ಬೆಂಗಳೂರಿನ ಪುರಾತನ ದೇವಾಲಯದಲ್ಲಿ ನಡೆದು ಹೋಯ್ತು ‘ಆ’ ಮಹಾ ಪವಾಡ..!ಈ ಸ್ಟೋರಿ ಕೇಳಿದ್ರೆ ನಿಮಗಾಗುತ್ತೆ ಅಚ್ಚರಿ.!
ಬೆಂಗಳೂರಿನ ಪುರಾತನ ದೇವಾಲಯವೊಂದರ ಹಿಂಬಾಗದ ಕಟ್ಟಡ ಕಾಮಗಾರಿ ವೇಳೆ ಕುತೂಹಲಕಾರಿ ವಿಶಯವೊಂದು ಬೆಳಕಿಗೆ ಬಂದಿದೆ. ಹೌದು ದೇವಾಲಯದಲ್ಲಿ ೮೦೦ ವರ್ಷಗಳಷ್ಟು ಹಳೆಯ ವಿಗ್ರಹಗಳು ಪತ್ತೆಯಾಗಿವೆ.
ಹೌದು, ಕಲಾಸಿಪಾಳ್ಯದ ಟಿಪ್ಪುಕೋಟೆ ಬಳಿಯಲ್ಲಿರುವ ೧೫೦೦ ವರ್ಷಗಳಿಗೂ ಹಳೆಯ ಜಲಕಂಠೇಶ್ವರ ದೇವಾಲಯದ ಹಿಂಬಾಗದಲ್ಲಿ, ವಾಣಿವಿಲಾಸ ಸರ್ಕಾರಿ ಕಾಲೇಜಿನ ಕಟ್ಟಡ ಕಾಮಗಾರಿ ನಡೆಯುತಿತ್ತು. ಇದೇ ವೇಳೆ ಹಲವು ವಿಗ್ರಹಗಳು ಮದ್ದಗುಂಡುಗಳು ಪತ್ತೆಯಾಗಿವೆ. ವಿಗ್ರಹ ಪತ್ತೆಯಾದ ಬೆನ್ನಲ್ಲೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಇನ್ನೂ ಜಲಕಂಠೇಶ್ವರ ದೇವಾಲು ಅತ್ಯಂತ ಪುರಾತನವಾಗಿದ್ದು, ಇಲ್ಲಿ ಪೂಜೆ ಸಲ್ಲಿಸಿದ್ರೆ ಇಷ್ಟಾರ್ಥಗಳು ಫಲಿಸುತ್ತವಂತೆ. ಟಿಪ್ಪು ಸುಲ್ತಾನ್ ಕೂಡ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತಿದ್ನಂತೆ.
ಇನ್ನೂ ಸದ್ಯ ಕಾಮಗಾರಿ ವೇಳೆ ಅರ್ಧ ಕೆತ್ತಿದ ಶಿವಪಾರ್ವತಿ ಮತ್ತು ನಂದಿ ವಿಗ್ರಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಅಲ್ಲಿ ಕಲ್ಯಾಣಿಯು ಇತ್ತು ಎಂಬ ಮಾಹಿತಿಯೂ ಹೊರಬಿದ್ದಿದ್ದು, ಉತ್ಖನನ ನಡೆದರೆ ಕಲ್ಯಾಣಿ ದೊರಕುವ ಸಾಧ್ಯತೆ ಇದೆ. ಅಲ್ಲದೇ ಈಗಾಗಲೇ ಪತ್ತೆಯಾಗಿರುವ ವಿಗ್ರಹಗಳನ್ನು ಪುರಾತತ್ವ ಇಲಾಖೆಯ ಮ್ಯೂಸಿಯಂ ಗೆ ರವಾನಿಸುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ದೇವಾಲಯದ ಸುತ್ತ ಮುತ್ತ ಮತ್ತಷ್ಟು ವಿಗ್ರಹಗಳು ಸಿಗುವ ಸಾಧ್ಯತೆ ಕೂಡ ಹೆಚ್ಚಿದೆ.
ಈ ಹಿಂದೆ ಕೂಡ ದೇವಾಲಯದ ಬಳಿ ಬಿಬಿಎಂಪಿ ಕಾಮಗಾರಿ ನಡೆಸುವಾಗ ಮದ್ದು ಗುಂಡುಗಳು ಪತ್ತೆಯಾಗಿದ್ವು. ಇದೀಗ ವಿಗ್ರಹಗಳು ಪತ್ತೆಯಾಗಿರುವ ಬೆನ್ನಲ್ಲೇ ಮತ್ತಷ್ಟು ಉತ್ಖನನ ಮಾಡಬೇಕೋ ಬೇಡ್ವೋ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.