ಗೋಹತ್ಯೆ ನಿಷೇಧದಡಿ ಬಿತ್ತು ಮೊದಲ ಕೇಸ್…! ಚಿಕ್ಕಮಗಳೂರಿನಲ್ಲಿ ದಾಖಲಾಯ್ತು ಮೊದಲ ಪ್ರಕರಣ…!
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ಬಂದ ಗೋಹತ್ಯೆ ನಿಷೇಧ ಕಾಯ್ದೆಯಡಿ ಇದೇ ಮೊದಲ ಪ್ರಕರಣ ಚಿಕ್ಕಮಗಳೂರಲ್ಲಿ ಮೊದಲ ಕೇಸ್ ದಾಖಲಾಗಿದೆ.
ಹಾವೇರಿಯಿಂದ ಶೃಂಗೇರಿ ಮೂಲಕ ಮಂಗಳೂರಿಗೆ ಅಕ್ರಮವಾಗಿ 2 ಕಂಟೇನರ್ನಲ್ಲಿ 34 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಶೃಂಗೇರಿಯ ತನಿಕೋಡು ಚೆಕ್ಪೋಸ್ಟ್ ಬಳಿ ಯುವಕರ ಗುಂಪು ತಡೆದಿದೆ. ಈ ವೇಳೆ ಒಬ್ಬ ಚಾಲಕ ಪರಾರಿಯಾಗಿದ್ದು ಮತ್ತೊಬ್ಬ ಚಾಲಕನ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ.
ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಂಟೇನರ್ ಸಮೇತ ಜಾನುವಾರು ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪರಾರಿಯಾಗಿರೋ ಮತ್ತೊಬ್ಬ ಚಾಲಕನಿಗೆ ಪೊಲೀಸರ ಶೋಧಕಾರ್ಯ ನಡೆಯುತ್ತಿದೆ.