ಕೋಳಿ ತಿನ್ಬೇಡಿ…! ಕೊರೋನಾ ಬಳಿಕ ಮತ್ತೊಂದು ಶಾಕ್ !
ಕೊರೋನಾ ಭೀತಿ ನಡುವೆ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ಮತ್ತಷ್ಟು ಆತಂಕ ಉಂಟು ಮಾಡಿದೆ. ಮಧ್ಯಪ್ರದೇಶ, ರಾಜಸ್ಥಾನ ಬಳಿಕ ಕೇರಳದಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಕೊಟ್ಟಾಯಂ ಮತ್ತು ಅಳಪ್ಫುಲದಲ್ಲಿ ಬಾತುಕೋಳಿ ಹಾಗು ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈವರೆಗೆ ಸಾವಿರಾರು ಹಕ್ಕಿಗಳು ಸಾವನ್ನಪ್ಪಿವೆ. ಎರಡೂ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ವೈರಸ್ಗೆ ಬ್ರೇಕ್ ಹಾಕಲು 40 ಸಾವಿರಕ್ಕೂ ಹೆಚ್ಚು ಬಾತುಕೋಳಿಗಳು ಹಾಗೂ ಕೋಳಿ ಮಾರಣಹೋಮಕ್ಕೆ ಸರ್ಕಾರವೇ ಸೂಚಿಸಿದೆ. ರಾಜಸ್ಥಾನದಲ್ಲಿ ಈವರೆಗೂ 500ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿದ್ರೆ, ಮಧ್ಯಪ್ರದೇಶದ ಇಂದೋರ್ನಲ್ಲಿ 50 ಕಾಗೆಗಳು ಮೃತಪಟ್ಟಿವೆ. ಕಾಗೆಗಳಲ್ಲಿ H5N8 ವೈರಸ್ ಪತ್ತೆಯಾಗಿದೆ.
ಕೇರಳದಲ್ಲಿ 25 ಸಾವಿರಕ್ಕೂ ಹೆಚ್ಚು ಬಾತುಕೋಳಿಗಳು ಸಾವನ್ನಪ್ಪಿದೆ, ಹಿಮಾಚಲ ಪ್ರದೇಶದಲ್ಲಿ 1700ಕ್ಕೂ ಹೆಚ್ಚು ಪಕ್ಷಿಗಳು ಸಾವನ್ನಪ್ಪಿದೆ. ಇನ್ನೂ ಕಾಂಗ್ರಾ ಜಿಲ್ಲೆಯ ಪೊಂಗ್ ಡ್ಯಾಮ್ ಬಳಿ ವಲಸಿಗ ಪಕ್ಷಿಗಳು ಮೃತಪಟ್ಟಿವೆ.