ಕೊರೋನಾಗೆ ಕೇರ್ ಮಾಡದ ಮೈಸೂರು ಜನತೆ: ಮಾಸ್ಕ್, ಸಾಮಾಜಿಕ ಅಂತರ ಮರೆತು ಷಷ್ಠಿ ಪೂಜೆಯಲ್ಲಿ ಭಾಗಿ
ಸುಬ್ರಮಣ್ಯ ಷಷ್ಠಿ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಸಾಮಾಜಿಕ ಅಂತರ, ಮಾಸ್ಕ್ ಹಾಕುವುದನ್ನು ಮರೆತು ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಹುತ್ತಕ್ಕೆ ಹಾಲೆರೆದರು.
ಮೈಸೂರು: ಸುಬ್ರಮಣ್ಯ ಷಷ್ಠಿ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಸಾಮಾಜಿಕ ಅಂತರ, ಮಾಸ್ಕ್ ಹಾಕುವುದನ್ನು ಮರೆತು ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಹುತ್ತಕ್ಕೆ ಹಾಲೆರೆದರು.
ಸಿದ್ದಲಿಂಗಪುರದಲ್ಲಿರುವ ಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ಭಕ್ತರಿಗೆ ಜಿಲ್ಲಾಡಳಿತ ಪ್ರವೇಶ ನಿರ್ಬಂಧಿಸಿದ್ದ ಕಾರಣ ತಮ್ಮ ಮನೆಯ ಸಮೀಪವಿರುವ ದೇವಾಸ್ಥಾನ ಮತ್ತು ಹುತ್ತಗಳಿಗೆ ಹಾಲೆರೆದರು.
ಷಷ್ಠಿ ದಿವಸ ಹುತ್ತಕ್ಕೆ ಹಾಲೆರೆದರೇ ಸರ್ಪ ದೋಷದಿಂದ ಮುಕ್ತಿ ಪಡೆಯಬಹುದು ಎಂಬುದು ಭಕ್ತರ ನಂಬಿಕೆಯಾಗಿದೆ. ಹಲವು ದೇವಾಲಯಗಳಲ್ಲಿ ಸಾಮಾಜಿಕ ಅಂತರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜನರು ಜಮೀನಿನಲ್ಲಿರುವ ಹುತ್ತಗಳಿಗೆ ತೆರಳಿ ಹಾಲೆರೆದು ಪೂಜೆ ಸಲ್ಲಿಸಿದರು.