ಬ್ರಿಟನ್ ರೂಪಾಂತರಿ ಕೋರೋನಾ ತಳಿ ಪ್ರತ್ಯೇಕಿಸಿ ಸಂಸ್ಕರಿಸಿ ಯಶಸ್ವಿಯಾದ ಏಕೈಕ ರಾಷ್ಟ್ರ ಭಾರತ!

ಬ್ರಿಟನ್ ರೂಪಾಂತರಿ ಕೊರೋನಾ ವೈರಸ್ ತಳಿಯನ್ನು ಅಧ್ಯಯನ ನಡೆಸುವ ವಿಷಯದಲ್ಲಿ ಭಾರತ ಮಹತ್ತರ ಸಾಧನೆ ಮಾಡಿರುವ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನವದೆಹಲಿ: ಬ್ರಿಟನ್ ರೂಪಾಂತರಿ ಕೊರೋನಾ ವೈರಸ್ ತಳಿಯನ್ನು ಅಧ್ಯಯನ ನಡೆಸುವ ವಿಷಯದಲ್ಲಿ ಭಾರತ ಮಹತ್ತರ ಸಾಧನೆ ಮಾಡಿರುವ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಐಸಿಎಂಆರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬ್ರಿಟನ್ ರೂಪಾಂತರಿ ಕೊರೋನಾ ವೈರಸ್ ನ ಅಧ್ಯಯನ, ನಿಯಂತ್ರಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ, ಬ್ರಿಟನ್ ನಿಂದ ವಾಪಸ್ಸಾದವರಲ್ಲಿ ಪಡೆಯಲಾಗಿದ್ದ ಕ್ಲಿನಿಕಲ್ ಸ್ಪೆಸಿಮನ್ ಗಳ ಮೂಲಕ ಹೊಸ ಮಾದರಿಯ ಕೊರೋನಾ ಜೀವಕೋಶಗಳನ್ನು ಪ್ರತ್ಯೇಕಿಸಿ ಸಂಸ್ಕರಣೆ (ಕಲ್ಚರ್)ಯನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಯಶಸ್ವಿಯಾಗಿ ಮಾಡಲಾಗಿದೆ ಎಂದು ಐಸಿಎಂಆರ್ ಟ್ವೀಟ್ ನಲ್ಲಿ ಮಾಹಿತಿ ನೀಡಿದೆ.

ಭಾರತದಲ್ಲಿ ಕೋವಿಡ್-19 ಹರಡುವುದಕ್ಕೆ ಪ್ರಾರಂಭವಾದಾಗಿನಿಂದಲೂ ಕೋವಿಡ್ ಹರಡುವ Sars-CoV-2 ವೈರಾಣುವನ್ನು ದೇಶಾದ್ಯಂತ ಇರುವ ಐಸಿಎಂಆರ್ ಪ್ರಯೋಗಾಲಯಗಳಲ್ಲಿ ಟ್ರ್ಯಾಕ್ ಮಾಡಲಾಗುತ್ತಿತ್ತು. ಈಗ ಐಸಿಎಂಆರ್-ಎನ್ಐವಿ ವಿಜ್ಞಾನಿಗಳು ಬ್ರಿಟನ್ ಮಾದರಿಯ ವೈರಾಣುವನ್ನು ಸಂಸ್ಕರಣೆ (ಕಲ್ಚರ್)ಗೆ ಒಳಪಡಿಸುವುದಕ್ಕೆ ವೆರೋ ಸೆಲ್ ಲೈನ್ ಗಳನ್ನು ಬಳಕೆ ಮಾಡಿದ್ದಾರೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಐಸಿಎಂಆರ್ ನೀಡಿರುವ ಮಾಹಿತಿಯ ಪ್ರಕಾರ ಈ ವರೆಗೂ ಬೇರೆ ಯಾವುದೇ ದೇಶವೂ ಇದನ್ನು ಯಶಸ್ವಿಯಾಗಿ ನಿರ್ವಹಿಸಿಲ್ಲ. ಭಾರತದಲ್ಲಿ ಬ್ರಿಟನ್ ರೂಪಾಂತರಿ ವೈರಸ್ ಸೋಂಕು ತಗುಲಿರುವ 29 ಪ್ರಕರಣಗಳು ಈ ವರೆಗೂ ವರದಿಯಾಗಿವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *