ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಸಿಸಿಬಿ ಕಚೇರಿಗೆ ಎ1 ಆರೋಪಿ ಶಿವಪ್ರಕಾಶ್ ಹಾಜರು!
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಪ್ರಕರಣದ ಎ1 ಆರೋಪಿ ಶಿವಪ್ರಕಾಶ್ ಚಪ್ಪಿ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾನೆ.
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಪ್ರಕರಣದ ಎ1 ಆರೋಪಿ ಶಿವಪ್ರಕಾಶ್ ಚಪ್ಪಿ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾನೆ.
ಸುಮಾರು ಒಂದು ಗಂಟೆಗಳಿಂದ ಶಿವಪ್ರಕಾಶ್ ನನ್ನು ಸಿಸಿಬಿ ಪೋಲೀಸ್ ಅಧಿಕಾರಿ ಪುನೀತ್ ವಿಚಾರಣೆ ನಡೆಸಿದ್ದಾರೆ.
ಮೊಬೈಲ್ ಹಾಗೂ ಪತ್ರ ಮುಖೇನ ಶಿವಪ್ರಕಾಶ್ ಚಪ್ಪಿಗೆ ಸಿಸಿಸ್ಬಿ ನೋಟೀಸ್ ನೀಡಿತ್ತು. ಅಲ್ಲದೆ ಕೆಲ ತಿಂಗಳಿನಿಂದಲೂ ಆತನಿಗೆ ಶೋಧ ನಡೆಸಿತ್ತು.ಇತ್ತ ಚಪ್ಪಿ ತಾನು ನ್ಯಾಯಾಲಯದಿಂದ ನೊ ಕ್ವೋರ್ಸಿವ್ ಆರ್ಡರ್ ಪಡೆದುಕೊಂಡಿದ್ದ.
ಎರಡು ದಿನಗಳ ಹಿಂದೆ ಸಿಸಿಬಿ ಕಚೇರಿಗೆ ಆಗಮಿಸಿದ್ದ ಚಪ್ಪಿ ತನಿಖಾಧಿಕಾರಿಗಳಿಲ್ಲದ ಕಾರಣ ಹಿಂದಿರುಗಿದ್ದ. ಇದೀಗ ಮತ್ತೊಮ್ಮೆ ಸಿಸಿಬಿ ನೋಟೀಸ್ ನೀಡಿದ್ದ ಹಿನ್ನೆಲೆ ವಿಚಾರಣೆಗೆ ಹಾಜರಾಗಿದ್ದಾನೆ ಎಂದು ತಿಳಿದುಬಂದಿದೆ.