ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರಿಗೆ ಅನಾರೋಗ್ಯ ಬೆಂಗಳೂರಿಗೆ ಶಿಫ್ಟ್..!
ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಕೇಂದ್ರ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ಅವರನ್ನ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆತರಲು ನಿರೀಕ್ಷೆ ಇತ್ತಾದರೂ . ಇದೀಗ ಯೋಚನೆ ಬದಲಾಯಿಸಿ ರಸ್ತೆ ಮೂಲಕವೇ ಅವರನ್ನು ಬೆಂಗಳೂರಿಗೆ ಕರೆತರಲು ನಿರ್ಧರಿಸಲಾಗಿದೆ.
ಸಚಿವ ಡಿ.ವಿ ಸದಾನಂದ ಗೌಡರನ್ನುಕರೆತರುವ ವೇಳೆ ರಸ್ತೆಯಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗುತ್ತದೆ ಎನ್ನಲಾಗಿದೆ. ಐಸಿಯು ಸಹಿತ ಆಂಬ್ಯುಲೆನ್ಸ್ ನಲ್ಲಿ ಸದಾನಂದ ಗೌಡರನ್ನ ಕರೆತರಲಾಗುತ್ತದೆ, ಅವರ ಆರೋಗ್ಯ ಸ್ಥಿರವಾಗಿರುವ ಹಿನ್ನಲೆಯಲ್ಲಿ ರಸ್ತೆ ಮಾರ್ಗವಾಗಿ ಅಂಬ್ಯುಲೆನ್ಸ್ ನಲ್ಲಿ ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಲ ಹೊತ್ತು ಚಿತ್ರದುರ್ಗದ ಆಸ್ಪತ್ರೆಯಲ್ಲಿದ್ದು ವಿಶ್ರಾಂತಿ ಪಡೆದ ನಂತರ ಇದೀಗ ಬೆಂಗಳೂರಿನತ್ತ ಡಿವಿಎಸ್ ಹೊರಟಿದ್ದಾರೆ ಎನ್ನಲಾಗಿದೆ. ಡಾಕ್ಟರ್ ಜಗದೀಶ್ ಸದಾನಂದಗೌಡರ ಜೊತೆ ಆ್ಯಂಬುಲೆನ್ಸ್ನಲ್ಲಿ ಪ್ರಯಾಣಿಸಲಿದ್ದಾರೆ ಎನ್ನುವ ಮಾಹಿತಿ ಇದೆ.