Bharat Bandh: ಭಾರತ್ ಬಂದ್ ಹಿನ್ನೆಲೆ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Bharat Bandh in Karnataka: ಭಾರತ್ ಬಂದ್​ ಹಿನ್ನೆಲೆ ರೈತ ಸಂಘಟನೆಗಳು  ಏರ್ ಪೋರ್ಟ್​ಗೆ ಮುತ್ತಿಗೆ  ಹಾಕುವ ಸಾಧ್ಯತೆ ಇರುವ ಕಾರಣಕ್ಕೆ  ಪೊಲೀಸರು  ಮುಂಜಾಗ್ರತೆ ತೆಗೆದುಕೊಂಡು ಕಟ್ಟುನಿಟ್ಟಿನ  ತಪಾಸಣೆ  ಮಾಡುತ್ತಿದ್ದಾರೆ.

ದೇವನಹಳ್ಳಿ (ಡಿ. 8): ಕೇಂದ್ರ  ಸರ್ಕಾರ ಜಾರಿಗೆ ತಂದಿರುವ  ನೂತನ ಕೃಷಿ ಕಾಯ್ದೆಗಳನ್ನು ವಾಪಾಸ್  ಪಡೆಯುವಂತೆ  ಆಗ್ರಹಿಸಿ ಇಂದು ರೈತ ಸಂಘಟನೆಗಳು ಭಾರತ್ ಬಂದ್​ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ದೇವನಹಳ್ಳಿಯಲ್ಲಿರುವ  ಕೆಂಪೇಗೌಡ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ  ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೆಂಪೇಗೌಡ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಸಂಪರ್ಕಿಸುವ  ಮೂರು ಪ್ರವೇಶ  ದ್ವಾರದಲ್ಲಿ ಪೊಲೀಸರ ಕಾವಲು ಹಾಕಲಾಗಿದೆ. ಮುಂಜಾನೆಯಿಂದ ವಾಹನಗಳ  ತಪಾಸಣೆ  ಕಾರ್ಯ ಮಾಡಲಾಗುತ್ತಿದೆ. ಬೋರ್ಡಿಂಗ್  ಪಾಸ್ ಇದ್ದ ಪ್ರಯಾಣಿಕರಿಗೆ  ಮಾತ್ರ ಏರ್ ಪೋರ್ಟ್​ಗೆ ಪ್ರವೇಶ ನೀಡಲಾಗುತ್ತಿದೆ. ಉಳಿದ ಪ್ರಯಾಣಿಕರನ್ನ ಟೋಲ್ ನಿಂದ ಹೊರಗೆ ಕಳಿಸಲಾಗುತ್ತಿದೆ.

ರೈತ ಸಂಘಟನೆಗಳು  ಏರ್ ಪೋರ್ಟ್​ಗೆ ಮುತ್ತಿಗೆ  ಹಾಕುವ ಸಾಧ್ಯತೆ ಇರುವ ಕಾರಣಕ್ಕೆ  ಪೊಲೀಸರು  ಮುಂಜಾಗ್ರತೆ ತೆಗೆದುಕೊಂಡು ಕಟ್ಟುನಿಟ್ಟಿನ  ತಪಾಸಣೆ  ಮಾಡುತ್ತಿದ್ದಾರೆ.

ಏರ್ ಪೋರ್ಟ್  ಟ್ಯಾಕ್ಸಿ  ಚಾಲಕರ ಸಂಘ ಭಾರತ  ಬಂದ್ ಗೆ ಬೆಂಬಲ  ನೀಡಿದೆ. ಆದರೆ ಟ್ಯಾಕ್ಸಿ  ಸೇವೆ ನೀಡುವ  ತೀರ್ಮಾನವನ್ನು ಚಾಲಕರಿಗೆ  ನೀಡಲಾಗಿದೆ. ಈಗಾಗಲೇ  ಕೊರೊನಾದಿಂದ  ಟ್ಯಾಕ್ಸಿ ಚಾಲಕರ ಬದುಕು  ಮೂರಾಬಟ್ಟೆಯಾಗಿದೆ. ಇಎಂಐ ಕಂತಿನ ಹಣ ಕಟ್ಟಲು ಪರದಾಡುವ ಸ್ಥಿತಿ  ಇದೆ. ಆದ್ದರಿಂದ ಚಾಲಕರ ವೈಯಕ್ತಿಕ  ತೀರ್ಮಾನಕ್ಕೆ ಬೀಡಲಾಗಿದೆ.

ವಿಮಾನ ನಿಲ್ದಾಣದಿಂದ ನಗರದ ವಿವಿಧ ಭಾಗಗಳಿಗೆ ಸಂಚಾರಿಸುವ  ಮತ್ತು ಜಿಲ್ಲೆಗಳಿಗೆ ಸಂಚರಿಸುವ ಕೆಎಸ್ ಆರ್ ಟಿಸಿ ಬಸ್  ಮತ್ತು ಬಿಎಂಟಿಸಿ  ಬಸ್ ಗಳು  ಎಂದಿನಂತೆ  ಸಹಜವಾಗಿ  ಸಂಚಾರಿಸುತ್ತಿವೆ. ಬಂದ್ ತೀವ್ರತೆಯನ್ನು  ನೋಡಿಕೊಂಡು  ಬಸ್ ಗಳ  ಸಂಚಾರದ ಬಗ್ಗೆ  ತೀರ್ಮಾನ  ತೆಗೆದುಕೊಳ್ಳಲಾಗುವು ಎಂದು ಸಾರಿಗೆ  ಅಧಿಕಾರಿಗಳು  ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಇಂದು ಭಾರತ ಬಂದ್ ಗೆ ಕರೆ ನೀಡಲಾಗಿದೆ. ಈ ಬಂದ್​ಗೆ ಕರ್ನಾಟಕದಲ್ಲಿ ಕೂಡ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಭಾರತ ಬಂದ್ ಗೆ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ಪಡೆ, ಕನ್ನಡ ಚಳವಳಿ ವಾಟಾಳ್ ಪಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ಅಸಂಖ್ಯಾತ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.

ಇಂದು ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿಗಳು, ಹಾಲು ದೊರೆಯುತ್ತದೆ.  ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ ಸಂಚಾರ ಎಂದಿನಂತೆ ಇರಲಿದೆ. ಭಾರತ್ ಬಂದ್​ ಹಿನ್ನೆಲೆ ಇಂದು ಬೆಳಗ್ಗೆ 10:30ಕ್ಕೆ ವಿವಿಧ ರೈತ ಸಂಘಟನೆಗಳಿಂದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 15 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಸಿಪಿಗಳು, ಡಿಸಿಪಿಗಳು ಮತ್ತು ಎಸಿಪಿಗಳ ನೇತೃತ್ವದಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 32 ಕೆಎಸ್​​ಆರ್​ಪಿ, 30 ಸಿಎಆರ್ ತುಕಡಿಗಳನ್ನ ನಿಯೋಜಿಸಲಾಗಿದೆ. ಮೈಸೂರು ಬ್ಯಾಂಕ್ ರಸ್ತೆ, ಟೌನ್ ಹಾಲ್, ಫ್ರೀಡಂ ಪಾರ್ಕ್ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *