ರಾತ್ರೋರಾತ್ರಿ 142 ಪೊಲೀಸ್​ ಇನ್ಸ್​ಪೆಕ್ಟರ್​ಗಳ ವರ್ಗಾವಣೆ…! ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ಎಮ್​ಎಲ್​ಎಗಳ ಕಿಡಿ…!

ರಾತ್ರೋರಾತ್ರಿ 142 ಪೊಲೀಸ್​ ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಲಾಗಿದೆ. ಇನ್ಸ್​ಪೆಕ್ಟರ್​ಗಳ ವರ್ಗಾವಣೆಗೆ ಬಿಜೆಪಿ ಎಮ್​ಎಲ್​ಎಗಳ ಆಕ್ರೋಶ ವ್ಯಕ್ತವಾಗಿದೆ. ಗೃಹ ಸಚಿವ ಬಸವರಾಜಬೊಮ್ಮಾಯಿ ವಿರುದ್ಧ ಎಮ್​ಎಲ್​ಎಗಳು ವರ್ಗಾನಣೆಯ ವಿರುದ್ಧ ಕಿಡಿಗಾಡಿದ್ದಾರೆ.

ಮನಬಂದಂತೆ ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡುವುದು ತಪ್ಪು, ಇದು ವರ್ಗಾವಣೆ ಸಮಯ ಅಲ್ಲದಿದ್ದರೂ ಟ್ರಾನ್ಸ್​ಫರ್​ ಮಾಡಿದ್ದಾರೆ ಎಂದು ವರ್ಗಾವಣೆಯಾದ ಇನ್ಸ್​ಪೆಕ್ಟರ್​​ ಅಧಿಕಾರಿಗಳು ಗೃಹ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿಢೀರ್​ ವರ್ಗಾವಣೆಯಲ್ಲಿ ಏನೋ ಭ್ರಷ್ಟಾಚಾರ ನಡೆದಿದೆ, ತಾವು ಹೇಳಿದ ಇನ್ಸ್​ಪೆಕ್ಟರ್ಸ್​ ವರ್ಗಾಯಿಸಿಲ್ಲ ಎಂದು ಕೆಲವು ಇನ್ಸ್​ಪೆಕ್ಟರ್​ಗಳು ಆರೋಪಿಸಿದ್ದಾರೆ. ಈ ಬಗ್ಗೆ ಕೂಡಲೇ ಪಟ್ಟಿ ತಡೆಹಿಡಿಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​​ಗೆ ಒತ್ತಾಯಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *