ಕೆಲಸ ಮಾಡದ ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ವಾರ್ನಿಂಗ್..! ಕೆಡಿಪಿ ಸಭೆಯಲ್ಲೇ ಕ್ಲಾಸ್ ತಗೊಂಡ ಮಿನಿಸ್ಟರ್ ಮಾಧುಸ್ವಾಮಿ..!
ಕೆಲಸ ಮಾಡದ ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ವಾರ್ನಿಂಗ್ ನೀಡಿದ್ದು ಕೆಡಿಪಿ ಸಭೆಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ. ತುಮಕೂರಿನಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೆಲಸ ಮಾಡದ ಅಧಿಕಾರಿಗಳಿಗೆ ಬಹಿರಂಗವಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ.
ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತಿಯಾ ಗೊತ್ತಾ.? ಇಲ್ಲಿಗೆ ಕತ್ತೆ ಕಾಯೋಕೆ ಬಂದಿದ್ದೀಯಾ..? ನಿನ್ ಹೆಂಡ್ತಿ ಬಟ್ಟೆಯನ್ನು ಯಾವ್ ಸೋಪಲ್ಲಿ ತೊಳಿತಿಯಾ..? ಇವರೆಲ್ಲರನ್ನೂ ಸಸ್ಪೆಂಡ್ ಮಾಡ್ರೀ.. ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ, ಎಇಇ ರಂಗಸ್ವಾಮಿಗೆ ಹೇಳಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಸಚಿವರು, ಕೆಲಸ ಮಾಡದೆ ಅಧಿಕಾರಿಗಳು ಜಿಲ್ಲೆಯನ್ನೇ ಸಾಯಿಸುತ್ತಿದ್ದಾರೆ ಎಂದರು.ಜಿಲ್ಲಾಪಂಚಾಯ್ತಿ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ನಡೆದೇ ಇಲ್ಲ. ಕಳೆದ 4 ರಂದೇ ನಾನು ಸೂಚನೆ ನೀಡಿದ್ದೆ ಆದ್ರೂ ಯಾಕೆ ನೀವು ಕಂಟ್ರಾಕ್ಟರ್ ನ ಕರೆಸಿ ಕೆಲಸ ಒಪ್ಪಿಸಲಿಲ್ಲ. ಸಭೆ ನಡೆಯುವುದಿಲ್ಲ ಎಂಬ ಉದಾಸೀನತೆ ತಾಳಿರುವ ಅಧಿಕಾರಿಗಳು ಜಿಲ್ಲೆಯಲ್ಲಿ ಒಂದೇ ಒಂದು ಕಾಮಗಾರಿಯನ್ನೂ ಸಮರ್ಪಕವಾಗಿ ಮಾಡಿಲ್ಲ ಎಂದು ಕಿಡಿಕಾಡಿದ್ದಾರೆ.