ನೀವು ಧರಿಸುವ ಬಾಟಾ ಚಪ್ಪಲಿ, ಸ್ನಾನಕ್ಕೆ ಬಳಸುವ ಲೈಫ್ಬಾಯ್ ಸಾಬೂನು ಭಾರತದಲ್ಲ; ಮತ್ತೆಲ್ಲಿಯದ್ದು?
ಬಟ್ಟೆ ಒಗೆಯಲು ಬಳಸುವ ಟೈಡ್ ಕಂಪನಿಯ ಜಾಹೀರಾತು ನೋಡಿದರೆ ಸ್ವದೇಶಿ ಕಂಪನಿ ಎಂದುಕೊಳ್ಳಬೇಕು. ಆದರೆ ಟೈಡ್ ಮೂಲತಃ ಅಮೆರಿಕಾದ ಎಫ್ಎಂಸಿಜೆ ಪ್ರಾಕ್ಟರ್ ಎಂಡ್ ಗ್ಯಾಂಬಲ್ ಸಂಸ್ಥೆಯದ್ದಾಗಿದೆ.

ಭಾರತದಲ್ಲಿ ಹಲವಾರು ಬ್ರಾಂಡ್ ಕಂಪನಿಗಳು ನೆಲೆಯೂರಿವೆ. ತಮ್ಮದೇ ಆದ ಬ್ರಾಂಡ್ ಅನ್ನು ಭಾರತೀಯರಿಗೆ ತಲುಪಿಸಿದೆ. ಸ್ನಾನಕ್ಕೆ ಬಳಸುವ ಲೈಫ್ಬಾಯ್ ಸಾಬೂನಿನಿಂದ ಹಿಡಿದು, ಧರಿಸುವ ಬಾಟಾ ಚಪ್ಪಲಿ ಹೀಗೆ ನಾನಾ ಸಂಸ್ಥೆಗಳು ಭಾರತದಲ್ಲಿವೆ. ಹೆಚ್ಚಿನ ಜನರು ಈ ಕಂಪನಿಗಳು ಭಾರತದ ಕಂಪನಿಗಳು ಎಂದು ಕೊಂಡಿದ್ದಾರೆ. ಅನೇಕರಿಗೆ ಕೆಲವು ಬ್ರಾಂಡೆಡ್ ಕಂಪನಿಯ ಮೂಲ ಎಲ್ಲಿಯದ್ದು? ಭಾರತದಲ್ಲಿ ತನ್ನ ಮಾರಾಟವನ್ನು ಯಾವಾಗಿನಿಂದ ಪ್ರಾರಂಭಿಸಿತ್ತು? ಎಂಬ ಬಗ್ಗೆ ಗೊತ್ತಿಲ್ಲ.


ಭಾರತದಲ್ಲಿ ಜನಪ್ರಿಯತೆ ಪಡೆದ ತನ್ನ ಮಾರಾಟವನ್ನು ದೇಶದ ಉದ್ದಗಲಕ್ಕೂ ಪಸರಿಸಿರುವ ಕೆಲವು ಬ್ರಾಂಡ್ ಕಂಪನಿಗಳ ಬಗೆಗಿನ ಕೆಲವು ಕೂತೂಹಲಕಾರಿ ಸಂಗತಿಯನ್ನು ಇಲ್ಲಿ ನೀಡಲಾಗಿದೆ.


ಬಾಟಾ: ಪಾದರಕ್ಷೆಗಳ ಬ್ರಾಂಡೆಡ್ ಕಂಪನಿಗಳಲ್ಲಿ ಬಾಟಾ ಕಂಪನಿಗಳು ಕೂಡ ಒಂದು. ಈ ಕಂಪನಿ ಕೆನಡಾ ಮೂಲದ್ದಾಗಿದ್ದು, ಇದರ ಮುಖ್ಯ ಕಾರ್ಯಾಲಯ ಸ್ವಿಸ್ವಿಜರ್ಲ್ಯಾಂಡ್ ಲಾಸಾನ್ ನಗರದಲ್ಲಿದೆ.

ಲೈಫ್ಬಾಯ್; ಸ್ನಾನಕ್ಕೆ ಬಳಸುವ ಲೈಫ್ಬಾಯ್ ಸಾಬೂನು ಇಂಗ್ಲೆಂಡ್ ಮೂಲದ್ದಾಗಿದ್ದು, 1895ರಲ್ಲಿ ಲಿವರ್ ಬ್ರದರ್ಸ್ ಆರಂಭಿಸಿದ್ದರು.

ಟೈಡ್: ಬಟ್ಟೆ ಒಗೆಯಲು ಬಳಸುವ ಟೈಡ್ ಕಂಪನಿಯ ಜಾಹೀರಾತು ನೋಡಿದರೆ ಸ್ವದೇಶಿ ಕಂಪನಿ ಎಂದುಕೊಳ್ಳಬೇಕು. ಆದರೆ ಟೈಡ್ ಮೂಲತಃ ಅಮೆರಿಕಾದ ಎಫ್ಎಂಸಿಜೆ ಪ್ರಾಕ್ಟರ್ ಎಂಡ್ ಗ್ಯಾಂಬಲ್ ಸಂಸ್ಥೆಯದ್ದಾಗಿದೆ.

