International Monkey Day 2020: ಮಂಗಗಳಿಗೂ ಒಂದು ದಿನವಿದೆ; ಇಂದು ವಿಶ್ವ ಕೋತಿ ದಿನ: ಮಹತ್ವ, ಇತಿಹಾಸ ತಿಳಿಯಿರಿ
ಅಮೆರಿಕ ಮತ್ತು ಇತರೆ ದೇಶಗಳಲ್ಲಿ ಕೋತಿಗಳ ದಿನ ಪ್ರಾಮುಖ್ಯತೆ ಪಡೆದಿದೆ. ಕೆನಡಾ, ಜರ್ಮನಿ, ಭಾರತ, ಪಾಕಿಸ್ತಾನ, ಈಸ್ಟೋನಿಯಾ, ಯುನೈಟೆಡ್ ಕಿಂಗ್ಡಮ್, ಕೊಲಂಬಿಯಾ, ಥೈಲ್ಯಾಂಡ್, ಟರ್ಕಿ ಮತ್ತು ಸ್ಕಾಟ್ಲ್ಯಾಂಡ್ಗಳಲ್ಲಿ ಡಿ.14ನ್ನು ವಿಶ್ವ ಮಂಗಗಳ ದಿನವನ್ನಾಗಿ ಆಚರಿಸಲಾಗುತ್ತದೆ.
ಇಂದು ಕೋತಿಗಳ ದಿನವಾಗಿದ್ದು, ಈ ದಿನವನ್ನು ವಿಶ್ವ ಕೋತಿಗಳ ದಿನ ಅಥವಾ ಅಂತರಾಷ್ಟ್ರೀಯ ಕೋತಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಅನಧಿಕೃತ ರಜಾದಿನವಾಗಿದ್ದು, ಪ್ರತೀ ವರ್ಷ ಡಿಸೆಂಬರ್ 14ನ್ನು ಮಂಗಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ವಿಶ್ವಾದ್ಯಂತ ಇರುವ ವಿವಿಧ ಬಗೆಯ ಕೋತಿಗಳು ಮ್ತತು ಸಸ್ತನಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಮಾನವರಲ್ಲದ ಇತರೆ ಸಸ್ತನಿಗಳಾದ ಮಂಗಗಳು, ಟಾರ್ಸಿಯರ್ಗಳು ಮತ್ತು ಲೆಮರ್ಗಳನ್ನು ಒಳಗೊಂಡಂತೆ ಎಲ್ಲಾ ವೈವಿಧ್ಯಮಯ ಜೀವಿಗಳ ಬಗ್ಗೆ ತಿಳಿಯಲಾಗುತ್ತದೆ. ಜೊತೆಗೆ ಆ ಪ್ರಾಣಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಲು ಡಿ.14ನ್ನು ಕೋತಿಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ಗಾತ್ರ, ತೂಕ ಮತ್ತು ಆಕಾರದಿಂದ ಹಿಡಿದು ಸುಮಾರು 260 ಜಾತಿಯ ಕೋತಿಗಳು ಆಫ್ರಿಕಾ, ಮಧ್ಯ ಅಮೆರಿಕಾ, ದಕ್ಷಿಣ ಅಮೆರಿಕಾ ಮತ್ತು ಏಷ್ಯಾ ಖಂಡದಲ್ಲಿ ಇವೆ ಎನ್ನಲಾಗಿದೆ. ಸಾಮಾನ್ಯವಾಗಿ ಪರಿಸರ ಪ್ರೇಮಿಗಳು ಅಥವಾ ಹೋರಾಟಗಾರರು ವಿಶ್ವ ಮಂಗಗಳ ದಿನದ ಬಗ್ಗೆ ಉತ್ಸಾಹವನ್ನು ಹೊಂದಿರುತ್ತಾರೆ.
ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ವಿದ್ಯಾರ್ಥಿಗಳಾದ, ಸಮಕಾಲೀನ ಕಲಾವಿದರೂ ಆದ ಕ್ಯಾಸೆ ಸಾರೋ ಮತ್ತು ಎರಿಕ್ ಮಿಲ್ಲಿಕಿನ್ ಎಂಬಾತರು 2000ನೇ ಇಸವಿಯಲ್ಲಿ ಈ ಕೋತಿಗಳ ದಿನವನ್ನು ಆಚರಿಸಲು ಪ್ರಾರಂಭಿಸಿದರು. ಅಂದಿನಿಂದ ಪ್ರತೀ ವರ್ಷ ಡಿ.14ನ್ನು ವಿಶ್ವ ಕೋತಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.
ಅಮೆರಿಕ ಮತ್ತು ಇತರೆ ದೇಶಗಳಲ್ಲಿ ಕೋತಿಗಳ ದಿನ ಪ್ರಾಮುಖ್ಯತೆ ಪಡೆದಿದೆ. ಕೆನಡಾ, ಜರ್ಮನಿ, ಭಾರತ, ಪಾಕಿಸ್ತಾನ, ಈಸ್ಟೋನಿಯಾ, ಯುನೈಟೆಡ್ ಕಿಂಗ್ಡಮ್, ಕೊಲಂಬಿಯಾ, ಥೈಲ್ಯಾಂಡ್, ಟರ್ಕಿ ಮತ್ತು ಸ್ಕಾಟ್ಲ್ಯಾಂಡ್ಗಳಲ್ಲಿ ಡಿ.14ನ್ನು ವಿಶ್ವ ಮಂಗಗಳ ದಿನವನ್ನಾಗಿ ಆಚರಿಸಲಾಗುತ್ತದೆ.
ಇಷ್ಟೇ ಅಲ್ಲದೇ ಮೃಗಾಲಯಗಳಲ್ಲೂ ಸಹ ಮಂಗಗಳ ದಿನವನ್ನು ಆಚರಿಸಲಾಗುತ್ತದೆ. ಈ ವೇಳೆ ವಿವಿಧ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಕೋತಿಗಳ ವೈವಿಧ್ಯತೆ, ಅವುಗಳ ಕಾರ್ಯಚಟುವಟಿಕೆಗಳು ಮತ್ತು ಮಂಗಗಳ ಉಳಿವು ಮತ್ತು ಸಂರಕ್ಷಣೆ ಬಗ್ಗೆ ತಿಳಿಸಿಕೊಡಲಾಗುತ್ತದೆ. ಇನ್ನೂ ಕೆಲವು ದೇಶಗಳಲ್ಲಿ ಆರ್ಟ್ ಎಕ್ಸಿಬಿಷನ್ನ್ನು ಆಯೋಜಿಸಿ ಕೋತಿಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.