ರಾಜ್ಯಕ್ಕೆ ಇಂದು ಸಂಜೆ ಅಥವಾ ನಾಳೆ ವ್ಯಾಕ್ಸಿನ್…! ಕೇಂದ್ರ ಸರ್ಕಾರದಿಂದ ಬರಲಿದೆ 13.90 ಲಕ್ಷ ವ್ಯಾಕ್ಸಿನ್..!
ಅಂತೂ ಇಂತು ರಾಜ್ಯಕ್ಕೆ ಕೊರೋನಾ ವ್ಯಾಕ್ಸಿನ್ ಬಂದಿದೆ. ಸೋಮವಾರವೇ ಆರೋಗ್ಯ ಇಲಾಖೆ ವ್ಯಾಕ್ಸಿನ್ ಪೂರೈಕೆ ಮಾಡಲಿದೆ. ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಡಾಕ್ಟರ್ಸ್, ನರ್ಸ್, ಪೊಲೀಸರಿಗೆ ಮೊದಲು ಲಸಿಕೆ ನೀಡಲಾಗುತ್ತದೆ. ನಾಳೆ ಅಥವಾ ನಾಡಿದ್ದು ರಾಜ್ಯಕ್ಕೆ 13.90 ಲಕ್ಷ ವ್ಯಾಕ್ಸಿನ್ ಬರ್ತಿದೆ. ಅದನ್ನ ಎಲ್ಲಾ ಜಿಲ್ಲೆಗಳಿಗೆ ಸರಬರಾಜು ಮಾಡಿ ಸೋಮವಾರದಿಂದ ಲಸಿಕೆ ನೀಡ್ತೇವೆ ಎಂದಿದ್ದಾರೆ.
ರಾಜ್ಯಕ್ಕೆ ಇಂದು ಸಂಜೆ ಅಥವಾ ನಾಳೆ ವ್ಯಾಕ್ಸಿನ್ ಪೂರೈಕೆಯಾಗಲಿದೆ. ಕೇಂದ್ರ ಸರ್ಕಾರದಿಂದ 13.90 ಲಕ್ಷ ವ್ಯಾಕ್ಸಿನ್ ಬರಲಿದೆ. ಸೋಮವಾರವೇ ವ್ಯಾಕ್ಸಿನ್ ಪೂರೈಕೆಗೆ ಸರ್ಕಾರ ಸಜ್ಜುಮಾಡಿದ್ದು, ಮೊದಲ ಹಂತದಲ್ಲಿ 13 ಲಕ್ಷದ 90 ಸಾವಿರ ಲಸಿಕೆ ಪೂರೈಕೆ ಮಾಡಲು ನಿರ್ಧರಿಸಿದೆ.
ಡಾಕ್ಟರ್ಸ್, ನರ್ಸ್, ಪೊಲೀಸರಿಗೆ ಮೊದಲು ಲಸಿಕೆ ನೀಡಲಾಗುತ್ತಿದ್ದು, ಒಟ್ಟು 6,30,524 ಅರೋಗ್ಯ ಕಾರ್ಯಕರ್ತರನ್ನು ಆರೋಗ್ಯ ಇಲಾಖೆ ಗುರುತಿಸಿದೆ. ಹಾಗೂ 2,73,211 ಸರ್ಕಾರಿ ಹಾಗೂ 3,57,313 ಖಾಸಗಿ ಸಿಬ್ಬಂದಿಗೆ ಲಸಿಕೆ ನೀಡಲು ಮುಂದಾಗಿದೆ.
ಕೊರೋನಾ ಲಸಿಕೆ ನೀಡಲು 9,807 ವ್ಯಾಕ್ಸಿನೇಟರ್ಸ್ಗೆ ತರಬೇತಿ ನೀಡಿದ್ದು, ರಾಜ್ಯದಲ್ಲಿ ಆರೋಗ್ಯ ಇಲಾಖೆ 28,427 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿದೆ. ರಾಜ್ಯಕ್ಕೆ ಒಟ್ಟು 24 ಲಕ್ಷ ಸಿರಿಂಜ್, 64 ಐಸ್ ರೆಫ್ರಿಜರೇಟರ್ (ILR) ಬಂದಿದ್ದು. ಎರಡನೇ ಹಂತದಲ್ಲಿ 31 ಲಕ್ಷ ಸಿರಿಂಜ್ಗಳು ಬರಲಿವೆ