ಪೆಪೆ ಜೀನ್ಸ್; ಯುವಜನರ ಅಚ್ಚುಮೆಚ್ಚಿನ ಡೆನಿಮ್ ಬ್ರಾಂಡ್ ಮೂಲತಃ ಲಂಡ ನ್ದ್ದಾಗಿದ್ದರು, ಆ ಕಂಪನಿಯ ಸ್ಥಾಪಕರು ಭಾರತೀಯರು ಎಂಬುದು ಹೆಮ್ಮೆಯ ವಿಚಾರ. ನಿತಿನ್, ಅರುಣ್ ಮತ್ತು ಮಿಲಿನ್ ಶಾ ಸೋದರರು ಡೆನಿಮ್ ಬ್ರಾಂಡ್ ಸ್ಥಾಪಕರು.

ಕೋಲ್ಗೇಟ್; ಭಾರತದಲ್ಲಿ ಜನಪ್ರಿಯತೆಗಳಿಸರುವ ಕೋಲ್ಗೇಟ್ ಟೂತ್ ಪೇಸ್ಟ್ ಬ್ರಾಂಡ್ 1896ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಪ್ರಾರಂಭವಾಯಿತು.

ಬೋಸ್: ಆಡಿಯೋ ಉಪಕರಣಗಳ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆಮಾಡುವ ಬಾಸ್ ಕಂಪನಿಯನ್ನು ಭಾರತೀಯರಾದ ಅಮರ್ ಬೋಸ್ ಪ್ರಾರಂಭಿಸಿದರು. ಅಮೆರಿಕದ ಮೆಸ್ಸಾಚುಸೆಟ್ಸ್ ನಗರದದ ಫ್ರೇಮಿಂಗ್ಹ್ಯಾಮ್ನಲ್ಲಿ ಮೊದಲು ಆರಂಭಿಸಿದರು.

ಗುಡಂಗ್ ಗರಂ: ಕ್ಲೋವ್ ಸಿಗರೇಟ್ ಬ್ರಾಂಡ್ 1958ರಲ್ಲಿ ಇಂಡೊನೇಷ್ಯಾದಲ್ಲಿ ಪ್ರಾರಂಭವಾಯಿತು.

ಟೈಟನ್: ಜನಪ್ರಿಯ ಬ್ರಾಂಡ್ ಆಗಿರುವ ಟೈಟನ್ ಟಾಟಾ ಗ್ರೂಪ್ ಹಾಗೂ ತಮಿಳುನಾಡು ಇಂಡಸ್ಟ್ರೀಯಲ್ ಡೆವಲೆಪ್ಮ್ಮೆಂಟ್ ಕಾರ್ಪೊರೇಶನ್ನ ಜಂಟಿ ಒಡೆತನದ ಸಂಸ್ಥೆಯಾಗಿದೆ.

ಹೈಡ್ಸೈನ್: ಚರ್ಮದ ಉತ್ಪನ್ನಗಳನ್ನು ಉತ್ಪಾದಿಸುವ ಅಂತಾರಾಷ್ಟ್ರೀಯ ಹೈಡ್ಸೈನ್ ಬ್ರಾಂಡ್ ಮುಖ್ಯ ಕಾರ್ಯಲಯ ತಮಿಳುನಾಡಿನ ಪಾಂಡಿಚೇರಿಯಲ್ಲಿದೆ.

ಬಿಸ್ಲೆರಿ: ಮಿನರರ್ ವಾಟರ್ಗಳನ್ನ ಪೂರೈಕೆ ಮಾಡುವ ಬಿಸ್ಲೆರಿ ಸಂಸ್ಥೆ ಪಾರ್ಲೆ ಗ್ರೂಪ್ ಒಡೆತನದ್ದಾಗಿದೆ.

ಅಲೆನ್ ಸೋಲ್ಲಿ; ರಿಟೇಲ್ ಬಟ್ಟೆಗಳ ಬ್ರಾಂಡ್ ಆಗಿರುವ ಅಲೆನ್ ಸೋಲ್ಲಿ ದಿ ಆದಿತ್ಯ ಬಿರ್ಲಾ ಗ್ರೂಪ್ಗೆ ಸೇರಿದೆ.

ಮೊಂಟೆ ಕಾರ್ಲೊ; ಉಣ್ಣೆಯ ಬಟ್ಟೆಯ ಬ್ರಾಂಡ್ಗಳಾದ ಮೊಂಟೆ ಕಾರ್ಲೊ ಮೂಲ ಪಂಜಾಬ್ ಲುಧಿಯಾನದಲ್ಲಿದೆ.

ಮ್ಯಾಗಿ: ಸ್ವಿಜರ್ಲ್ಯಾಂಡ್ ಮೂಲದ ನೆಸ್ಲೆ ಕಂಪನಿಗೆ ಸೇರಿದ್ದಾಗಿದೆ.

ಪೀಟರ್ ಇಂಗ್ಲೆಂಡ್; ಬ್ರಾಂಡ್ನಲ್ಲಿ ಇಂಗ್ಲೆಂಡ್ ಪದ ಇದ್ದರು ಇದೊಂದು ಭಾರತದ ಬ್ರಾಂಡ್ ಆಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಒಡೆತನದಲ್ಲಿದೆ.