ಇನ್ಮುಂದೆ ಬೆಂಗಳೂರು ಕಮಿಷನರ್ ಹುದ್ದೆ ಹೆಸರು ಬದಲಾಗಲಿದೆ….!
ಬಿಬಿಎಂಪಿ ನೂತನ ಕಾಯ್ದೆಗೆ ಗೌರ್ನರ್ ಅನುಮೋದನೆ ಸಿಗ್ತಿದ್ದಂತೆ ಅನುಷ್ಠಾನ ಕಾರ್ಯ ಆರಂಭವಾಗಿದೆ. ಜನವರಿ 11ರಿಂದಲೇ ಬಿಬಿಎಂಪಿ ಕಾಯ್ದೆ ಅನುಷ್ಠಾನಕ್ಕೆ ಬರ್ತಿದ್ದು, ಇನ್ಮುಂದೆ ಬಿಬಿಎಂಪಿ ಕಮಿಷನರ್ ಹುದ್ದೆ ಹೆಸರು ಚೀಫ್ ಕಮಿಷನರ್ ಆಗಿ ಬದಲಾವಣೆ ಆಗಲಿದೆ.
ಎಲ್ಲ ಝೋನ್ಗಳಿಗೂ ವಲಯವಾರು ಕಮಿಷನರ್ಗಳ ನೇಮಕ ಆಗಲಿದೆ. ಇನ್ಮುಂದೆ ಪಾಲಿಕೆಯಲ್ಲಿ ಐಎಎಸ್ ಅಧಿಕಾರಿಗಳ ದರ್ಬಾರ್ ನಡೆಯಲಿದೆ. ಹಾಲಿ ಜಂಟಿ ಆಯುಕ್ತರ ಸ್ಥಾನಕ್ಕೆ ಐಎಎಸ್ ಅಧಿಕಾರಿಗಳ ನೇಮಕ ಆಗಲಿದೆ.
ಹಾಲಿ ಜಂಟಿ ಆಯುಕ್ತರ ಸ್ಥಾನದಲ್ಲಿ ನಾನ್ ಐಎಎಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ನೂತನ ಕಾನೂನು ಜಾರಿಯಿಂದ ನಾನ್ ಐಎಎಸ್ ಅಧಿಕಾರಿಗಳು ಜೆಸಿ ಸ್ಥಾನವನ್ನು ತೆರವು ಮಾಡಬೇಕಾಗುತ್ತದೆ. ನೂತನ ಕಾನೂನು ಜಾರಿಯಿಂದ ನಾನ್ ಐಎಎಸ್ ಅಧಿಕಾರಿಗಳಿಗೆ ಕಂಟಕ ಎದುರಾಗಿದ್ದು, ಜೆಸಿ ಸ್ಥಾನದಿಂದ ಬಿಡುಗಡೆಯಾಗಬೇಕಾದ ಅನಿವಾರ್ಯವಾಗಿದೆ..