ಖಳನಟ ಸೋನುಸೂದ್ ಈಗ ಹೀರೋ..! ‘ಕಿಸಾನ್’ ಚಿತ್ರದ ಲೀಡ್ ರೋಲ್ನಲ್ಲಿ ಸೋನು..!
ಇಡೀ ದೇಶವೇ ಕರೋನಾದಿಂದ ಸಂಕಷ್ಟಕ್ಕೆ ಸಿಲುಕಿದಾಗ ಸಹಾಯ ಮಾಡಲು ಬೀದಿಗೆ ಇಳಿದವರು ಸೋನುಸೂದ್.. ಲಾಕ್ಡೌನ್ ಸಮಯದಲ್ಲಿ ಲಕ್ಷಾಂತರ ನಿರಾಶ್ರಿತರು ತಮ್ಮ ತಮ್ಮ ಗೂಡು ಸೇರಿಕೊಳ್ಳಲು ಸೋನು ಸಹಾಯ ಮಾಡಿದ್ದರು.. ಸಾವಿರಾರು ಜನರಿಗೆ ಆಹಾರದ ಕಿಟ್ ವಿತರಿಸಿದರು.. ವೃದ್ಧರಿಗೆ, ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಬರ್ತಿದ್ದಾರೆ.. ಸಿನಿಮಾಗಳಲ್ಲಿ ಬರೀ ವಿಲನ್ ರೋಲ್ಗಳಲ್ಲಿ ನಟಿಸುತ್ತಿದ್ದ ಸೋನು, ನಿಜ ಜೀವನದಲ್ಲಿ ಹೀರೋ ಆಗ್ಬಿಟ್ಟಿದ್ದಾರೆ.. ಇಂದಿನ ಅವರು ತಮ್ಮ ಸೇವೆ ನಿಲ್ಲಿಸಿಲ್ಲ..
ನಿಜ ಜೀವನದಲ್ಲಿ ಹೀರೋ ಆಗಿರೋ ಸೋನು, ಇನ್ಮುಂದೆ ಸಿನಿಮಾಗಳಲ್ಲಿ ವಿಲನ್ ರೋಲ್ ಮಾಡಿದ್ರೆ, ಪ್ರೇಕ್ಷಕರು ನೋಡೋದಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು.. ನಿಮ್ಮನ್ನ ತೆರೆಮೇಲೆ ಹೊಡೆದರೆ ಪ್ರೇಕ್ಷಕರು ಸುಮ್ಮನಿರ್ತಾರಾ..? ಅಂತ ಆಚಾರ್ಯ ಸಿನಿಮಾ ಶೂಟಿಂಗ್ ವೇಳೆ ಚಿರಂಜೀವಿ ಕೂಡ ಕೇಳಿದ್ರು.. ಸದ್ಯ ರಿಯಲ್ ಲೈಫ್ ಹೀರೋ ಸೋನುಸೂದ್ ರೀಲ್ನಲ್ಲೂ ಹೀರೋ ಆಗುವ ಸುದ್ದಿ ಬಂದಿದೆ.. ಅರ್ಥಾತ್ ಹೀರೋ ಆಗಿ ಕಿಸಾನ್ ಅನ್ನೋ ಚಿತ್ರಕ್ಕೆ ಸೋನು ಸೈನ್ ಮಾಡಿದ್ದಾರೆ.
ಈಗಾಗಲೇ ಸಾಕಷ್ಟು ಜನ ಖಳನಟರು ಹೀರೋ ಆಗಿ ಸಕ್ಸಸ್ ಕಂಡಿದ್ದಾರೆ.. ಕಳೆದೆರಡು ದಶಕಗಳಿಂದ ಹಲವು ಭಾಷೆಗಳಲ್ಲಿ ವಿಲನ್ ರೋಲ್ಗಳಲ್ಲಿ ಮಿಂಚಿದ್ದ ಸೋನು, ಈಗ ಹೀರೋ ಆಗಿ ಬಣ್ಣ ಹಚ್ತಿರೋದು ವಿಶೇಷ.. ಕಿಸಾನ್ ಚಿತ್ರಕ್ಕೆ ನಿವಾಸ್ ಆ್ಯಕ್ಷನ್ ಕಟ್ ಹೇಳ್ತಿದ್ದು, ರಾಜ್ ಶಾಂಡಿಲ್ಯ ಬಂಡವಾಳ ಹೂಡುತ್ತಿದ್ದಾರೆ.. ಕಿಸಾನ್ ಸಿನಿಮಾ ಅಫೀಷಿಯಲ್ ಆಗಿ ಘೋಷಣೆಯಾಗಿದ್ದು, ಶೀಘ್ರದಲ್ಲೇ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ..