ಕರ್ನಾಟಕಕ್ಕೆ ಹೊಸ ಆತಂಕ: ಕೋವಿಡ್-19 ಪರೀಕ್ಷೆ ಇಲ್ಲದೆಯೆ 138 ಪ್ರಯಾಣಿಕರು ಬ್ರಿಟನ್ ನಿಂದ ರಾಜ್ಯಕ್ಕೆ ಆಗಮನ!

ಕೆಲ ದಿನಗಳ ಹಿಂದೆ ಬ್ರಿಟನ್ ನಲ್ಲಿ ಹೊಸ ವಿಧದ ಸಾರ್ಸ್ -ಕೋವಿ-2 ವೈರಸ್ ಕಾಣಿಸಿಕೊಂಡಿದ್ದು, ಅಲ್ಲಿಂದ ವಿಮಾನದ ಮೂಲಕ ಕನಿಷ್ಠ 138 ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದು, ಇಲ್ಲಿ ಆಂತಕ ಮನೆಮಾಡಿದೆ.

ಬೆಂಗಳೂರು: ಕೆಲ ದಿನಗಳ ಹಿಂದೆ ಬ್ರಿಟನ್ ನಲ್ಲಿ ಹೊಸ ವಿಧದ ಸಾರ್ಸ್ -ಕೋವಿ-2 ವೈರಸ್ ಕಾಣಿಸಿಕೊಂಡಿದ್ದು, ಅಲ್ಲಿಂದ ವಿಮಾನದ ಮೂಲಕ ಕನಿಷ್ಠ 138 ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದು, ಇಲ್ಲಿ ಆಂತಕ ಮನೆಮಾಡಿದೆ.

ಬ್ರಿಟನ್ ನಲ್ಲಿ  ಹೊಸ ಮಾದರಿಯ ಕೋವಿಡ್-19 ಸೋಂಕು ಕಾಣಿಸಿಕೊಂಡ ನಂತರ ನಾಗರಿಕ ವಿಮಾನಯಾನ ಸಚಿವಾಲಯ ಎಲ್ಲಾ ಒಳಬರುವ ವಿಮಾನಗಳನ್ನು ನಿಷೇಧ ಮಾಡಿದೆ. ನಿನ್ನೆ ಆದೇಶ ಹೊರಡಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ಹೊರಡಿಸಿ ಬ್ರಿಟನ್ ನಿಂದ ಆಗಮಿಸುವ ಎಲ್ಲಾ ಪ್ರಯಾಣಿಕರಿಗೆ ಕೊರೋನಾ ಪರೀಕ್ಷೆ ಮತ್ತು ಕ್ವಾರಂಟೈನ್ ಶಿಷ್ಠಾಚಾರಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಇದೀಗ ರಾಜ್ಯ ಆರೋಗ್ಯ ಇಲಾಖೆ ಇಂಗ್ಲೆಂಡಿನಿಂದ ಯಾರೆಲ್ಲಾ ಬಂದಿದ್ದಾರೆ ಎಂದು ಹುಡುಕಾಡಿ ಅವರನ್ನು ಕ್ವಾರಂಟೈನ್ ಗೆ ಒಳಪಡಿಸುವ ಕೆಲಸದಲ್ಲಿ ತೊಡಗಿದೆ.

ಕಳೆದ 15 ದಿನಗಳಲ್ಲಿ ಯುನೈಟೆಡ್ ಕಿಂಗ್ ಡಮ್ ನಿಂದ ಯಾರೆಲ್ಲಾ ವಿಮಾನದ ಮೂಲಕ ಪ್ರಯಾಣಿಸಿ ಬಂದಿದ್ದಾರೆ ಎಂದು ಹುಡುಕಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ.

ಕಳೆದ ಡಿಸೆಂಬರ್ 7ರ ನಂತರ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಎಷ್ಟು ಮಂದಿ ಬ್ರಿಟನ್ ನಿಂದ ಪ್ರಯಾಣಿಕರು ಬಂದಿಳಿದಿದ್ದಾರೆ ಎಂದು ಪತ್ತೆಹಚ್ಚುವಂತೆ ಆರೋಗ್ಯ ಇಲಾಖೆ ನಿನ್ನೆ ಸುತ್ತೋಲೆ ಹೊರಡಿಸಿದೆ.ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಕಳೆದ ಭಾನುವಾರ ಮತ್ತು ಸೋಮವಾರ ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಬಂದ 291 ಪ್ರಯಾಣಿಕರು ಕೋವಿಡ್-19 ನೆಗೆಟಿವ್ ಸರ್ಟಿಫಿಕೇಟ್ ಇಲ್ಲದೆಯೇ ಬಂದಿದ್ದು, ಅವರು ಆರ್ ಟಿ-ಪಿಸಿಆರ್ ಟೆಸ್ಟ್ ಗಳಿಗೆ ಕೂಡ ಒಳಗಾಗಿಲ್ಲ. 246 ಪ್ರಯಾಣಿಕರಲ್ಲಿ 89 ಮಂದಿಯಲ್ಲಿ ಕೋವಿಡ್-19 ಸರ್ಟಿಫಿಕೇಟ್ ಇರಲಿಲ್ಲ. ಅವರು ಪರೀಕ್ಷೆಗೆ ಕೂಡ ಒಳಗಾಗಿಲ್ಲ ಎಂದಿದ್ದಾರೆ.

ಇವರಲ್ಲಿ ಕೊರೋನಾ ಲಕ್ಷಣ ಕಂಡುಬಂದಿಲ್ಲ. ಆದರೆ ಸುರಕ್ಷತೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯದಿಂದ ನಾವು ವಿವರ ಕೇಳಿದ್ದು ಅವರನ್ನು ಪತ್ತೆಹಚ್ಚುತ್ತಿದ್ದೇವೆ. ಒಮ್ಮೆ ಪತ್ತೆಯಾದ ನಂತರ ಆರ್ ಟಿ-ಪಿಸಿಆರ್ ಟೆಸ್ಟ್ ಗಳನ್ನು ನಡೆಸುತ್ತೇವೆ ಎಂದು ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *