Gold Rate: ದೀಪಾವಳಿ ಮುಗಿದ ನಂತರ ಗ್ರಾಹಕರಿಗೆ ಗುಡ್ನ್ಯೂಸ್; ಎರಡನೇ ದಿನವೂ ಚಿನ್ನದ ದರದಲ್ಲಿ ಭಾರೀ ಇಳಿಕೆ
Gold Price Today: ಬೆಂಗಳೂರು (ನವೆಂಬರ್ 17): ಕೊರೋನಾ ವೈರಸ್ ಆರಂಭವಾದಗಿನಿಂದ ಚಿನ್ನದ ದರ ಗಗನಕ್ಕೇರಿದೆ. 10 ಗ್ರಾಂಗೆ 35 ಸಾವಿರ ರೂಪಾಯಿ ಇದ್ದ ಚಿನ್ನದ ಬೆಲೆ ಇಂದು 50 ಸಾವಿರ ರೂಪಾಯಿ ಸಮೀಪಿಸಿದೆ. ಅನ್ಲಾಕ್ ಘೋಷಣೆ ಆದ ನಂತರದಲ್ಲಿ ಚಿನ್ನದ ಆಮದು ಸಮಸ್ಥಿತಿಗೆ ಬರುತ್ತಿದ್ದು, ಚಿನ್ನದ ಬೆಲೆ ನಿಧಾನವಾಗಿ ಕಡಿಮೆ ಆಗಿತ್ತು. ಭಾರತದಲ್ಲಿ ಹಬ್ಬಕ್ಕೆ ಭಾರೀ ಪ್ರಾಮುಖ್ಯತೆ ನೀಡುತ್ತಾರೆ. ಈ ಸಂದರ್ಭದಲ್ಲಿ ಚಿನ್ನದ ಖರೀದಿ ಜೋರಾಗಿರುತ್ತದೆ. ಈಗಲೂ ಅದೇ ರೀತಿ ಆಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಜನರು ಚಿನ್ನದ ಖರೀದಿಗೆ ಮುಂದಾಗಿದ್ದು, ಚಿನ್ನದ ದರದಲ್ಲಿ ಏರಿಳಿತ ಕಾಣುತ್ತಿದೆ. ಕಳೆದ ವಾರ ಚಿನ್ನದ ದರ ಒಂದೇ ದಿನ ಭಾರೀ ಇಳಿಕೆ ಕಂಡಿತ್ತು. ನಂತರ ನಾಲ್ಕು ದಿನ ಏರಿಕೆ ಕಂಡಿತ್ತು. ಆದಾಗ್ಯೂ ಕಳೆದ ವಾರ ಚಿನ್ನದ ದರ 770 ರೂಪಾಯಿ ಇಳಿಕೆ ಕಂಡಂತಾಗಿದೆ.
ಮಂಗಳವಾರ ಚಿನ್ನದ ದರ ಅಲ್ಪ ಇಳಿಕೆ ಕಂಡಿದೆ. ಆಭರಣ ಚಿನ್ನ 10 ಗ್ರಾಂಗೆ 100 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ದರ 47,600 ರೂಪಾಯಿ ಆಗಿದೆ. ಇನ್ನು ಶುದ್ಧ ಚಿನ್ನ 100 ರೂಪಾಯಿ ಇಳಿಕೆ ಕಂಡಿದ್ದು, ಈ ಮೂಲಕ 51,930 ರೂಪಾಯಿ ಆಗಿದೆ.
ಬೆಳ್ಳಿ ದರದ ವಿಚಾರಕ್ಕೆ ಬರುವುದಾದರೆ ಕಳೆದವಾರ ಕೆಜಿ ಬೆಳ್ಳಿ 1,820 ರೂಪಾಯಿ ಇಳಿಕೆ ಕಂಡಿತ್ತು. ಸೋಮವಾರ ಬೆಳ್ಳಿ ಬೆಲೆ 890 ರೂಪಾಯಿ ಏರಿಕೆ ಕಂಡಿದ್ದು ಈ ಮೂಲಕ ಕೆಜಿ ಬೆಳ್ಳಿಗೆ 64,500 ರೂಪಾಯಿ ಆಗಿದೆ.
ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.
ಮತ್ತೆ ಏರಿಕೆ ಕಾಣಲಿದೆ ಚಿನ್ನ?:
ವಿಶ್ವದ ಆರ್ಥಿಕತೆ ತಲೆಕೆಳೆಗಾಗಿದೆ. ಹೀಗಾಗಿ ಯಾವ ಮಾರುಕಟ್ಟೆಯ ಮೇಲೂ ಖಚಿತವಾಗಿ ಏನನ್ನೂ ಹೇಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.