬಿಎಂಟಿಸಿ ಇನ್ಮುಂದೆ ಇಕೋ ಫ್ರೆಂಡ್ಲಿ ಆಗೋಕೆ ಮುಂದಾಗುತ್ತಿದೆ. ತೆಲಂಗಾಣ ಮೂಲದ ಒಲೆಕ್ಟ್ರೋ ಕಂಪನಿ ಸಿದ್ದಪಡಿಸಿರುವ ಎಲೆಕ್ಟ್ರಿಕ್ ಬಸ್ ಅನ್ನ ಇಂದಿನಿಂದ ಪ್ರಾಯೋಗಿಕ ಸಂಚಾರ ಮಾಡಲು ಮುಂದಾಗಿದೆ. ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪ್ರಯೋಗಿಕ ಸಂಚಾರಕ್ಕೆ ಚಾಲನೆ ಕೊಟ್ಟರು