ಮಾದಿಗ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡುವಂತೆ ರೇವಣಸಿದ್ದಪ್ಪ ಎಸ್ ಕಟ್ಟಿಮನಿ ಆಗ್ರಹಿಸಿದ್ದಾರೆ
ಮಾದಿಗ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡುವಂತೆ ರೇವಣಸಿದ್ದಪ್ಪ ಎಸ್ ಕಟ್ಟಿಮನಿ ಆಗ್ರಹಿಸಿದ್ದಾರೆ.
ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನಲ್ಲಿ ನಿನ್ನೆ ದಲಿತ ಮಾದಿಗ ಸಮನ್ವಯ ಸಮಿತಿ ಕಾಳಗಿ ವತಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮಾದಿಗ ಸಮನ್ವಯ ಸಮಿತಿಯ ತಾಲೂಕು ಅಧ್ಯಕ್ಷರಾದ ರೇವಣಸಿದ್ದಪ್ಪ ಕಟ್ಟಿಮನಿ ಮಾತನಾಡಿ. ಚಿತ್ತಾಪುರ ತಾಲ್ಲೂಕಿನ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದು. ಮಾದಿಗ ಸಮಾಜದ ಏಕೈಕ ಸದಸ್ಯರಾದ ಶ್ರೀ ಮಲ್ಲಿಕಾರ್ಜುನ ಕಾಳಗಿ ಅವರನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಅಧ್ಯಕ್ಷನಾಗಿ ಮಾಡಬೇಕು. ಅಷ್ಟೇ ಅಲ್ಲದೆ ಈ ಸಮುದಾಯದಿಂದ ಇದುವರೆಗೂ ಉನ್ನತವಾದ ಹುದ್ದೆಗಳನ್ನು ಯಾರು ಅಲಂಕರಿಸಿಲ್ಲ ಈಗ ಒಂದು ಅವಕಾಶ ಬಂದಿದೆ. ಆ ಸಮುದಾಯದವರನ್ನು ಅಧ್ಯಕ್ಷನಾಗಿ ಮಾಡಬೇಕು . ಆ ಸಮುದಾಯಕ್ಕೆ ತಾವೊಂದು ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು. ಚಿತ್ತಾಪುರ ತಾಲೂಕಿನ ಶಾಸಕರಾದ ಪ್ರಿಯಾಂಕ್ ಖರ್ಗೆ ರವರಿಗೆ ಮತ್ತು ಡಿಸಿಸಿ ಅಧ್ಯಕ್ಷರಾದ ಜಗದೇವ್ ಗುತ್ತೆದರ್ ಅವರಿಗೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಬಣ್ಣ ಕೊಡ್ಲಿ, ಕೃಷ್ಣ ಕಟ್ಟಿಮನಿ, ರೇವಣಸಿದ್ದಪ್ಪ ಕೊಡ್ಲಿ, ಅಶೋಕ್ ಸಿಂಗೆ ರಾಣಪ್ಪ ಬೆಡಸೂರ್, ಇತರರು ಉಪಸ್ಥಿತರಿದ್ದರು.
ವರದಿ ಶಿವರಾಜ ಕಟ್ಟಿಮನಿ