ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಿ ಉಸ್ತುವಾರಿ ಹೊಣೆ ನೀಡಬೇಕು ಎಂದು ಆಗ್ರಹಿಸಿ ಕನ್ನಡ ಭೂಮಿ ಜಾಗೃತಿ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ಜಿಲ್ಲಾ ಅಧ್ಯಕ್ಷ ಪ್ರಶಾಂತ ತಂಬೂರಿ, ಪದಾಧಿಕಾರಿಗಳಾದ ಗುರುಲಿಂಗಪ್ಪ ಟೆಂಗಳಿ, ಶರಣಯ್ಯ ಇಕ್ಕಳಕಿಮಠ,ಸಾಜೀದ ಅಲಿ ರಂಜೋಳ್ಳ್ವಿ,ರೋಹನ್ ರಠಕಲ, ಅಶೋಕ್ ಧಂಗಾಪೂರ, ಬಾಬಾ ಫಕ್ರುದ್ದೀನ್, ವಿನೋದ್ ಪಾಟೀಲ್, ಶಿವಪುತ್ರಪ್ಪ ಮರಡಿ, ಸುನೀಲ್ ಶಾಬಾದಿ ಸೇರಿದಂತೆ ಅನೇಕರು ಇದ್ದರು.