86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಹಾವೇರಿಯಲ್ಲಿ 29 ಎಕರೆ ಜಾಗ ನಿಗದಿ!
ಹಾವೇರಿಯಲ್ಲಿ ಫೆ.26ರಿಂದ ಮೂರು ದಿನ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 29 ಎಕರೆ ಜಾಗ ನಿಗದಿ ಮಾಡಲಾಗಿದೆ. ಇಲ್ಲಿ ಸುಮಾರು 500 ಮಳಿಗೆಗಳನ್ನು ತೆರೆಯಬಹುದು. ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಬಹುದಾದ ಸುಸಜ್ಜಿತ ಜಾಗ ಇದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ತಿಳಿಸಿದ್ದಾರೆ.
ಬೆಂಗಳೂರು: ಹಾವೇರಿಯಲ್ಲಿ ಫೆ.26ರಿಂದ ಮೂರು ದಿನ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿಯ ಜಿ.ಎಚ್. ಕಾಲೇಜು ಪಕ್ಕ (ಹಳೆಯ ನ್ಯಾಷನಲ್ ಹೈವೇ ಸಮೀಪ)ದಲ್ಲಿರುವ 29 ಎಕರೆ ಜಾಗವನ್ನು ಗುರುತಿಸಲಾಗಿದೆ.
ಇಲ್ಲಿ ಸುಮಾರು 500 ಮಳಿಗೆಗಳನ್ನು ತೆರೆಯಬಹುದು. ಅಕ್ಷರ ಜಾತ್ರೆಗೆ ಬರುವ ಎಲ್ಲರಿಗೂ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಬಹುದಾದ ಸುಸಜ್ಜಿತ ಜಾಗ ಇದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ತಿಳಿಸಿದರು.