ಎಂಟು ತಿಂಗಳ ಬಳಿಕ ಪ್ಯಾಸೆಂಜರ್ ರೈಲುಗಳ ಸಂಚಾರ..! ಹಾಗಿದ್ರೆ ಯಾವ್ಯಾವ ರೈಲುಗಳು ಆರಂಭವಾಗಿದೆ..?
ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ಸಾರ್ವಜನಿಕರು ಯಾವುದೇ ಜಂಜಾಟವಿಲ್ಲದೆ ರೈಲಿನಲ್ಲಿ ಆರಾಮವಾಗಿ ಓಡಾಡಬಹುದು. ಅನ್ ಲಾಕ್ ಬಳಿಕ ರೈಲ್ವೆ ಇಲಾಖೆ ಹಲವು ರೈಲುಗಳನ್ನ ಹಳಿಯಲ್ಲಿಳಿಸುತ್ತಿದೆ. ಹಾಗಿದ್ರೆ ಯಾವ್ಯಾವ ರೈಲುಗಳು ಆರಂಭವಾಗಿದೆ ಅಂತ ಹೇಳ್ತೀವಿ ಮುಂದೆ ಓದಿ…
ಇಂದಿನಿಂದ ಪ್ಯಾಸೆಂಜರ್ ರೈಲುಗಳ ಸಂಚಾರ ಪುನರಾರಂಭವಾಗಿದ್ದು, ಆರು ಜೋಡಿ ಮೆಮು ಹಾಗೂ ಡೆಮು ರೈಲುಗಳ ಸಂಚಾರವನ್ನ ನೈರುತ್ಯ ರೈಲ್ವೆ ಪುನಾರಾರಂಭ ಮಾಡಿದೆ. ಬಂಗಾರಪೇಟೆ ಯಿಂದ ಮೈಸೂರು , ಬೆಂಗಳೂರು ಕೆ.ಎಸ್.ಆರ್ ನಿಂದ ಹೊಸೂರು ಹಾಗೂ ಮಾರಿಕುಪ್ಪಂ, ಯಶವಂತಪುರದಿಂದ ತುಮಕೂರು, ಹಿಂದೂಪುರ ಹಾಗೇ ಹಾಸನ ಮಾರ್ಗಗಳಿಂದ ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭವಾಗಿದೆ. ಈ ಆರು ಮಾರ್ಗಗಳಲ್ಲಿ ಇಂದಿನಿಂದ ರೈಲ್ವೆ ಸೇವೆ ಪ್ರಯಾಣಿಕರಿಗೆ ಸಿಗುತ್ತಿದ್ದು ಪ್ರಯಾಣಿಕರು ಕೌಂಟರ್ ಗಳಲ್ಲೆ ಟಿಕೆಟ್ ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಕೊರೊನಾ ಹಿನ್ನಲೆಯಲ್ಲಿ ಮೆಮು ಹಾಗೂ ಡೆಮು ರೈಲುಗಳ ಸಂಚಾರವನ್ನ ನಿಲ್ಲಿಸಲಾಗಿತ್ತು, ಸಂಚಾರ ಮಾಡುತ್ತಿದ್ದ ವಿಶೇಷ ರೈಲುಗಳ ಪ್ರಯಾಣಕ್ಕಾಗಿ ಆನ್ ಲೈನ್ ಮೂಲಕ ಮುಂಗಡ ಕಾಯ್ದಿರಿಸಬೇಕಿತ್ತು. ಆದ್ರೆ ಈಗ ಈ ನಿಯಮ ಸಡಿಲಗೊಳಿಸಿರುವ ರೈಲ್ವೆ ಇಲಾಖೆ ರೈಲುಗಳ ಸಂಚಾರವನ್ನೂ ಆರಂಭಿಸಿದೆ. ಇನ್ನು ಬೆಂಗಳೂರಿನಿಂದ ಮೈಸೂರು , ಬೆಳಗಾವಿ ಕಾರವಾರ ರೈಲುಗಳ ಸಂಚಾರ ಯಥಾಸ್ಥಿತಿ ಮುಂದುವರೆಯಲಿದ್ದು, ಹೊರ ರಾಜ್ಯದಿಂದ ಬರುವ ಉದ್ಯಾನ್ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ.
ಅನ್ ಲಾಕ್ ಬಳಿಕ ಎಲ್ಲಾ ಸಾರಿಗೆ ನಿಗಮಗಳು ಯಥಾಸ್ಥಿತಿಗೆ ಮರಳಿದ್ದು, ರೈಲು ಸಂಚಾರ ಬಾಕಿಯಿತ್ತು. ಸದ್ಯ ರೈಲು ಸಂಚಾರವೂ ಮೊದಲಿನ ಪರಿಸ್ಥಿತಿ ತಲುಪಿದ್ದು, ಪ್ರಯಾಣಕ್ಕೆ ಜನರು ಯೋಚನೆ ಮಾಡುವ ಹಾಗಿಲ್ಲ.