ಲಾಕ್ ಡೌನ್ನಿಂದ ತತ್ತರಿಸಿದ್ದ ವ್ಯಾಪಾರಸ್ಥರಿಗೆ ಗುಡ್ ನ್ಯೂಸ್..! ಇನ್ಮುಂದೆ ಅಂಗಡಿ ಬಂದ್ ಮಾಡ್ಬೇಕಿಲ್ಲ…!
ಕೊರೋನಾದಿಂದ ಅದೆಷ್ಟೋ ಉದ್ಯಮಗಳು ನೆಲಕಚ್ಚಿದ್ದವು. ಕೊರೋನಾ ಸ್ವಲ್ಪ ಮಟ್ಟಿಗೆ ಕಂಟ್ರೋಲ್ ಆಗ್ತಿದ್ದಂತೆ ಹಲವು ಉದ್ಯಮಗಳು ಮಂದಗತಿಯಲ್ಲಿ ಚೇತರಿಕೆ ಕಾಣ್ತಿವೆ. ಸರ್ಕಾರ ಆರ್ಥಿಕ ಪುನಶ್ಚೇತನಕ್ಕೆ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ.
ಹೋಟೆಲ್, ಮಾಲ್, ಶಾಪ್ಗಳು ದಿನದ 24 ಗಂಟೆ ಓಪನ್ ಮಾಡಲು ಅವಕಾಶ ಕಲ್ಪಿಸಲು ಮುಂದಾಗಿದೆ. 10 ಜನರಿಗಿಂತ ಹೆಚ್ಚು ಕೆಲಸಗಾರರಿರುವ ಅಂಗಡಿ ಮುಂಗಟ್ಟುಗಳಿಗೆ ದಿನದ 24 ಗಂಟೆಯೂ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲು ಮುಂದಾಗಿದೆ.
ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಮುಂಗಟ್ಟುಗಳ ಸ್ಥಾಪನೆ ಕಾಯ್ದೆ ಅಡಿ ಅಧಿಕಾರ ಬಳಸಿ ಕಾರ್ಮಿಕ ಇಲಾಖೆಯ ಅಧೀನ ಕಾರ್ಯದರ್ಶಿ ಸಂಧ್ಯಾ ಎಲ್. ನಾಯಕ್ ಈ ಆದೇಶವನ್ನು ಹೊರಡಿಸಿದ್ದಾರೆ.