ಮೇಲ್ಮನೆ ದೇವರ ಮಂದಿರ ಇದ್ದಂತೆ; ಕಾಂಗ್ರೆಸ್​ ಸಂವಿಧಾನದ ಹತ್ಯೆ ಮಾಡಿದೆ- ಸಚಿವ ಪ್ರಭು ಚವ್ಹಾಣ ಆಕ್ರೋಶ

ದೇಶದಲ್ಲಿ ಗೋ ಮಾತೆಗೆ ಪೂಜಿಸಲಾಗುತ್ತದೆ. ಆದರೆ ಗೋ ಹತ್ಯೆ ನಿಷೇಧ ಕಾಯ್ದೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ವಿರೋಧ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನೆ ಮಾಡಿದರು. ಎಷ್ಟೇ ಅಡ್ಡಿ ಪಡಿಸಿದರೂ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ತರಲಾಗುತ್ತದೆ ಎಂದರು.

ಯಾದಗಿರಿ(ಡಿ.16): ಕಾಂಗ್ರೆಸ್ ಗೆ ರಾಜ್ಯದಲ್ಲಿ ಜನ ಬೆಂಬಲವಿಲ್ಲ,  ಇದರಿಂದ ನೊಂದು ಕಾಂಗ್ರೆಸ್ ಸದಸ್ಯರು ಹತಾಶೆಗೊಂಡಿದ್ದಾರೆ.  ಕಾಂಗ್ರೆಸ್ ನವರಿಗೆ ಬುದ್ದಿ ಇಲ್ಲವೆಂದು ಯಾದಗಿರಿಯಲ್ಲಿ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಯಾದಗಿರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಅಧಿವೇಶನದಲ್ಲಿ ಕಾಂಗ್ರೆಸ್ ನವರು ಗಲಾಟೆ ಮಾಡಿದ್ದಾರೆ. ಕಾಂಗ್ರೆಸ್ ಸದಸ್ಯರು ಸದನದ  ಮೇಲ್ಮನೆಯ ಬಾಗಿಲು ಒದ್ದು ಕೆಟ್ಟ ಕೆಲಸ ಮಾಡಿ ಸಂವಿಧಾನ ಹತ್ಯೆ ಮಾಡುವ ದುಷ್ಕೃತ್ಯ ಎಸಗಿದ್ದಾರೆ  ಎಂದು ಸಚಿವ ಪ್ರಭು ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದನದಲ್ಲಿ ಬಿಜೆಪಿ ಸದಸ್ಯರು ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಹಕ್ಕನ್ನು ಕೇಳಿದರು. ಆದರೆ ಕಾಂಗ್ರೆಸ್ ನ ಸದಸ್ಯರು ಸಭಾಪತಿ ಸ್ಥಾನದ ಮೇಲೆ ಕುಳಿತು ಗಲಾಟೆ ಮಾಡಿದ್ದು, ಇದು ಕಾಂಗ್ರೆಸ್​​ ಮಾಡಿದ ಕೆಟ್ಟ ಕೆಲಸವಾಗಿದೆ. ಇಂತಹ ಘಟನೆ ಅತ್ಯಂತ ನೋವು ತಂದಿದ್ದು, ಮೇಲ್ಮನೆಯು ನಮಗೆ ದೇವರ‌ ಮಂದಿರವಾಗಿದೆ. ಮಂದಿರಕ್ಕೆ ಕಾಂಗ್ರೆಸ್ ಸದಸ್ಯರು ಒದ್ದು ಕೆಟ್ಟ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸದನದಲ್ಲಿ ಬಿಜೆಪಿ ಸದಸ್ಯರು ಗಲಾಟೆ ಮಾಡಿಲ್ಲ, ಕಾಂಗ್ರೆಸ್ ನ ಪರಿಷತ್ ಸದಸ್ಯರು ಗಲಾಟೆ ಮಾಡಿದ್ದಾರೆಂದು ಪ್ರಭು ಚವ್ಹಾಣ್​ ಆರೋಪಿಸಿದ್ದಾರೆ. ಕಾಂಗ್ರೆಸ್ ನವರು ಸದನದಲ್ಲಿ ಗಲಾಟೆ ಮಾಡಿ ಇಡಿ ದೇಶವೇ ತಲೆತಗ್ಗಿಸುವ ಕೆಟ್ಟ ಕೆಲಸ ಮಾಡಿದ್ದಾರೆ. ದೇಶದಲ್ಲಿ ಗೋ ಮಾತೆಗೆ ಪೂಜಿಸಲಾಗುತ್ತದೆ. ಆದರೆ ಗೋ ಹತ್ಯೆ ನಿಷೇಧ ಕಾಯ್ದೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ವಿರೋಧ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನೆ ಮಾಡಿದರು. ಎಷ್ಟೇ ಅಡ್ಡಿ ಪಡಿಸಿದರೂ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ತರಲಾಗುತ್ತದೆ ಎಂದರು.

ದೇವೇಗೌಡರ ವಿರುದ್ಧ ಆಕ್ರೋಶ

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ವಿರುದ್ಧ ಕೂಡ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರು ಗರಂ ಆಗಿ ವಾಗ್ದಾಳಿ ನಡೆಸಿದ್ದಾರೆ. ದೇಶದ 19 ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಕಾಯ್ದೆ ಜಾರಿಗೆ ತರಲಾಗಿದ್ದು, ಇದರಿಂದ ದೇಶದಲ್ಲಿ ಮೂಕಪ್ರಾಣಿಗಳ ಹೀತ ಕಾಪಾಡಲಾಗಿದೆ. ಆದ್ರೆ ನಮ್ಮ ರಾಜ್ಯದಲ್ಲಿ ಯಾಕೆ ಕಾಯ್ದೆ ಜಾರಿಗೆ ತಂದು‌ ಮೂಕ ಪ್ರಾಣಿಗಳ ಪ್ರಾಣ ರಕ್ಷಣೆ ಮಾಡಬಾರದು. ನೀವು ಕಾಯ್ದೆ ಜಾರಿಗೆ ತಂದಿಲ್ಲ. ನಾವು ಕಾಯ್ದೆ ಜಾರಿಗೆ ತರಲು ಹೊರಟರೆ ಅವಕಾಶ ಕೊಡುತ್ತಿಲ್ಲವೆಂದು  ಅಕ್ರೋಶಗೊಂಡರು.

ಶಾಲೆ ಆರಂಭವಾಗಲಿ…!

ರಾಜ್ಯದಲ್ಲಿ ಸರಕಾರ ಶಾಲೆ ಆರಂಭ ಮಾಡಲು ರಾಜ್ಯ ಸರಕಾರ  ಮುಂದಾಗಿದ್ದು ಇದು ಉತ್ತಮ ಕೆಲಸವಾಗಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆ ಆರಂಭ ಮಾಡುವ ನಿರ್ಧಾರ ಕೈಗೊಂಡಿದ್ದಕ್ಕೆ ನಾವು ಕೂಡ ಬೆಂಬಲ ನೀಡುತ್ತೇವೆ. ಕೋವಿಡ್ ಪರಿಣಾಮ ರಾಜ್ಯದಲ್ಲಿ ಶಾಲೆ ಬಂದ್ ಆದ ಕಾರಣ ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿವೆ. ಇವುಗಳಿಗೆ ಕಡಿವಾಣ ಹಾಕಲು ಸರಕಾರ ಅಗತ್ಯ ಕೋವಿಡ್ ಮುಂಜಾಗ್ರತೆ ಕ್ರಮ ವಹಿಸಿ ಶಾಲೆ ಆರಂಭ ಮಾಡಿದರೆ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *