ಮಂಗಳೂರಿಗೆ ಇಂದು ಮೋದಿ ಬಿಗ್ ಗಿಫ್ಟ್..! ಕೊಚ್ಚಿ-ಮಂಗಳೂರು ಗ್ಯಾಸ್ ಪೈಪ್ಲೈನ್ ಲೋಕಾರ್ಪಣೆ…
ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳೂರಿಗೆ ಬಿಗ್ ಗಿಫ್ಟ್ ಕೊಡಲಿದ್ದಾರೆ. ಕೊಚ್ಚಿ-ಮಂಗಳೂರು ನ್ಯಾಚುರಲ್ ಗ್ಯಾಸ್ ಪೈಪ್ಲೈನ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಲೋಕಾರ್ಪಣೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
ಒಂದು ದೇಶ ಒಂದು ಗ್ಯಾಸ್ ಗ್ರಿಡ್ ಸ್ಥಾಪನೆಗೆ ಈ ಯೋಜನೆ ಮೈಲಿಗಲ್ಲು ಎಂದು ಪ್ರಧಾನಿ ಕಾರ್ಯಲಯ ಅಭಿಪ್ರಾಯ ಪಟ್ಟಿದೆ. ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯುರಪ್ಪ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಎರಡೂ ರಾಜ್ಯಗಳ ರಾಜ್ಯಪಾಲರು, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
450 ಕಿಮೀ ಉದ್ದದ ಪೈಪ್ಲೈನ್ ನಿರ್ಮಿಸಿರೋ ಗೈಲ್ ಕಂಪನಿ ದಿನಕ್ಕೆ 12 ದಶಲಕ್ಷ ಕ್ಯೂಬಿಕ್ ಮೀಟರ್ ಗ್ಯಾಸ್ ಸಪ್ಲೈ ಮಾಡುವ ಪೈಪ್ಲೈನ್ ಇದಾಗಿದೆ. ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲ್ಲಾಪುರಂ, ಕೋಝಿಕೋಡ್, ಕಣ್ಣೂರು, ಕಾಸರಗೋಡು ಮೂಲಕ ಮಂಗಳೂರಿಗೆ ಪೈಪ್ಲೈನ್ ಇದೆ. 3000 ಕೋಟಿ ವೆಚ್ಚದಲ್ಲಿ ಗ್ಯಾಸ್ ಪೈಪ್ಲೈನ್ ನಿರ್ಮಾಣವಾಗಿದ್ದು 12 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಲಿರುವ ಮಹತ್ತರ ಯೋಜನೆಯಾಗಿದೆ.